ಏರ್ಪೋಟ್ ಲುಕ್, ಪಾರ್ಟಿ, ಕ್ಯಾಷುಯಲ್ ಲುಕ್ ಹೀಗೆ ಒಂದೊಂದು ಲುಕ್‌ಗೂ ಒಂದೊಂದು ಬ್ಯಾಗ್ ಕ್ಯಾರಿ ಮಾಡುವ ದೀಪಿಕಾ ಬ್ಯಾಗ್‌ನಲ್ಲಿ ಏನೆಲ್ಲಾ ಇದೆ ಎಂದು ಬಿಚ್ಚಿಟ್ಟಿದ್ದಾರೆ.........

ಬಾಲಿವುಡ್ ಮಾಯ ಜಗತ್ತಿನಲ್ಲಿ ಬ್ಯಾಗ್ ಹಿಡಿದುಕೊಳ್ಳದೇ ಯಾರೂ ಹೊರ ಬರುವುದಿಲ್ಲ, ಈ ಸಾಲಿನಲ್ಲಿ ಕೇವಲ ಹೀರೋಯಿನ್ಸ್ ಎಂದು ತಿಳ್ಕೋಬೇಡಿ, ರಣವೀರ್ ಸಿಂಗ್ ಕೂಡ ಕೈಯಲ್ಲೊಂದು ಬ್ಯಾಗ್ ಹಾಗೂ ಕೂಲಿಂಗ್ ಗ್ಲಾಸ್ ಇಲ್ಲದೆ ಹೊರ ಬರುವುದಿಲ್ಲ.

ಇನ್ನು ಯೂಟ್ಯೂಬ್‌ನಲ್ಲಿ ‘What's in my bag with Deepika padukone’ ಇದೀಗ ಟ್ರೆಂಡ್‌ನಲ್ಲಿದೆ. ಇಗಾಗಲೇ ಹಲವಾರು ಸೆಲೆಬ್ರೆಟಿಗಳು ತಮ್ಮ ಬ್ಯಾಗ್‌ನಲ್ಲಿ ಏನಿದೆ ಎಂಬ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಇದೀಗ ಡಿಪ್ಪಿಯೂ ಈ ಸಾಲಿಗೆ ಸೇರಿದ್ದಾರೆ.

ಯೂಟ್ಯೂಬ್‌ನ ಪ್ರಖ್ಯಾತ ಚಾನೆಲ್ ಪಿಂಕ್‌ವಿಲಾದಲ್ಲಿ ದೀಪಿಕಾ ತನ್ನ ಬ್ಯಾಗಲ್ಲೇನಿದೆ ಎಂದು ತೋರಿಸಿದ್ದಾರೆ...... ಎಂಬ ನಿಮಗೂ ಕುತೂಹಲ ಅಲ್ವಾ? ಇಲ್ಲದೆ ನೋಡಿ...

ಇರುವುದೇನು? ದೀಪಿಕಾಳ ಬ್ಯಾಗ್ ಯಾಕೆ ಯಾವಾಗಲೂ ದೊಡ್ಡದಾಗಿರುತ್ತದೆ ಎನ್ನುವುದಕ್ಕೆ ಅವರೇ ಉತ್ತರಿಸಿದ್ದಾರೆ. ಅದು ಏನು ಗೊತ್ತಾ? ದೇಶದ ಯಾವ ಮರುಳುಗಾಡು ಪ್ರದೇಶಕ್ಕೆ ಹೊದರೂ ಜೀವಿಸಬಹುದಾದ ವಸ್ತುಗಳು ದೀಪಿಕಾ ಬ್ಯಾಗಲ್ಲಿ ಇರುತ್ತಂತೆ. ಆ ಕಾರಣದಿಂದಾನೇ ಬ್ಯಾಗ್ ಅಷ್ಟು ಭಾರವಿರುತ್ತದೆ. ಅದ್ರಲ್ಲಿ ಏನೇನಿರುತ್ತೆ?

 • ವಾಲೆಟ್ (ಪರ್ಸ್)
 • ಬಾಯಿ ಫ್ರೆಷ್ ಮಾಡಿಕೊಳ್ಳಲು ಮಿಂಟೋಸ್
 • ಫೋನ್ ಚಾರ್ಜರ್
 • ಬಾಚಣಿಗೆ
 • ಸನ್‌ಗ್ಲಾಸ್
 • ಹೇರ್ ಸ್ಪ್ರೇ
 • ಟಿಶ್ಯೂ ಪೇಪರ್
 • ಐ ಮಾಸ್ಕ್
 • ಟ್ಯಾಂಪೂನ್
 • ಅಗತ್ಯ ಮಾತ್ರೆಗಳು
 • ನೇಲ್ ಪಾಲಿಷ್ ರಿಮೂವರ್
 • ಟೈಡ್
 • ವೆಟ್‌ವೈಪ್
 • ಲೆನ್ಸ್ ಕ್ಲೀನರ್
 • ಸೇಫ್ಟಿ ಪಿನ್ಸ್
 • ಸ್ಟೆಪ್ಸಿಲ್ಸ್
 • ಮೋಸ್ಟ್ ಇಂಪಾರ್ಟೆಂಟ್ ಮನೆ ಬೀಗ
 • ಪೆನ್ಸಿಲ್.
 • ಪೆನ್
 • ಪರ್ಫ್ಯೂಮ್

ಯಾರ ಬ್ಯಾಗ್ ಕದಿಯಲು ಇಷ್ಟ ಪಡುತ್ತೀರಾ ಎಂದು ಕೇಳಿದ್ದಕ್ಕೆ ‘ನಾನು ಯಾರ ಬ್ಯಾಗನ್ನೂ ಕದಿಯೋಲ್ಲ. ಏಕೆಂದರೆ ನನ್ನ ಹತ್ರ ಏನಿದ್ಯೋ ಅದು ಬೇರೆ ಯಾರೊಂದಿಗೂ ಇರಲು ಸಾಧ್ಯವಿಲ್ಲ...’ ಎಂದಿದ್ದಾರೆ.

 

ಬ್ಯಾಗ್‌ನಲ್ಲಿ ಯಾವ ಮೂರು ವ್ಯಕ್ತಿಗಳನ್ನು ಕ್ಯಾರಿ ಮಾಡುತ್ತೀರೆಂದು ಕೇಳಿದ್ದಕ್ಕೆ ‘ನನ್ನ ಗಂಡ, ನನ್ನ ತಂಗಿ ಹಾಗು ನಮ್ಮ ಅಮ್ಮ...’ ಎಂದಿದ್ದಾರೆ.

ಬ್ಯಾಗ್ ನಲ್ಲಿ ಯಾವ ವಸ್ತು ಇಲ್ಲದೇ ಬದುಕಲು ಸಾಧ್ಯವಿಲ್ಲ ಎಂದಾಗ ಡಿಪ್ಪಿ, ಹೇಳಿದ್ದೇನು ಗೊತ್ತಾ? ಮನೆ ಕೀ, ಫೋನ್ ಚಾರ್ಜರ್ ಹಾಗೂ ವ್ಯಾಲೇಟ್..’ ಎಂದಿದ್ದಾರೆ.