ಒಂದು ನಾಯಿ ಸಾಕುವ ₹60000 ಹಣದಲ್ಲಿ, ಮೂರು ಬಡ ಕುಟುಂಬ ಸಾಕಬಹುದು!

ಕಾಕೇಶಿಯನ್ ಶೆಫರ್ಡ್ ತಳಿಯ ನಾಯಿ ತೋರ್, ಐಷಾರಾಮಿ ಜೀವನ ನಡೆಸುತ್ತಿದೆ. ₹8 ಲಕ್ಷಕ್ಕೆ ಖರೀದಿಸಲಾದ ಈ ನಾಯಿಯ ಮಾಸಿಕ ನಿರ್ವಹಣೆ ₹60,000. ವಿಶೇಷ ಆಹಾರ, ಎಸಿ ವಾಸಸ್ಥಾನ ಸೇರಿದಂತೆ ತೋರ್‌ಗೆ ರಾಜಮರ್ಯಾದೆ ಬೇಕೇಬೇಕು..

Caucasian Shepherd Dog Monthly Upkeep Costs Rs 60000 sat

ಸಾಮಾನ್ಯವಾಗಿ ಬಡ ಕುಟುಂಬಗಳ ಮಾಸಿಕ ನಿರ್ವಹಣೆಗೆ 20 ಸಾವಿರ ರೂ. ಇದ್ದರೆ ಸಾಕು ಎನ್ನುತ್ತಾರೆ. ಮಧ್ಯಮ ವರ್ಗದ ಕುಟುಂಬ ನಿರ್ವಹಣೆಗೆ 60 ಸಾವಿರ ರೂ. ಸಾಕಾಗಬಹುದು. ಆದರೆ, ಇಲ್ಲೊಂದು ನಾಯಿ ಸಾಕುವುದಕ್ಕೆ ಮಾಸಿಕ 60 ಸಾವಿರ ರೂ. ಖರ್ಚು ಮಾಡಲೇಬೇಕಿದೆ. ಇಂತಹ ಐಷಾರಾಮಿ ನಾಯಿ ನಿಮ್ಮದಾಗಿಸಿಕೊಳ್ಳಬೇಕೆಂದರೆ ನೀವು 8 ಲಕ್ಷ ರೂ. ಪಾವತಿಸಬೇಕು.

ಮನುಷ್ಯನಿಗೆ ಊಹಿಸಲು ಸಾಧ್ಯವಾಗದಷ್ಟು ದೊಡ್ಡ ಐಷಾರಾಮಿ ಜೀವನ ನಡೆಸುವ, ಲಕ್ಷಾಂತರ ರೂಪಾಯಿ ಬೆಲೆಬಾಳುವ ಸಾಕುಪ್ರಾಣಿಗಳ ಬಗ್ಗೆ ಕೇಳಿದ್ದೀರಾ? ಅಂತಹದ್ದೇ ಒಂದು ನಾಯಿ ಇದು. ಈ ನಾಯಿಯನ್ನು ಸ್ವಂತ ಮಾಡಿಕೊಳ್ಳಬೇಕೆಂದರೆ ಕನಿಷ್ಠ 8 ಲಕ್ಷ ರೂಪಾಯಿ ಬೇಕು. ಇಷ್ಟೇ ಅಲ್ಲ, ಇದರ ಒಂದು ತಿಂಗಳ ನಿರ್ವಹಣೆಗೆ ಒಂದು ಮಧ್ಯಮ ವರ್ಗದ ಕುಟುಂಬದ ಒಂದು ತಿಂಗಳ ಆದಾಯಕ್ಕಿಂತ ಹೆಚ್ಚು ಖರ್ಚಾಗುತ್ತದೆ. ಅಂದರೆ, ಪ್ರತಿ ತಿಂಗಳು ಈ ನಾಯಿಯ ನಿರ್ವಹಣೆಗೆ 60,000 ರೂಪಾಯಿಗಿಂತ ಹೆಚ್ಚು ಖರ್ಚಾಗುತ್ತದೆ. ವಿಶೇಷ ಆಹಾರ, ವಿಶೇಷ ವಸತಿ ಇವುಗಳ ಜೊತೆಗೆ ವಾಸಿಸಲು ಎಸಿ ಕೂಡ ಕಡ್ಡಾಯ.

ಇದ್ಯಾರು ವಿಐಪಿ ಅಂತ ಪ್ರಶ್ನೆ ಬರುತ್ತೆ ಅಲ್ವಾ?
ಕಾಕೇಶಿಯನ್ ಶೆಫರ್ಡ್ ಡಾಗ್ ಎಂದು ಕರೆಯಲ್ಪಡುವ ತಳಿಯ ಈ ನಾಯಿ ಐಷಾರಾಮಿ ಪ್ರಿಯ. ಈ ಹಿಂದೆ ಬೆಂಗಳೂರಿನ ಒಬ್ಬ ವ್ಯಕ್ತಿ 20 ಕೋಟಿ ರೂಪಾಯಿಗೆ ಈ ತಳಿಯ ನಾಯಿಯನ್ನು ಖರೀದಿಸಿದ್ದು ಸುದ್ದಿಯಾಗಿತ್ತು. ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ನಡೆದ ಪೆಟ್ ಫೆಡ್ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ತರ ಪ್ರದೇಶದ ಬುಲಂದ್‌ಶಹರ್ ನಿವಾಸಿ ವಿನಾಯಕ್ ಪ್ರತಾಪ್ ಸಿಂಗ್ ಈ ತಳಿಯ ತನ್ನ ನಾಯಿಯನ್ನು ಕರೆತಂದಿದ್ದರಿಂದ ಈ ನಾಯಿ ಮತ್ತೆ ಸುದ್ದಿಯಲ್ಲಿದೆ. ನೋಡಲು ಆಕ್ರಮಣಕಾರಿ ಎಂದು ಅನಿಸಿದರೂ, ಸರಿಯಾದ ತರಬೇತಿ ನೀಡಿದರೆ ಈ ನಾಯಿ ಅಷ್ಟೇನೂ ಅಪಾಯಕಾರಿ ಅಲ್ಲ. ಮಾತ್ರವಲ್ಲ, ಮನುಷ್ಯರೊಂದಿಗೆ ಬೇಗನೆ ಬೆರೆಯುತ್ತದೆ.

ಇದನ್ನೂ ಓದಿ: ಭಾರತದಿಂದ ಕತ್ತೆಗಳು ನಾಪತ್ತೆ ಆಗುವುದಕ್ಕೆ ಚೀನಾ ದೇಶವೇ ಕಾರಣ!

ವಿನಾಯಕ್ ಪ್ರತಾಪ್ ಸಿಂಗ್ ಅವರ ಈ ಕಾಕೇಶಿಯನ್ ಶೆಫರ್ಡ್ ನಾಯಿಯ ಹೆಸರು ತೋರ್. ಅಮೆರಿಕದಿಂದ ತಾನು ತೋರ್‌ನನ್ನು ಖರೀದಿಸಿದೆ ಎಂದು ವಿನಾಯಕ್ ತಿಳಿಸಿದ್ದಾರೆ. ತೋರ್ ಜೊತೆಗೆ ಇದೇ ತಳಿಯ ಒಂದು ಹೆಣ್ಣು ನಾಯಿ ಕೂಡ ತನಗಿದೆ ಎಂದು ಅವರು ಹೇಳಿದರು. ತೋರ್ 72 ಕಿಲೋ ತೂಕ ಮತ್ತು 75 ಸೆಂಟಿಮೀಟರ್ ಎತ್ತರವಿದೆ.

ಮಾಂಸ ಮತ್ತು ನಾಯಿಗಳಿಗೆಂದೇ ಇರುವಂತಹ ವಿಶೇಷ ಆಹಾರವನ್ನು ದಿನಕ್ಕೆ ಮೂರು ಬಾರಿ ತೋರ್ ತಿನ್ನುತ್ತದೆ ಎಂದು ನಾಯಿಯ ಜೀವನಶೈಲಿಯನ್ನು ಬಗ್ಗೆ ವಿನಾಯಕ್ ಹೇಳಿದರು. ದಿನಕ್ಕೆ 250 ಗ್ರಾಂ ಚಿಕನ್ ತಿನ್ನುವುದು ಕಡ್ಡಾಯ. ಸ್ನಾನ ಮಾಡಿಸಲು ಬೇಕಾದ ಶಾಂಪೂ, ವೈದ್ಯಕೀಯ ತಪಾಸಣೆ, ವಾಸಿಸಲು ಮತ್ತು ಇತರ ಸೌಲಭ್ಯಗಳು ಸೇರಿದಂತೆ ಮಾಸಿಕ 50,000 ರಿಂದ 60,000 ರೂಪಾಯಿ ಖರ್ಚಾಗುತ್ತದೆ.

ಇದನ್ನೂ ಓದಿ: ಸುಂದರ ಮಹಿಳೆಯನ್ನು ಕಂಡು ದಂಡ ಹಾಕೋದು ಮರೆತ ಪೊಲೀಸ್: ವಿಡಿಯೋ ವೈರಲ್ 

ಬೇಸಿಗೆಯಲ್ಲಿ, ತೋರ್‌ಗೆ ಭಾರತದ ಬಿಸಿಲನ್ನು ತಡೆದುಕೊಳ್ಳಲು ಸಾಧ್ಯವಾಗದ ಕಾರಣ, ಒಂದು ಹವಾನಿಯಂತ್ರಣ ಮತ್ತು ಕೂಲರ್ ಕಡ್ಡಾಯ. ತಂಪು ದೇಶಗಳ ತಳಿಯ ನಾಯಿ ಆಗಿರುವುದರಿಂದ ಚಳಿಗಾಲದಲ್ಲಿ ಇದಕ್ಕೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ. ಆದರೆ ಬೇಸಿಗೆಯಲ್ಲಿ ತುಂಬಾ ಕಷ್ಟ ಎಂದು ವಿನಾಯಕ್ ಸ್ಪಷ್ಟಪಡಿಸಿದರು. ಬೇಸಿಗೆಯಲ್ಲಿ ಕುಡಿಯಲು ತಣ್ಣೀರು ನೀಡಬೇಕು ಮತ್ತು ದಿನಕ್ಕೆ 3 ಬಾರಿ ಸ್ನಾನ ಮಾಡಿಸಬೇಕು.

(ಚಿತ್ರ ಪ್ರತೀಕಾತ್ಮಕ- Wikipedia by Pleple2000)

Latest Videos
Follow Us:
Download App:
  • android
  • ios