ಆಗಷ್ಟೆ ಮದುವೆಯಾದವರು ಇವುಗಳನ್ನು ಮಾಡಲೇಬಾರದು
ಹಣಕಾಸು: ಕುಟುಂಬದ ಸ್ಥಿತಿ ಏನೆ ಇರಲಿ ಹೊಸದರಲ್ಲಿ ಸಂಸಾರದ ತಾಪತ್ರಯದ ಬಗ್ಗೆ ಮಾತಾನಾಡದೆ ಸಂತೋಷವನ್ನು ಅನುಭವಿಸಬೇಕು. ಆರಂಭದಲ್ಲಿಯೇ ಕಷ್ಟಗಳ ಬಗ್ಗೆ ವಿಚಾರವೆತ್ತಿದರೆ ಮುಂದಿನ ದಿನಗಳಲ್ಲಿ ದಾಂಪತ್ಯ ಸುಖಮಯವಾಗಿರುವುದಿಲ್ಲ.
ಪೋಷಕರ ಬಗ್ಗೆ ಮಾತುಕತೆ: ಪೋಷಕರು ಅದರಲ್ಲೂ ಪತ್ನಿ ಪತಿಯ ತಂದೆ-ತಾಯಿಯರ ಬಗ್ಗೆ ಹೆಚ್ಚು ಪ್ರಸ್ತಾಪಿಸಬಾರದು. ಅವರ ಬಗ್ಗೆ ಬೇರೆಯವರ ಬಗ್ಗೆ ಹೇಳಬಾರದು.
ಕುಟುಂಬ: ಪತಿ-ಪತ್ನಿ ಆರಂಭದ ಸುಖಸಂತೋಷಗಳನ್ನು ಅನುಭವಿಸಬೇಕೆ ವಿನಃ ಎರಡೂ ಕಡೆಯ ವಿಚಾರದ ಆಳವನ್ನು ಕೆದಕಬಾರದು. ಇದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು
ಸ್ವಭಾವ-ವಿಚಾರಗಳು: ಪತಿ-ಪತ್ನಿಯ ಸ್ವಭಾವ ಹಾಗೂ ವಿಚಾರಗಳು ಭಿನ್ನವಾಗಿತ್ತವೆ. ಇವುಗಳ ಬಗ್ಗೆ ಚರ್ಚೆ ಮಾಡಬಾರದು. ನಂತರದ ದಿನಗಳಲ್ಲಿ ಕೆಲವೊಂದು ಹಿಡಿಸದಿದ್ದರೆ ವಿಚಾರ-ವಿನಿಮಯದ ಮೂಲಕ ಬಗೆಹರಿಸಿಕೊಳ್ಳಬೇಕು
ಖಾಸಗಿ ಮಾತುಕತೆ: ನಿಮ್ಮ ಮಲಗುವ ಕೋಣೆಯ ತೀರ ಖಾಸಗಿ ವಿಚಾರಗಳನ್ನು ಬೇರೆಯವರಲ್ಲಿ ಹೇಳಿಕೊಂಡು ಮನಸ್ಸುಗಳನ್ನು ಕೆಡಿಸಿಕೊಳ್ಳಬೇಡಿ.
