'ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ...' ಎನ್ನುತ್ತಾರೆ. ಕಾಲುಂಗುರ ಎಂಬುದು ಮುತ್ತೈದೆಯ ಬಹು ಮುಖ್ಯ ಆಭರಣ. ಆದರೆ ಇದು ಕೇವಲ ಸಂಪ್ರಾದಾಯ ಮಾತ್ರವಲ್ಲ, ಇದು ಆರೋಗ್ಯಕ್ಕೂ ಉತ್ತಮ. 

  • ಭೂಮಿಯಿಂದ ಧ್ರುವೀಯ ಶಕ್ತಿಯನ್ನು ಹೀರಿಕೊಂಡು ದೇಹದಲ್ಲಿ ಹಾದು ಹೋಗಲು ಬೆಳ್ಳಿ ನೆರವಾಗುತ್ತದೆ. ದೇಹದಲ್ಲಿ ಇದು ಅನೇಕ ಬದಲಾವಣೆಗಳನ್ನು ತರುತ್ತದೆ.
  • ಕಾಲುಂಗುರ ಹಾಕುವ ಎರಡನೇ ಬೆರಳಿನಲ್ಲಿ ಪ್ರೆಷರ್ ಪಾಯಿಂಟ್ ಇದೆ.  ಈ ಬೆರಳಿಗೆ ಬೆಳ್ಳಿ ಕಾಲುಂಗುರವನ್ನು ಧರಿಸುವುದರಿಂದ ಮಹಿಳೆಯರ ಋತುಚಕ್ರ ಸಮಸ್ಯೆ ತಡೆಯಬಹುದು. ಇದರಿಂದ ಪಿರಿಯಡ್ಸ್ ಸರಿಯಾಗಿ ಆಗುತ್ತದೆ. 

ಕಾಲುಂಗುರ ಧರಿಸುವುದರ ಮಹತ್ವವೇನು?

  • ಕಾಲುಂಗುರ ಹಾಕುವುದರಿಂದ ರಕ್ತ ಸಂಚಾರ ಸಮಪರ್ಕಗೊಂಡು, ಗರ್ಭಕೋಶವನ್ನು ಆರೋಗ್ಯವಾಗಿಡಬಹುದು. 
  • ಕಾಲಿನ ಕೆಲವು ನರಗಳು ಉತ್ತೇಜನಗೊಳ್ಳುತ್ತದೆ. ಇದರಿಂದ ಸಂತಾನೋತ್ಪತ್ತಿಯೂ ಚೆನ್ನಾಗಿರುತ್ತದೆ. 
  • ಕಾಲುಂಗುರದಿಂದ ಬೆರಳಿನ ಮೇಲೆ ಒತ್ತಡ ಉಂಟಾಗುತ್ತದೆ. ಇದರಿಂದ ಅಲ್ಲಿರುವ ನರದ ಮೇಲೆ ಪ್ರೆಷರ್ ಬಿದ್ದು, ದೇಹಕ್ಕೆ ಮಸಾಜ್ ಸಿಕ್ಕಿಂತಾಗುತ್ತದೆ. ಇದು ಹಲವು ಸ್ತ್ರೀ ಸಂಬಂಧಿ ರೋಗಗಳಿಗೂ ರಾಮಬಾಣ. 
  • ದೇಹದ ಎಲ್ಲಾ ಅಂಗಾಗಳನ್ನೂ ರಿಫ್ರೆಶ್ ಆಗಲು ಕಾಲುಂಗುರ ಧರಿಸುವುದು ಉತ್ತಮ. 
  • ಕಾಲುಂಗುರ ಧರಿಸುವುದರಿಂದ ಮಹಿಳೆಯ ಹೊಟ್ಟೆಯಲ್ಲಿರುವ ಮಗುವೂ ಆರೋಗ್ಯವಾಗಿ ಬೆಳವಣಿಗೆಯಾಗುತ್ತದೆ. 
  • ಕಾಲುಂಗುರ ನಕರಾತ್ಮಕತೆ ನಿವಾರಿಸುತ್ತದೆ. ಇದು ಗರ್ಭಿಣಿಯರು ಮಾನಸಿಕವಾಗಿ ಆರೋಗ್ಯದಿಂದಿರಲು ಸಹಕರಿಸುತ್ತೆ. 
  • ಬೆಳ್ಳಿ ವಸ್ತು ದೇಹವನ್ನು ತಂಪಾಗಿರಿಸುತ್ತವೆ. ಇದನ್ನು ಧರಿಸುವುದರಿಂದ ಪೊಸಿಟಿವ್‌ ಎನರ್ಜಿ ದೇಹದಲ್ಲಿ ಸಂಚಾರವಾಗುತ್ತದೆ. 
  • ಬ್ಲಡ್‌ ಪ್ರೆಶರ್‌ ಸಮಸ್ಯೆ ನಿರಾಳವಾಗಲು ಬೆಳ್ಳಿ ಕಾಲುಂಗುರ ನೆರವಾಗುತ್ತದೆ.