ರಕ್ತ ವೃದ್ಧಿಗೆ ಬೇಕು ಬೀಟ್‌ರೂಟ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Jan 2019, 3:58 PM IST
7 health benefits of Beetroot
Highlights

 

ದಿನ ನಿತ್ಯ ಆಹಾರದಲ್ಲಿ ಕೆಲವು ಸೊಪ್ಪು, ತರಕಾರಿಗಳನ್ನು ತಪ್ಪದೇ ಬಳಸಬೇಕು. ಆಗ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸುಲಭವಾಗಿ ದೊರೆಯುತ್ತದೆ. ಅದರಲ್ಲಿಯೂ ಬೀಟ್‌ರೂಟನ್ನು ಹೆಚ್ಚೆಚ್ಚು ಬಳಸಬೇಕು. ಏಕೆ?

ಬೀಟ್‌ರೂಟ್ ದೈನಂದಿನ ಅಡುಗೆಗೆ ಬಳಸುವ ಮುಖ್ಯ ತರಕಾರಿಗಳಲ್ಲಿ ಒಂದು. ಇದನ್ನು ಕೇವಲ ಪಲ್ಯ, ಸಾರು ಮಾಡಿ ಮಾತ್ರವಲ್ಲ ಹಸಿಯಾಗಿ ತಿಂದರೂ ಆರೋಗ್ಯಕ್ಕೆ ಉತ್ತಮ, ಜೊತೆಗೆ ಜ್ಯುಸ್ ಮಾಡಿ ಕುಡಿದರೂ ಉತ್ತಮ. ಇದರ ಪ್ರಯೋಜನಗಳು ಸಾವಿರಾರು....ಏನವು?

  • ರಕ್ತದೊತ್ತಡ ನಿಯಂತ್ರಿಸಲು ಬೀಟ್‌ರೂಟ್ ರಸ ಉತ್ತಮ. ಇದರಲ್ಲಿರುವ ನೈಸರ್ಗಿಕ ನೈಟ್ರೇಟ್ ಅಂಶ ರಕ್ತನಾಳಗಳಲ್ಲಿ ನೈಟ್ರಿಕ್ ಆಕ್ಸೈಡ್ ಅಂಶ ಹೆಚ್ಚಿಸಲು ನೆರವಾಗುತ್ತದೆ.
  • ಈ ತರಕಾರಿಯಲ್ಲಿ ಕಾರ್ಬೋಹೈಡ್ರೇಟ್ ಅಧಿಕವಿರುವುರುವುದರಿಂದ ಇದನ್ನು ತಿಂದರೆ ದೇಹದ ಶಕ್ತಿ ಹೆಚ್ಚುತ್ತದೆ.
  • ಬೀಟ್‌ರೂಟ್‌ನಲ್ಲಿ ರಕ್ತ ಶುದ್ಧೀಕರಿಸುವ ಅಂಶ ಹೆಚ್ಚಿದೆ. ಅಲ್ಲದೆ ಇದರಲ್ಲಿ ವಿಟಮಿನ್ ಸಿ ಅಂಶವೂ ಇದ್ದು, ಚರ್ಮದ ಕಾಂತಿಯನ್ನು ದ್ವಿಗುಣಗೊಳಿಸುತ್ತದೆ.
  • ಬೀಟ್‌ರೂಟ್ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಅಲ್ಲದೆ ಬೀಟ್‌ರೂಟ್ ದೇಹದಲ್ಲಿ ರಕ್ತಸಂಚಾರ ಸುಗಮವಾಗುವಂತೆ ನೋಡಿಕೊಳ್ಳುತ್ತದೆ.
  • ಇದರಲ್ಲಿ ಫೈಬರ್ ಅಂಶವೂ ಹೇರಳವಾಗಿರುವುದರಿಂದ ಜೀರ್ಣಕ್ರಿಯೆಗೂ ಒಳ್ಳೆಯದು. ಅಲ್ಲದೆ, ಮಲಬದ್ಧತೆ ಇರುವವರಿಗೂ ಇದರ ಸೇವನೆ ಉತ್ತಮ.
  • ಫೋಲಿಕ್ ಆ್ಯಸಿಡ್ ಕೊರತೆ ಕಾಡುತ್ತಿದ್ದರೆ, ಮಾತ್ರೆ ತೆಗೆದುಕೊಳ್ಳುವ ಬದಲು ಪ್ರತಿನಿತ್ಯ ಬೀಟ್‌ರೂಟ್ ಜ್ಯೂಸ್ ಕುಡಿದರೆ ಸಾಕು.
  • ಬೀಟ್‌ರೂಟ್‌ನಲ್ಲಿ ವಿಟಮಿನ್ ಎ, ಸಿ, ಬೇಟೈನ್, ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ರಂಜಕ, ನೈಸಿನ್ ಮತ್ತು ಕಬ್ಬಿಣಾಂಶ ಅಧಿಕವಿರುತ್ತದೆ.
loader