ಕಡಲೇಬೇಳೆ ಚಟ್ನಿ

Channa dal chutney
Highlights

ಮನೆಯಲ್ಲಿ ಸುಲಭವಾಗಿ ಮಾಡೋ ಅಡುಗೆ ಅಂದ್ರೆ ಚಟ್ನಿ. ಆದರೆ, ಒಂದೇ ರೀತಿ ಚಟ್ನಿ ತಿನ್ಲಿಕ್ಕೂ ಬೇಜಾರು. ವಿಧ ವಿಧವಾಗಿ ಮಾಡುವ ರುಚಿಕರ ಚಟ್ನಿಗಳು ರೆಸಿಪಿ ಇಲ್ಲಿದೆ... 

ಬೇಕಾಗುವ ಸಾಮಾಗ್ರಿಗಳು

-2 ಚಮಚ ಎಣ್ಣೆ

- 4 ಚಮಚ ಕಟಲೇ ಬೇಳೆ

- 1 ಸಣ್ಣಗೆ ಹಚ್ಚಿದ ಈರುಳ್ಳಿ

- ಅರ್ಧ ಕಪ್ ಕಾಯಿ ತುರಿ

- ಉಣಸೇ ರಸ

- 8 ಬ್ಯಾಡಗಿ ಮೆಣಸಿನ ಕಾಯಿ

- ಉಪ್ಪು

- ಕೊತ್ತಂಬರಿ ಮತ್ತು ಕರಿಬೇವು ಸೊಪ್ಪ

-ಸಾಸಿವೆ

- ಇಂಗು

ಮಾಡುವ ವಿಧಾನ :

 ಬಾಣಲೆಯಲ್ಲಿ  ಎಣ್ಣೆ ಹಾಕಿ,  ಕಡಲೇ ಬೇಳೆ, ಹೆಚ್ಚಿದ ಈರುಳ್ಳಿ ಹಾಕಿ ಕೆಂಪಗೆ, ಹುರಿದು ಕಾಯಿ ತುರಿ, ಹುಣಸೇ ರಸ, ಹುರಿದ ಬ್ಯಾಡಗಿ ಮೆಣಸಿನ ಕಾಯಿ 8, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿ, ಸಾಸಿವೆ ಇಂಗು ಮತ್ತು ಕರಿಬೇವಿನ ಒಗ್ಗರಣೆ ಹಾಕಿದರೆ ರುಚಿಯಾದ ಕಡಲೇಬೇಳೆ ಚಟ್ನಿ ರೆಡಿ.

loader