ಮನಸ್ಸಿಗೂ, ಶರೀರಕ್ಕೆ ಹಿತ ಡಾರ್ಕ್ ಚಾಕೋಲೇಟ್...

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Jan 2019, 1:27 PM IST
Dark Chocolate is good for health at to some extent
Highlights

ಚಾಕೋಲೇಟ್ ದೇಹಕ್ಕೆ ಅಗತ್ಯವೇ ಅಲ್ಲ. ಅದರಲ್ಲಿಯೂ ಹೆಚ್ಚೆಚ್ಚು ತಿಂದರೆ ಇದು ದೇಹದ ಕಬ್ಬಿಣಾಂಶವನ್ನು ಹೀರಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಆದರೆ, ಮಿತಿಯಲ್ಲಿ ಡಾರ್ಕ್ ಚಾಕೋಲೇಟ್ ತಿಂದರೆ ಒಳ್ಳೆಯದು. ಹೇಗೆ?

ಚಾಕ್ಲೆಟ್ ತಿಂದರೆ  ಹಲ್ಲು ಹುಳುಕಾಗುತ್ತದೆ ಅನ್ನೋದು ಗೊತ್ತು, ಆದರೆ ಡಾರ್ಕ್ ಚಾಕಲೇಟ್ ತಿಂದರೆ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಗೊತ್ತಾ? ಶೀತ, ನೆಗಡಿಯಿಂದ ಹಿಡಿದು ಹೃದಯದ ಆರೋಗ್ಯದವರೆಗೂ ಎಲ್ಲ ಸಮಸ್ಯೆಯನ್ನು ಇದು ನಿವಾರಿಸಬಲ್ಲದು.

- ಡಾರ್ಕ್ ಚಾಕಲೇಟ್ ತಿನ್ನುವುದರಿಂದ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಡಾರ್ಕ್ ಚಾಕೊಲೇಟ್ ರಕ್ತದ ಹರಿವನ್ನು ಸುಗಮಗೊಳಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. 
- ಡಾರ್ಕ್ ಚಾಕಲೇಟ್ ಮೆದುಳಿಗೆ ಮತ್ತು ಹೃದಯಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದರಿಂದ ಮೆದುಳು ಚುರುಕಾಗುತ್ತದೆ. ಜೊತೆಗೆ ಇದು ಪಾರ್ಶ್ವವಾಯುವನ್ನು ತಡೆಯುತ್ತದೆ. 
- ನೆಗಡಿ ಇದ್ದರೆ ಚಾಕಲೇಟ್‌ ಆಧಾರಿತ ಔಷಧಿ ಸೇವಿಸಿದರೆ, ಎರಡು ದಿನದಲ್ಲಿ ನೆಗಡಿ ಕಡಿಮೆಯಾಗುತ್ತದೆ. 
- ಕೊಕೊ ಅಂಶ ಡಾರ್ಕ್ ಚಾಕಲೇಟ್‌ನಲ್ಲಿ ಹೆಚ್ಚಾಗಿರುವುದರಿಂದ ಮನಸಿನ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. 
- ಡಾರ್ಕ್ ಚಾಕಲೇಟ್ ರಕ್ತನಾಳಗಳನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಟೈಪ್ 2 ಮಧುಮೇಹದ ವಿರುದ್ಧ ಹೋರಾಡುತ್ತದೆ.
- ಈ ಚಾಕಲೇಟ್ ಸೇವಿಸುವುದರಿಂದ ಒತ್ತಡ, ಉರಿಯೂತಗಳು ಕಡಿಮೆಯಾಗಿ ಜ್ಞಾಪಕ ಶಕ್ತಿ ಹೆಚ್ಚುತ್ತದೆ. 

ಸಿಂಪಲ್ ಟೇಸ್ಟಿ ಕೇಕ್ ಮಾಡೋ ರೆಸಿಪಿ ಇಲ್ಲಿದೆ...
ರಾತ್ರಿ ಮಧುರವಾಗಿರಬೇಕೆಂದರೆ ಇವಕ್ಕೆ ನೋ ಎನ್ನಿ
ತ್ವಚೆಯ ಸೌಂದರ್ಯಕ್ಕೆ ಬೀಟ್‌ರೂಟ್ ಮದ್ದು

 

loader