ಸೆಕ್ಸ್ ಸಾಮರ್ಥ್ಯ ಹೆಚ್ಚಿಸಲು ಈರುಳ್ಳಿ ಮದ್ದು

Consuming onion increases fertility in men
Highlights

ಮಾರುಕಟ್ಟೆಯಲ್ಲಿ ಆಗಾಗ ದರ ಬದಲಾವಣೆಯಾಗುವುದು ಈರುಳ್ಳಿಯದ್ದು ಮಾತ್ರ.  ಈರುಳ್ಳಿಯಿಲ್ಲದೇ ಅಡುಗೆ ಪೂರ್ಣವಾಗೋಲ್ಲ. ತಿಂದಿದ್ದು ಮೈಗೆ ಹಿಡಿಯಲು ಈರುಳ್ಳಿ ಬೇಕೆನಿಸುತ್ತದೆ. ಮಾಂಸ ಸೇವಿಸುವಾಗಲೂ ಈರುಳ್ಳಿ ಸೇವಿಸುತ್ತೇವೆ. ಆಹಾರದ ರುಚಿ ಹೆಚ್ಚಿಸುವ ಈರುಳ್ಳಿಯಲ್ಲಿ ಪ್ರೊಟೀನ್, ಕ್ಯಾಲ್ಸಿಯಮ್ ಮತ್ತು ಕಬ್ಬಿಣಾಂಶ ಹೆಚ್ಚಿದ್ದು, ಆರೋಗ್ಯಕಾರಿ. ಈ ರುಚಿಕರ ಈರುಳ್ಳಿ ಬಗ್ಗೆ ಮತ್ತಷ್ಟು ಮಾಹಿತಿ...

 • ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
 • ಕ್ಯಾನ್ಸರ್ ಕಣಗಳನ್ನು ಸಾಯಿಸುತ್ತದೆ.
 • ಈರುಳ್ಳಿಯನ್ನು ಹಸಿಯಾಗಿ ಸೇವಿಸಿದರೆ, ಜೀರ್ಣ ಶಕ್ತಿ ಹೆಚ್ಚುತ್ತದೆ.
 • ರಕ್ತಹೀನತೆ ತಡೆಯಬಲ್ಲದು.
 • ಪುಟ್ಟ ಈರುಳ್ಳಿ ಸೇವಿಸಿದರೆ ಋತುಚಕ್ರವೂ ಸರಿಯಾಗುತ್ತದೆ.
 • ಕೆಮ್ಮು ಮತ್ತು ಜ್ವರ ಕಡಿಮೆ ಮಾಡುತ್ತದೆ.
 • ಮೂಳೆಗಳ ಶಕ್ತಿ ಹೆಚ್ಚಿಸುತ್ತದೆ.
 • ಕಿವಿ ನೋವಿಗೂ ರಾಮಬಾಣ.
 • ಸೆಕ್ಸ್ ಸಾಮರ್ಥ್ಯ ಹೆಚ್ಚಿಸುತ್ತದೆ.
 • ಚರ್ಮದ ಕಾಂತಿ ಹೆಚ್ಚಿಸುತ್ತದೆ.

ಬಳಸೋದು ಹೇಗೆ?

 • ಈರುಳ್ಳಿಯನ್ನು ಮೃದುವಾಗುವವರೆಗೂ ನೀರಲ್ಲಿ ಬೇಯಿಸಿ ನಂತರ ರುಬ್ಬಿ. ರಸ ತೆಗೆದು ಕಿವಿಗೆ ಹಾಕಿದರೆ, ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ ಎನ್ನುತ್ತದೆ ಅಜ್ಜಿ ಔಷಧಿ. 
 • ಈರುಳ್ಳಿ ರಸ ಮತ್ತು ಜೇನು ಮಿಶ್ರಣ ಮಾಡಿ ಸೇವಿಸಿದರೆ ಗಂಡಸರಿಗೆ ಫಲವತ್ತತೆ ಹೆಚ್ಚಿಸುತ್ತದೆ.
 • ಈರುಳ್ಳಿ ಫೇಸ್ ಪ್ಯಾಕ್ - 2 ಚಮಚ ಕಡಲೆ ಹಿಟ್ಟು, 1/2  ಚಮಚ ಈರುಳ್ಳಿ ರಸ ಮತ್ತು 1/2 ಚಮಚ ಹಾಲು ಮಿಶ್ರಣ ಮಾಡಿ ಹಚ್ಚಿದರೆ, ಕಾಂತಿಯುತ ಚರ್ಮ ನಿಮ್ಮದಾಗುತ್ತದೆ. 
loader