Viral Video : ಆಮೆ ಪ್ರಾಣ ಕಾಪಾಡಿದ ಎಮ್ಮೆ..ಮನುಷ್ಯರಿಗಿಂತ ಪ್ರಾಣಿಗಳೇ ಮೇಲು!
*ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ
* ಮನುಷ್ಯರಿಗಿಂತ ಪ್ರಾಣಿಗಳೆ ಸಾವಿರ ಪಾಲು ಮೇಲು
*ಆಮೆಯ ಪ್ರಾಣ ಉಳಿಸಿದ ಎಮ್ಮೆ
ಬೆಂಗಳೂರು(ಡಿ. 19) ಅದೆಷ್ಟೋ ಸಂದರ್ಭದಲ್ಲಿ ಪ್ರಾಣಿಗಳೇ (Anima) ಮನುಷ್ಯನಿಗಿಂತ ಮೇಲು ಎನ್ನುವುದಕ್ಕೆ ಉದಾಹರಣೆಗಳು ಸಿಗುತ್ತಲೇ ಇರುತ್ತವೆ. ಇದು ಸಹ ಅಂಥದ್ದೇ ಒಂದು ನಿದರ್ಶನ. ಎಮ್ಮೆಯೊಂದು (Buffalo)ಆಮೆಯ (Tortoise) ಪ್ರಾಣ ರಕ್ಷಣೆ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ಪ್ರಾಣಿಗಳನ್ನೇ ಕೊಂಡಾಡಬೇಕಿದೆ.
ರಸ್ತೆಯಲ್ಲಿ ಅಪಘಾತವಾಗಿ ಮನುಷ್ಯನೊಬ್ಬ ಬಿದ್ದುಕೊಂಡಿದ್ದರೆ ತಮಗೆ ಏನೂ ಸಂಬಂಧವೇ ಇಲ್ಲ ಎಂಬಂತೆ ನೋಡಿಕೊಂಡು ಹೋಗುವ ಅದೆಷ್ಟೋ ಜನರನ್ನು ಕಂಡಿದ್ದೇವೆ. ಒಮ್ಮೊಮ್ಮೆ ನಮ್ಮ ಸಮಾಜದ ವರ್ತನೆ ನಮಗೆ ನಾಚಿಕೆ ತರಿಸುವಂತೆ ಇರುತ್ತದೆ. ನೀರೆಮ್ಮೆ ಆಮೆಯ ಪ್ರಾಣ ರಕ್ಷಣೆ ಮಾಡಿದ ವಿಡಿಯೋ ಪ್ರಾಣಿ ಲೋಕವನ್ನು ನಮ್ಮ ಮುಂದೆ ತೆರೆದಿರಿಸುತ್ತದೆ.
ಕೇವಲ 15 ಸೆಕೆಂಡುಗಳ ವಿಡಿಯೋ ಪ್ರಾಣಿ ಲೋಕದ ಅಚ್ಚರಿಯನ್ನು ನಮ್ಮ ಮುಂದೆ ತೆರೆದಿರಿಸುತ್ತದೆ. ನೀರೆಮ್ಮೆಯೊಂದು ಮಣ್ಣಿನ ಆಳದಿಂದ ಏನನ್ನೋ ತೆಗೆಯಲು ಯತ್ನ ಮಾಡುತ್ತಿರುವುದು ಗೊತ್ತಾಗಿದೆ. ಅದನ್ನು ಜೂಮ್ ಮಾಡಿನ ನೋಡಿದಾಗ ಆಮೆಯೊಂದು ಸಿಲುಕಿಕೊಂಡಿದ್ದು ಕಾಣುತ್ತದೆ. ಬೋರಲಾಗಿ ಬಿದ್ದದ್ದ ಆಮೆಯನ್ನು ನೀರೆಮ್ಮೆ ಸಹಜ ಸ್ಥಿತಿಗೆ ತರುತ್ತದೆ.
Animal Cruelty: ಮಗನನ್ನು ಕಚ್ಚಿದ ನಾಯಿಗೆ ಇದೆಂತಹಾ ಘೋರ ಶಿಕ್ಷೆ, ಕಾಲು ಕತ್ತರಿಸಿ ಕೊಂದೇ ಹಾಕಿದ!
ಟ್ವಿಟರ್ ನಲ್ಲಿ ಈ ವಿಡಿಯೋ ಕ್ಲಿಪ್ ಪ[ೋಸ್ಟ್ ಮಾಡಲಾಗಿದ್ದು ಅದಾಗಲೇ ಒಂದು ಮಿಲಿಯನ್ ವೀವ್ಸ್ ಕಂಡಿದೆ. ಎಮ್ಮೆಯ ಸಮಯೋಚಿತ ನಿರ್ಧಾರವನ್ನು, ಪರೋಪಕಾರದ ಬುದ್ಧಿಯನ್ನು ಮುಕ್ತ ಕಂಠದಿಂದ ಕೊಂಡಾಡಲಾಗಿದೆ.
ರಕ್ತದಾನ ಮಾಡಿದ್ದ ಶ್ವಾನ: ರಕ್ತದಾನ ಮಾಡುವ ಮೂಲಕ ಅನೇಕರ ಪ್ರಾಣ ಉಳಿಸುವ ದಾನಿಗಳಿಗೆ ಧನ್ಯವಾದ ಹೇಳಲೇಬೇಕು. ಅದೇ ರೀತಿಯ ಒಂದು ಕತೆ ಇಲ್ಲಿದೆ. ಇದು ಶ್ವಾನಗಳ (Dog) ಕತೆ.
ರಾಟ್ ವಿಲ್ಲರ್(Rottweiler) ಶ್ವಾನದ ಹೆಸರು ಡೀಸೆಲ್.. ಪಾಟೀಲರ ಅಚ್ಚು ಮೆಚ್ಚಿನ ಶ್ವಾನ.. ಆದರೆ ಡೀಸೆಲ್ ಗೆ ಅನಾರೋಗ್ಯ ಕಾಡಿದೆ. ಅತೀವ ರಕ್ತ ಸ್ರಾವದಿಂದ ರಕ್ತದ ಕೊರತೆ ಕಾಣಿಸಿಕೊಂಡಿತ್ತು. ಧಾರವಾಡದ ಕೃಷಿ ವಿವಿಯ ಶಶಿಧರ್ ಪಾಟೀಲ್ ಒಂದು ಉಪಾಯ ಹೇಳಿದ್ದು ಶ್ವಾನ ಪ್ರಿಯ ಸೋಮಶೇಖರ್ ಅವರ ಜರ್ಮನ್ ಶೆಫರ್ಡ್(German Shepherd) ಶ್ವಾನದ ರಕ್ತ ಪಡೆದುಕೊಂಡು ಡಿಸೇಲ್ ಪ್ರಾಣ ಉಳಿಸಲಾಗಿತ್ತು.
ಸಿಂಹ ಎಲ್ಲಿಂದ ಬಂತು? ಪುರುಷರ ಶೌಚಾಲಯದದಿಂದ(toilet) ಸಿಂಹ(Lion) ಹೆಜ್ಜೆ ಇಟ್ಟುಕೊಂಡು ಹೊರಗೆ ಬಂದರೆ.. ಹೌದು ಆ ಬಗೆಯ ವಿಡಿಯೋ ಒಂದು ವೈರಲ್ ಆಗಿತ್ತು.
ಒಂದು ನಿಮಿಷದ ವಿಡಿಯೋ ವೈರಲ್ ಆಗುತ್ತಿದ್ದು ಗಂಭೀರ ಹೆಜ್ಜೆ ಇಟ್ಟುಕೊಂಡು ಹೆಣ್ಣು ಸಿಂಹ ಪುರುಷರ ಶೌಚಾಲಯದಿಂದ ಹೊರಗೆ ಬರುತ್ತದೆ. ಆ ಕಡೆ ಈ ಇಕಡೆ ನೋಡಿ ನಂತರ ಅಲ್ಲಿಂದ ತೆರಳುತ್ತದೆ. ಐಎಫ್‌ಎಸ್ ಅಧಿಕಾರಿ ಸುಸಂತಾ ನಂದಾ ( Susanta Nanda) ಈ ವಿಡಿಯೋವನ್ನು ಹಂಚಿಕೊಂಡು ಸಿಂಹ ತನ್ನ ಸುತ್ತಮುತ್ತಲಿನ ವಾತಾವರಣ ಕ್ಲೀನ್ ಆಗಿ ಇಟ್ಟುಕೊಳ್ಳಲು ನೋಡುತ್ತಿದೆ ಎಂದಿದ್ದರು.
ವಿದಾಯ ಹೇಳಿದ್ದ ಗಜರಾಜ: ಸಾಕು ಪ್ರಾಣಿಗಳೆ ಹಾಗೆ..ನೆಚ್ಚಿಕೊಂಡರೆ ಮುಗಿಯಿತು.. ಅವು ರೋದಿಸುತ್ತವೆ. ಅಳುತ್ತವೆ.. ಮೂಕವಾಗಿಯೇ ತಮ್ಮ ಕಣ್ಣೀರು ಸುರಿಸುತ್ತವೆ. ತೋರಿಕೆಯ ದುಖಃ ಹಂಚುವ ಮಾನವ ಪ್ರಪಂಚದಲ್ಲಿ ಪ್ರಾಣಿಗಳೆ ಮಿಗಿಲು. ಕೇರಳದಲ್ಲಿ ತನ್ನನ್ನು ಸಾಕಿ ಬೆಳೆಸಿದ್ದ ಮಾವುತ ಸಾವನ್ನಪ್ಪಿದ್ದಾಗ ಆತನ ಶವ ನೋಡಲು ಬಂದ ಗಜರಾಜ ಕಣ್ಣೀರು ಸುರಿಸಿದ್ದ.