ನೀವು ತುಂಬಾ ಅಳುತ್ತೀರಾ? ದೇಹದಲ್ಲಿನ ಕರೆಂಟಿಗೂ ಕಣ್ಣೀರಿಗೂ ಸಂಬಂಧವಿದೆ !

ಇದು ಕಣ್ಣೀರಿನಲ್ಲಿ ಹೇರಳವಾಗಿ ಕಂಡುಬರುತ್ತದೆಯಂತೆ. ಲೈಸೋ ಜೈಮ್ ಕ್ರಿಸ್ಟಲ್ಸ್ ಜೈವಿಕ ವಸ್ತುವಾಗಿರುವುದರಿಂದ ಇದು ವಿಷಕಾರಿಯಲ್ಲ. ಹಾಗಾಗಿ ಇದನ್ನು ವೈದ್ಯಕೀಯವಾಗಿಯೂ ಬಳಸಿ ಕೊಳ್ಳಬಹುದು

Crying for Power Your Tears Could Generate Electricity

ಮನೆಯಲ್ಲಿ ಜಾಸ್ತಿ ಅಳುವವರರನ್ನು ನೋಡಿ ಅಳುಮುಂಜಿ ಅಂತ ಕರೆಯೋದು ಮಾಮೂಲಿ. ಆದರೆ ಅತ್ತಾಗ ಬರುವ ಕಣ್ಣೀರಿನಿಂದಲೂ ಉಪಯೋಗ ಇದೆಯಂತೆ. ಏನದು? ಐರ್ಲೆಂಡ್‌ನಲ್ಲಿ ನಡೆದ ಅಧ್ಯಯನದ ಪ್ರಕಾರ ಅಳುವಾಗ ಬರುವ ಕಣ್ಣೀರಿನಿಂದ ವಿದ್ಯುತ್ ಉತ್ಪಾದಿಸಬಹುದಂತೆ!

ಐರ್ಲೆಂಡ್‌ನ ಲಿಮೆರಿಕ್ಸ್ ವಿಶ್ವವಿದ್ಯಾಲಯದ ಬರ್ನಾಲ್ ಇನ್‌ಸ್ಟಿಟ್ಯೂಟ್ ಸಂಶೋಧಕರಾದ ಗ್ರಿಮ್ ಟು ಹ್ಯಾರಿ ಪಾಟರ್ ಸಹೋದರರು ನಡೆಸಿದ ಸಂಶೋಧನೆಯಲ್ಲಿ ಈ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಯಾಂ ತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾ ಪರಿವರ್ತಿಸಲು ಲೈಸೋಜೈಮ್ ಕ್ರಿಸ್ಟಲ್ಸ್ ಅಗತ್ಯ. ಇದು ಕಣ್ಣೀರಿನಲ್ಲಿ ಹೇರಳವಾಗಿ ಕಂಡುಬರುತ್ತದೆಯಂತೆ. ಲೈಸೋ ಜೈಮ್ ಕ್ರಿಸ್ಟಲ್ಸ್ ಜೈವಿಕ ವಸ್ತುವಾಗಿರುವುದರಿಂದ ಇದು ವಿಷಕಾರಿಯಲ್ಲ. ಹಾಗಾಗಿ ಇದನ್ನು ವೈದ್ಯಕೀಯವಾಗಿಯೂ ಬಳಸಿ ಕೊಳ್ಳಬಹುದು ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ವಿಜ್ಞಾನಿ ಗಳು ಇದಕ್ಕೂ ಮೊದಲು ಜೀವಶಾಸ್ತ್ರದ ಫಿಜಿ ಯೋ ಎಲೆಕ್ಟ್ರಾನಿಕ್ ಸಂಶೋಧನೆಗೆ ಇಂತಹ ಸುಲಭ ವಿಧಾನ ಬಿಟ್ಟುಸಂಕೀರ್ಣ ವಿಧಾನಗಳನ್ನು ಬಳಸುತ್ತಿದ್ದರು ಎಂದು ಬರ್ನಾಲ್ ಇನ್‌ಸ್ಟಿಟ್ಯೂಟ್ ನಿರ್ದೇಶಕರು ಹೇಳಿದ್ದಾರೆ. ಒಟ್ಟಿನಲ್ಲಿ ಈ ಸಂಶೋಧನೆಯ ಪ್ರಕಾರ ಅಳೋದು ಕೆಟ್ಟದ್ದೇನೂ ಅಲ್ಲ. ಮನೆಯ ಲ್ಲಿರುವ ಎಲ್ಲರೂ ಚೆನ್ನಾಗಿ ಅತ್ತ ರೆ ಮನೆಗೆ ಬೇಕಾದ ಕರೆಂಟನ್ನು ಅಲ್ಲೇ ಉತ್ಪಾದನೆ ಮಾಡಿಕೊಳ್ಳಬಹುದು!

Latest Videos
Follow Us:
Download App:
  • android
  • ios