ನನ್ನ ನಂಬಿ, ಕೆಟ್ಟ ಫ್ಯಾಟ್ ಅಲ್ಲ ಗೋಡಂಬಿ!

ಬ್ರೆಜಿಲ್ ಮೂಲದ ಗೇರು ತನ್ನ ರುಚಿ ಹಾಗೂ ಆರೋಗ್ಯ ಲಾಭಗಳಿಂದಾಗಿ ಜಗತ್ತಿನಾದ್ಯಂತ ಜನಪ್ರಿಯತೆ ಪಡೆದಿದೆ. ಗೋಡಂಬಿಯ ಗೆಳೆತನ ಮಾಡಿ ನೋಡಿ. ತಾನೊಬ್ಬ ಗುಡ್ ಫ್ರೆಂಡ್ ಎಂದು ಅದು ನಿರೂಪಿಸದಿದ್ದರೆ ಕೇಳಿ. 
Health benefits of cashew nuts
ಬಾದಾಮಿ, ದ್ರಾಕ್ಷಿ ಓಕೆ, ಆದ್ರೆ ಗೋಡಂಬಿ ತಿಂದ್ರೆ ಗುಂಡಮ್ಮ ಆಗ್ತೀಯಾ ಅಂತ ಹೆದರಿಸೋರು ಬಹಳಷ್ಟು ಜನ. ಹೀಗಾಗಿ ಗೋಡಂಬಿ ಗೊಡವೆಯೇ ಬೇಡ ಎಂದು ದೂರವಿರೋರೆ ಜಾಸ್ತಿ. ಆದ್ರೆ, ಗೋಡಂಬಿ ವಿಷಯದಲ್ಲಿ ಹೆಚ್ಚಿನ ಜನರ ತಿಳಿವಳಿಕೆ ತಪ್ಪು. 

ಗೋಡಂಬಿ ಲೋ ಫ್ಯಾಟ್ ಆಗಿದ್ದು, ಓಲಿಕ್ ಆ್ಯಸಿಡ್, ಫೈಬರ್, ಪ್ರೋಟೀನ್, ಮ್ಯಗ್ನೀಶಿಯಂ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿದೆ. ಇವೆಲ್ಲವೂ ಆರೋಗ್ಯಕ್ಕೆ  ಒಳ್ಳೆಯದೇ. ಇನ್ನು ಇದರಲ್ಲಿರುವ ಫೈಟೋಸ್ಟಿರಾಲ್ಸ್ ಕೆಟ್ಟ ಕೊಬ್ಬನ್ನು ದೇಹ ಶೇಖರಿಸದಂತೆ ನೋಡಿಕೊಳ್ಳುತ್ತದೆ. ಗೋಡಂಬಿಯು ವಿಟಮಿನ್ ಎ, ಸಿ ಹಾಗೂ ಇ ಜೊತೆಗೆ ಝಿಂಕ್, ಕಾಪರ್‌ಗಳನ್ನು ಹೊಂದಿದ್ದು,  ಇವು ಕೂದಲು ಹಾಗೂ ಚರ್ಮದ ಕಾಂತಿ ಹೆಚ್ಚಿಸುತ್ತವೆ.

ಡ್ರೈ ಫ್ರೂಟ್ಸ್ ಮಾಡುತ್ತೆ ಮಕ್ಕಳನ್ನು ಸ್ಟ್ರಾಂಗ್....

ಕೊಬ್ಬಿಗೆ ರಾಮಬಾಣ

ಗೋಡಂಬಿಯಲ್ಲಿ ಒಮೆಗಾ 3 ಫ್ಯಾಟಿ ಆ್ಯಸಿಡ್ ಹೆಚ್ಚಿದ್ದು, ಇದು ಮೆಟಾಬಾಲಿಸಂ ಹೆಚ್ಚಿಸಿ, ಅಧಿಕ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಆದರೆ, ನೀವು ಹಸಿಯಾದ, ಉಪ್ಪು ಖಾರ ಹಾಕಿಲ್ಲದ ಗೋಡಂಬಿ ತಿನ್ನಬೇಕು. ವಾರಕ್ಕೆರಡು ದಿನ ಗೋಡಂಬಿ ತಿನ್ನುವುದರಿಂದ ಫಿಟ್ ಹಾಗೂ ಆರೋಗ್ಯವಂತರಾಗಿ ಇರುವಿರಿ. 

ಖುಷಿ ಹೆಚ್ಚಿಸುವ ಗೇರು

ಗೋಡಂಬಿಯಲ್ಲಿರುವ ಎಲ್- ಟ್ರಿಪ್ಟೋನ್ ಎಂಬ ಅಮೈನೋ ಆ್ಯಸಿಡ್ ದೇಹದಲ್ಲಿ ಸೆರಟೋನಿನ್ ಹಾಗೂ ನಿಯಾಸಿನ್ ಹಾರ್ಮೋನ್‌ಗಳ ಬಿಡುಗಡೆಗೆ ಕಾರಣವಾಗುತ್ತದೆ. ಇದು ನಿಮ್ಮ ಒತ್ತಡಗೊಂಡ ನರಗಳನ್ನು ಶಾಂತಗೊಳಿಸಿ, ಮನಸ್ಸಿಗೆ ಸಂತೋಷ ನೀಡುತ್ತದೆ.

ಕಣ್ಣಿನ ಆರೋಗ್ಯ

ನಮ್ಮ ಕಣ್ಣುಗಳು ಹೆಚ್ಚಿನ ಸಮಯ ಲ್ಯಾಪ್‌ಟಾಪ್, ಮೊಬೈಲ್ ಫೋನ್ ಹಾಗೂ ಟಿವಿ ಸ್ಕ್ರೀನ್‌ಗಳ ಮೇಲೆ ನೆಟ್ಟಿರುತ್ತದೆ. ಹೀಗೆ ಇಡೀ ದಿನ ಸ್ಕ್ರೀನ್ ನೋಡುತ್ತಿದ್ದರೆ, ದೃಷ್ಟಿಗೆ ಪೆಟ್ಟು. ಆದರೆ, ಗೋಡಂಬಿಯಿಂದ ಈ ಸಮಸ್ಯೆಗೊಂದು ಪರಿಹಾರವಿದೆ. ಇವುಗಳಲ್ಲಿರುವ ಝಿಯಾಕ್ಸಾಂಥಿನ್ ಎಂಬ ಆ್ಯಂಟಿ ಆಕ್ಸಿಡೆಂಟ್ ರೆಟಿನಾ ಹಾಗೂ ರಕ್ತದಲ್ಲಿ ಸುಲ‘ವಾಗಿ ಸೇರಿಕೊಂಡು ಕಣ್ಣಿನೊಳಗೆ ರಕ್ಷಣಾ ಕವಚ ನಿರ್ಮಿಸಿ, ಕಣ್ಣುಗಳ ಆರೋಗ್ಯ ಕಾಪಾಡುತ್ತದೆ.

ಸುಲಭ ಜೀರ್ಣಕ್ರಿಯೆ
ಗೋಡಂಬಿಯಲ್ಲಿರುವ ನಾರಿನಂಶವು ಪಚನಕ್ರಿಯೆಯನ್ನು ಸುಲಭವಾಗಿಸುತ್ತದೆ. ಇದು ನ್ಯೂಕ್ಲಿಕ್ ಆ್ಯಸಿಡ್ ಉತ್ಪಾದಿಸಿ, ಗ್ಯಾಸ್ ಆಗದಂತೆ ಆಹಾರ ಜೀರ್ಣವಾಗಲು ಸಹಕರಿಸುತ್ತದೆ.
-    ಆರೋಗ್ಯಕರ ಮೂಳೆ ಹಾಗೂ ನರಗಳಿಗಾಗಿ
ಗೋಡಂಬಿಯಲ್ಲಿ ಹೇರಳವಾಗಿರುವ ಮೆಗ್ನೀಶಿಯಂ, ನಿಮ್ಮ ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ. ಇದು ಕ್ಯಾಲ್ಶಿಯಂ ಹೆಚ್ಚಾಗಿ ನರ ಕೋಶಗಳಿಗೆ ಬರುವುದನ್ನು ತಡೆಯುತ್ತದೆ. ಈ ಮೂಲಕ ನರಗಳು ಹಾಗೂ ಸ್ನಾಯುಗಳನ್ನು ಶಾಂತವಾಗಿರಿಸುತ್ತದೆ. 

Latest Videos
Follow Us:
Download App:
  • android
  • ios