Asianet Suvarna News Asianet Suvarna News

ಮಹಿಳೆಯರಿಗೆ ಈ ಇಪ್ಪತು ಆಪತ್ತು! ತುಸು ಕೇರ್‌ಫುಲ್ ಆಗಿರಿ

ಕ್ಯಾನ್ಸರ್ ಇದೀಗ ಎಲ್ಲ ಮಯೋಮಾನದವರನ್ನೂ ಕಾಡುತ್ತಿದೆ. ಅಸ್ವಾಭಾವಿಕ ವೈಪರೀತ್ಯಗಳು ಕ್ಯಾನ್ಸರ್‌ನ ಮುನ್ಸೂಚನೆಗಳು. ಆರಂಭದಲ್ಲಿಯೇ ಮಹಿಳೆಯರು ಸುದೀರ್ಘವಾಗಿ ಕಾಡುವ ಈ ಲಕ್ಷಣಗಳನ್ನು ಗುರುತಿಸಿದರೆ, ಕ್ಯಾನ್ಸರ್‌ನಂಥ ಮಾರಾಣಾಂತಿಕ ರೋಗವನ್ನೂ ಗೆಲ್ಲಬಹುದು. ಈ ಲಕ್ಷಣಗಳ ಬಗ್ಗೆ ಇರಲಿ ಹೆಚ್ಚು ಗಮನ ಹರಿಸಿ.

Dangerous health issue faced by women

ಬೆನ್ನು ನೋವು ಹಾಗೂ ಸೊಂಟನೋವು

ಬೆನ್ನು ನೋವಿನಿಂದ ಬಳಲುವಂಥ ಅನೇಕ ಮಹಿಳೆಯರು 'ಲಿವರ್ ಕ್ಯಾನ್ಸರ್' ಗೆ ತುತ್ತಾಗಿರುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೆ, ಸದಾ ಬೆನ್ನು ನೋವಿನಿಂದ ಬಳಲುತ್ತಿರುವವರಲ್ಲಿ ಸ್ತನ ಕ್ಯಾನ್ಸರ್‌ ಸಹ ಕಾಡಬಹುದು. ಬೆನ್ನಿನಲ್ಲಿ ಉಂಟಾದ ಬಾವು ಅಥವಾ ಗಡ್ಡೆ, ಪಕ್ಕೆಲುಬುಗಳಿಗೆ ಸದಾ ಒತ್ತುತ್ತಿರುವುದರಿಂದ ಕಾಲಕ್ರಮೇಣ ಕ್ಯಾನ್ಸರ್‌ಗೆ ತಿರುಗುವ ಅಪಾಯವಿರುತ್ತದೆ.

ಬದಲಾದ ಉಗುರಿನ ಚರ್ಯೆ

ತುಂಬಾ ಬಿಳಿ ಛಾಯೆಯ ಬಣ್ಣದಿಂದ ಕೂಡಿದ ಉಗುರಿನ ಲಕ್ಷಣಗಳೂ ಲಿವರ್ ಕ್ಯಾನ್ಸರ್‌ನ ಲಕ್ಷಣವೆಂದು ಅಥವಾ ಇದರ ಮುನ್ಸೂಚನೆಯೆಂದು ಸಂಶೋಧನೆಗಳು ಹೇಳುತ್ತವೆ. ಇದರೊಂದಿಗೆ ಉಗುರಿನ ಮಧ್ಯದಲ್ಲಿ ಅಥವಾ ಉಗುರಿನ ಯಾವುದೇ ಭಾಗದಲ್ಲಿ ಕಪ್ಪು ಅಥವಾ ಕಂದು ಬಣ್ಣದ ಚುಕ್ಕಿ ಅಥವಾ ಗೆರೆಗಳು ಕಂಡುಬಂದಲ್ಲಿ ಚರ್ಮದ ಕ್ಯಾನ್ಸರ್‌ನ ಲಕ್ಷಣಗಳೆಂದು ಪರಿಗಣಿಸಿ ನಿರ್ಲಕ್ಷಿಸದೇ ತಕ್ಷಣವೇ ಸೂಕ್ತ ವೈದ್ಯರನ್ನು ಕಂಡು ತಪಾಸಣೆಗೆ ಒಳಗಾಗಬೇಕು.

ಮುಖ ಊತ

ಕೆಲವರ ಮುಖವು ಊದಿದಂತಾಗಿರುತ್ತದೆ. ಅದರಲ್ಲಿಯೂ ವಿಶೇಷವಾಗಿ ತುಟಿ, ಕೆನ್ನೆ, ಕಣ್ಣಿನ ರೆಪ್ಪೆ ಭಾಗದಲ್ಲಿ ದಪ್ಪ ಆಗಿರುವಂತೆ ಮೇಲ್ನೋಟಕ್ಕೆ ಗೋಚರಿಸುತ್ತದೆ. ಇದಕ್ಕೆ ಕಾರಣ ಶ್ವಾಸಕೋಶದಲ್ಲಿ ಉಂಟಾದಂಥ ಗಡ್ಡೆ ಅಥವಾ ಬಾವು ಮುಖ್ಯ ಕಾರಣವಾಗುತ್ತದೆ. ಹೀಗಾದಾಗ ರಕ್ತನಾಳದಲ್ಲಿ ಮುಖದ ಭಾಗಕ್ಕೆ ರಕ್ತ ಸಂಚಾರಕ್ಕೆ ತಡೆಯುಂಟಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಶ್ವಾಸಕೋಶದ ಕ್ಯಾನ್ಸರ್.

ಚರ್ಮದಲ್ಲಿ ಹುಣ್ಣು ಅಥವಾ ಗಡ್ಡೆ

ದೇಹದಲ್ಲಿ ಉಂಟಾಗುವಂಥ ಪ್ರತಿಯೊಂದೂ ಹುಣ್ಣು ಅಥವಾ ಗಡ್ಡೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಹುಣ್ಣಿನಿಂದ ರಕ್ತ ಒಸರುವುದು, ಚರ್ಮವು ಇದ್ದಕ್ಕಿದ್ದಂತೆ ದಪ್ಪ ಆಗುವ ಲಕ್ಷಣಗಳು ಕಂಡುಬಂದರೆ ಅದು ಚರ್ಮದ ಕ್ಯಾನ್ಸರ್ ಆಗುವ ಸಾಧ್ಯತೆಗೆ ಕನ್ನಡಿ ಆಗಿರಬಹುದು.

ಕೆಂಪಾದ, ಊದಿದ ಸ್ತನಗಳು

ಮಹಿಳೆಯ ಸ್ತನಗಳು ಇದ್ದಕ್ಕಿದ್ದಂತೆ ತುಂಬಾ ದಪ್ಪನಾಗುವುದು, ಸ್ತನಗಳಲ್ಲಿ ಗಡ್ಡೆಗಳು ಕಾಣಿಸಿಕೊಂಡಾಗ ಹಾಲಿನ ಬದಲು ರಕ್ತ ಬಂದರೆ, ಕಂಕುಳಲ್ಲಿ ನೋವು ಅಥವಾ ಊತ ಕಂಡುಬಂದಾಗ ಸ್ತನ ಕ್ಯಾನ್ಸರ್‌ನ ಪರೀಕ್ಷೆಗೊಳಪಡುವುದು ಅತ್ಯಗತ್ಯ.

ಸ್ತನಾಗ್ರದಲ್ಲಿ ಅಸ್ಥಿರ

ಸ್ತನಾಗ್ರದ ತುದಿಯು ಕೆಳಮುಖ ಬಾಗಿದ್ದರೆ ಸಣ್ಣ ಸಣ್ಣ ಗುಳ್ಳೆಗಳು ಕಾಣಿಸಿದರೆ ಸ್ತನದ ಆಕಾರದಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ ಕಂಡುಬಂದಲ್ಲಿ ಹಾಗೂ ನಿಪ್ಪಲ್‌ ಮೇಲಿನ ಚರ್ಮದ ಪದರ ಸಿಪ್ಪೆಯಂತೆ ಕಳಚುತ್ತಿದ್ದರೆ ಇದು ಸ್ತನದ ಕ್ಯಾನ್ಸರ್‌ಗೆ ಮುನ್ನುಡಿ ಆಗಿರಬಹುದು.

Follow Us:
Download App:
  • android
  • ios