ಜೀವನಶೈಲಿ ಕಾಯಿಲೆಗಳಲ್ಲಿ ಅಧಿಕ ರಕ್ತದೊತ್ತಡವೂ ಒಂದು. ಹೆಸರೇ ಹೇಳುವಂತೆ ರಕ್ತವು ಅಪಧಮನಿಗಳಲ್ಲಿ ಸಾಮಾನ್ಯ ಒತ್ತಡಕ್ಕಿಂತ ಹೆಚ್ಚು ಒತ್ತಡದಿಂದ ಪ್ರವಹಿಸಿದರೆ ಅದು ಅಧಿಕ ರಕ್ತದೊತ್ತಡ. ಸಾಮಾನ್ಯವಾಗಿ ಬಿಪಿ ಏರಿರುವುದು ಯಾವುದೇ ಲಕ್ಷಣಗಳಿಂದ ಕಾಣಿಸಿಕೊಳ್ಳುವುದಿಲ್ಲವಾದ್ದರಿಂದ ಹೈಪರ್‌ಟೆನ್ಷನ್‌ನ್ನು ಸೈಲೆಂಟ್ ಕಿಲ್ಲರ್ ಎನ್ನಲಾಗುತ್ತದೆ.

ರಕ್ತದೊತ್ತಡವು 140/90ಕ್ಕಿಂತ ಹೆಚ್ಚು ಕಂಡುಬಂದಲ್ಲಿ ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೀರಿ ಎಂದರ್ಥ. ಇನ್ನು ರಕ್ತದೊತ್ತಡವು 180 /120 ಅನ್ನು ಮೀರಿದರೆ, ಅಥವಾ ಬಹಳ ಸಮಯ ಹೆಚ್ಚಾಗಿಯೇ ಇದ್ದರೆ ವ್ಯಕ್ತಿಯನ್ನು ತಡ ಮಾಡದೆ ಆಸ್ಪತ್ರೆಗೆ ಸೇರಿಸುವುದು ಅಗತ್ಯ. ಏಕೆಂದರೆ ಹೈ ಬಿಪಿ ಎಂದರೆ ಸ್ಟ್ರೋಕ್, ಹೃದಯದ ಸಮಸ್ಯೆಗಳು, ಕಿಡ್ನಿ ಫೇಲ್ಯೂರ್ ಎಲ್ಲದರ ಅಪಾಯ ಹೆಚ್ಚು. 

ಬಿ ಹ್ಯಾಪಿ, ನಿಯಂತ್ರಣದಲ್ಲಿಡಬಹುದು ಹೈ ಬಿಪಿ!

ಎರಡು ವಿಧ

ಈ ಹೈಪರ್‌ಟೆನ್ಷನ್‌ನಲ್ಲಿ ಎರಡು ವಿಧ. ಪ್ರೈಮರಿ ಹಾಗೂ ಸೆಕೆಂಡರಿ ಹೈಪರ್‌ಟೆನ್ಷನ್. ಪ್ರೈಮರಿ ಹೈಪರ್‌ಟೆನ್ಷನ್ ಬಹಳ ಸಾಮಾನ್ಯವಾದುದಾಗಿದ್ದು ಜೀವನಶೈಲಿಯಿಂದಾಗಿ ಬಹಳ ವರ್ಷಗಳ ಕಾಲ ತೆಗೆದುಕೊಂಡು ಬರುತ್ತದೆ. ಸೆಕೆಂಡರಿ ಹೈಪರ್‌ಟೆನ್ಷನ್ ಕಿಡ್ನಿ ಸಮಸ್ಯೆ, ನಿದ್ರಾ ಸಮಸ್ಯೆ ಹಾಗೂ ಥೈರಾಯ್ಡ್‌ನಂಥ ಆರೋಗ್ಯದ ಸಮಸ್ಯೆಗಳಿಂದ ಬರುತ್ತದೆ. 

ಹೈ ಬಿಪಿ ಲಕ್ಷಣಗಳು

ಮೊದಲೇ ಹೇಳಿದಂತೆ ಇದು ಸೈಲೆಂಟ್ ಕಿಲ್ಲರ್. ಯಾವುದೇ ಸೂಚನೆಯಿಲ್ಲದೆ ಬಂದಿರುತ್ತದೆ. ಆದರೆ, ಕೆಲವರು ತಲೆನೋವು, ಮೂಗಿನಲ್ಲಿ ರಕ್ತ ಅಥವಾ ಉಸಿರಾಟ ಸಮಸ್ಯೆ ಅನುಭವಿಸಬಹುದು. ಆದರೆ, ಬೇರೆ ಕಾಯಿಲೆಗಳಲ್ಲೂ ಈ ಲಕ್ಷಣಗಳು ಕಾಣಿಸಿಕೊಳ್ಳುವುದರಿಂದ ಇದು ಬಿಪಿ ಎಂದು ತಕ್ಷಣಕ್ಕೆ ತಿಳಿಯುವುದಿಲ್ಲ. ಅಥವಾ ಬೇರೆ ಆರೋಗ್ಯ ಸಮಸ್ಯೆಗಳಿಗೆ ಪರೀಕ್ಷಿಸಹೋದಾಗ ಇದು ಬೆಳಕಿಗೆ ಬರಬಹುದು. ಆದ್ದರಿಂದ 45 ವರ್ಷದ ನಂತರ ಆಗಾಗ ಬಿಪಿ ಪರೀಕ್ಷೆ ಮಾಡಿಸುತ್ತಿರುವುದು ಉತ್ತಮ.

ಬಿಪಿ ಕಂಟ್ರೋಲ್ ಮಾಡೋ ಕಾಲುಂಗರ!

ಮುಖ್ಯ ಕಾರಣಗಳು

- ಹೆಚ್ಚು ತೂಕ ಮತ್ತು ಬೊಜ್ಜು: ದೇಹದ ತೂಕ ಹೆಚ್ಚಾದಂತೆ ಹೃದಯವು ದೇಹಕ್ಕೆ ಬೇಕಾದ ಆಕ್ಸಿಜನ್ ಮತ್ತು ಪೋಷಕಾಂಶಗಳನ್ನು ಪೂರೈಸಲು ಹೆಚ್ಚು ರಕ್ತವನ್ನು ಪಂಪ್ ಮಾಡಬೇಕಾಗುತ್ತದೆ. ಈ ಹೆಚ್ಚುವರಿ ರಕ್ತವು ಅಪಧಮನಿಯ ಗೋಡೆಗಳ ಮೇಲೆ ಹೆಚ್ಚಿನ ಒತ್ತಡ ಹೇರುತ್ತವೆ.

- ಅನುವಂಶೀಯತೆ: ಪೋಷಕರು ಅಥವಾ ಅತಿ ಹತ್ತಿರದ ಸಂಬಂಧಿಗಳಲ್ಲಿ ಯಾರಿಗಾದರೂ ಇದ್ದರೆ ಹೈ ಬಿಪಿ ಬರುವ ಸಾಧ್ಯತೆ ಇದೆ.

- ಉಪ್ಪು, ಕೊಲೆಸ್ಟೆರಾಲ್ ಹೆಚ್ಚಿರುವ ಆಹಾರದ ನಿರಂತರ ಸೇವನೆ

- ದೈಹಿಕ ಚಟುವಟಿಕೆಯ ಕೊರತೆ: ಜಡ ಜೀವನಶೈಲಿಯಿಂದಾಗಿ ಹೃದಯ ಮತ್ತು ನಾಡಿಬಡಿತ ಹೆಚ್ಚುತ್ತದೆ. ಇದರ ಪರಿಣಾಮವಾಗಿ ಹೃದಯವು ರಕ್ತ ಪಂಪ್ ಮಾಡಲು ಕಷ್ಟಪಡಬೇಕಾಗುತ್ತದೆ. ಇದರಿಂದ ಅಪಧಮನಿಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. 

- ಚಟಗಳು: ತಂಬಾಕು ಮತ್ತು ಧೂಮಪಾನ ಸೇವನೆ

ಬ್ರೆಸ್ಟ್ ಚೆಕ್ ಮಾಡ್ಕೊಳ್ಳಿ: ಕ್ಯಾನ್ಸರ್ ಬಾರದಂತೆ ನೋಡ್ಕೊಳ್ಳಿ!

- ವಯಸ್ಸು: ವಯಸ್ಸಾದಂತೆಲ್ಲ ರಕ್ತನಾಳದ ಎಲಾಸ್ಟಿಸಿಟಿ ಕಡಿಮೆಯಾಗುವುದರಿಂದ ಮತ್ತು ಹಾರ್ಮೋನ್ ಬದಲಾವಣೆಯಿಂದ ಬಿಪಿ ಬರುವ ಸಾಧ್ಯತೆ ಹೆಚ್ಚು

- ಆರೋಗ್ಯ ಸಮಸ್ಯೆಗಳು: ಡಯಾಬಿಟೀಸ್, ಹೈ ಕೊಲೆಸ್ಟೆರಾಲ್, ಕಿಡ್ನಿ ಸಮಸ್ಯೆಗಳು ಹಾಗೂ ಹಾರ್ಮೋನ್ ತೊಂದರೆಯಿದ್ದಾಗ ಬಿಪಿ ಹೆಚ್ಚಬಹುದು. 

- ಒತ್ತಡ

- ಕೆಲ ಜನನ ತಡೆ ಔಷಧಗಳ ಸೇವನೆಯಿಂದಾಗಿಯೂ ಬಿಪಿ ಹೆಚ್ಚುವುದು. 

ಹೈ ಬಿಪಿ ಬರದಂತೆ ನೋಡಿಕೊಳ್ಳುವ, ಬಂದ ಮೇಲೆ ನಿಯಂತ್ರಿಸಿಕೊಳ್ಳುವ ವಿಧಾನಗಳು:

ಹೈಪರ್‌‌ಟೆನ್ಷನ್ ಜೀವನಶೈಲಿ ಕಾಯಿಲೆಯಾಗಿರುವುದರಿಂದ ಅದು ಬರದಂತೆ ನೋಡಿಕೊಳ್ಳಲು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಮುಖ್ಯ. 

- ಆಹಾರದಲ್ಲಿ ಉಪ್ಪು ಸೇವನೆ ಮಿತಿಯಲ್ಲಿಡುವುದು ಹಾಗೂ ಜಂಕ್ ಫುಡ್ ಹಾಗೂ ಕೊಬ್ಬಿನ ಆಹಾರಗಳಿಂದ ದೂರದಲ್ಲಿರುವುದು. ಸೋಡಿಯಂ ಹೆಚ್ಚಾಗಿರುವ ಆಹಾರ ಪದಾರ್ಥಗಳಾದ ಚೀಸ್, ಉಪ್ಪಿನಕಾಯಿ, ಗೊಜ್ಜು ಮತ್ತು ಹಪ್ಪಳಗಳ ಕಡಿಮೆ ಸೇವನೆ

- ತೂಕ ಇಳಿಕೆ

ಗ್ರೀನ್‌ ಟೀ ಆಯ್ತು ಈಗ ಗ್ರೀನ್‌ ಕಾಫಿ!: ದೇಹದ ತೂಕ ಇಳಿಕೆಗೆ ಬೆಸ್ಟ್!

- ನಿಯಮಿತ ವ್ಯಾಯಾಮ

- ಸಿಗರೇಟು, ತಂಬಾಕು, ಮದ್ಯ ಚಟಗಳಿಗೆ ಬೈಬೈ

- ಒತ್ತಡದಿಂದ ದೂರಾಗಲು ಪ್ರಾಣಾಯಾಮ, ಯೋಗ ಅಳವಡಿಕೆ.