ಮದುವೆ ಶಾಸ್ತ್ರ ನಡೀತಿದ್ದಾಗ 'ಕಪಿಚೇಷ್ಟೆ', ವಾನರನ ದಾಂಧಲೆಗೆ ವಧು-ವರರು ಸುಸ್ತೋ ಸುಸ್ತು!
ಮದುವೆ ಅನ್ನೋದು ಎಲ್ಲರ ಜೀವನದಲ್ಲಿಯೂ ಬಹಳ ಮುಖ್ಯವಾದ ದಿನ. ಹೀಗಾಗಿ ಸಂಬಂಧಿಕರು, ಸ್ನೇಹಿತರು, ಸಹೋದ್ಯೋಗಿಗಳು ಎಲ್ಲರಿಗೂ ಆಹ್ವಾನ ನೀಡಲಾಗುತ್ತದೆ. ಆದ್ರೆ ಇಲ್ಲೊಂದು ಮದುವೆಗೆ ಮಾತ್ರ ಕರೆಯದ ಅತಿಥಿಯೊಬ್ಬ ಮದ್ವೆಗೆ ಬಂದ್ಬಿಟ್ಟಿದ್ದ. ಮಾತ್ರವಲ್ಲ ಮಂಟಪದಲ್ಲಿಯೇ ದಾಂಧಲೆಯನ್ನೂ ಮಾಡ್ದ. ಯಾರವ ?
ಮದುವೆ ಅನ್ನೋದು ಶುಭಕಾರ್ಯ. ಎಲ್ಲರ ಪಾಲಿಗೂ ವೆಡ್ಡಿಂಗ್ ಡೇ ಎಂದರೆ ಸ್ಪೆಷಲ್ ಆಗಿರುತ್ತದೆ. ಈ ದಿನಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಾರೆ. ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಅಂತ ಮೊದಲೇ ಎಲ್ಲಾ ರೀತಿಯಲ್ಲಿ ಎಚ್ಚರಿಕೆ ವಹಿಸಿರುತ್ತಾರೆ. ಆದರೂ ಮದುವೆ ಅಂದ್ರೆ ನೂರೆಂಟು ವಿಘ್ನ ಅನ್ನೋ ಹಾಗೆ ಏನಾದರೊಂದು ಯಡವಟ್ಟು ಆಗುತ್ತದೆ. ಕೆಲವೊಂದು ಮದುವೆಯಲ್ಲಿ ಮಂಟಪಾನೇ ಕುಸಿದು ಬೀಳುತ್ತದೆ. ಇನ್ನು ಕೆಲವೆಡೆ ಆಹಾರದ ರುಚಿ ಹಾಳಾಗುತ್ತದೆ. ಇದಲ್ಲದೆ ಇನ್ನೂ ಕೆಲವೊಮ್ಮೆ ಮದುವೆ ಆಗಮಿಸಿದ ಸಂಬಂಧಿಕರು ಏನಾದರೊಂದು ವಿಷಯ ತೆಗೆದು ರಂಪ-ರಾಮಾಯಣ ಮಾಡುವುದೂ ಇದೆ. ವರದಕ್ಷಿಣೆ, ಹುಡುಗನ ಕಡೆಯವರನ್ನು ಉಪಚರಿಸಿದ ರೀತಿಯ ಬಗ್ಗೆಯೂ ಗಲಾಟೆಯಾಗುತ್ತದೆ. ಆದ್ರೆ ಈ ಮದುವೆ ಮನೆಯಲ್ಲಿ ನಡೆದ ಗಲಾಟೆ ಮಾತ್ರ ಇದೆಲ್ಲಕ್ಕಿಂತ ವಿಭಿನ್ನ.
ಆಂಧ್ರಪ್ರದೇಶದಲ್ಲಿ ನಡೆದ ಮದುವೆ (Marriage)ಯೊಂದರಲ್ಲಿ ಶಾಸ್ತ್ರಗಳಿಗೆ ಅಡ್ಡಿಯಾಗಿದ್ದು ಸ್ನೇಹಿತರು, ಸಂಬಂಧಿಕರು ಯಾರೂ ಅಲ್ಲ. ಬದಲಿಗೆ ಒಂದು ಕಪಿ (Monkey). ಹೌದು ಅಚ್ಚರಿ ಅನಿಸಿದರೂ ಇದು ನಿಜ. ಮಂಟಪದಲ್ಲಿ ಮದುವೆ ಶಾಸ್ತ್ರ ನಡೆಯುತ್ತಿರುವಾಗ ಕೋತಿಯೊಂದು ವರ ಮತ್ತು ವಧುವಿನ ತಲೆಯ ಮೇಲೆ ಹಾರಿ ಹೋಗಿದೆ. ಎಲ್ಲಿಂದಲೋ ಎಂಟ್ರಿ ಕೊಟ್ಟ ಕೋತಿ ಮದುವೆಯ ಸಂಭ್ರಮವನ್ನೇ ಹಾಳು ಮಾಡಿದೆ. ಸದ್ಯ ಕಪಿಚೇಷ್ಟೆಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗ್ತಿದೆ.
ತಂಗಿಯನ್ನೇ ಮದ್ವೆಯಾಗಿ ಸಂಸಾರ ನಡೆಸಿದ್ದ, ಆರು ವರ್ಷದ ನಂತ್ರ ಗೊತ್ತಾಯ್ತು ಬೆಚ್ಚಿಬೀಳಿಸೋ ಸತ್ಯ!
ಮಂಟಪದಲ್ಲಿ ದಾಂಧಲೆ ಮಾಡಿದ ವಾನರ, ವಧು-ವರರಿಗೆ ಗಾಬರಿ
ಕುಟುಂಬದಲ್ಲಿ ಯಾವುದೇ ಸಮಾರಂಭವು ಯಾವುದೇ ತೊಂದರೆಗಳಿಲ್ಲದೆ ಪೂರ್ಣಗೊಳ್ಳಲು ಸಾಕಷ್ಟು ಪ್ಲಾನಿಂಗ್ ಬೇಕಾಗಿರುತ್ತದೆ. ಹೀಗಾಗಿಯೇ ಮನೆ ಮಂದಿ ತಿಂಗಳುಗಳ ಮೊದಲೇ ಮದುವೆಗೆ ಎಲ್ಲಾ ರೀತಿಯ ಸಿದ್ಧತೆ (Preparation) ಮಾಡಿಕೊಳ್ಳುತ್ತಾರೆ. ವಧು-ವರರು ಸಹ ತಮ್ಮ ಜೀವನದ ಈ ಸ್ಪೆಷಲ್ ಡೇ ಸುಸೂತ್ರವಾಗಿ ನಡೆಯಬೇಕು ಎಂದೇ ಅಂದುಕೊಳ್ಳುತ್ತಾರೆ. ಹೀಗಿದ್ದೂ ಹಲವಾರು ಬಾರಿ ಎಡವಟ್ಟು ಆಗೋದಿದೆ. ಆಂಧ್ರಪ್ರದೇಶದ ಈ ಮದುವೆ ಮನೆಯಲ್ಲಿಯೂ ಆಗಿದ್ದು ಇದೇ.
ಮಂಟಪದಲ್ಲಿ ವಧು-ವರರು (Bride-bridegroom) ಪರಸ್ಪರ ಎದುರು-ಬದುರು ಕುಳಿತಿರುತ್ತಾರೆ. ಇಬ್ಬರೂ ತಲೆಯ ಮೇಲೆ ಪರಸ್ಪರ ಅಕ್ಷತೆಯನ್ನು ಹಾಕಿಕೊಳ್ಳುತ್ತಿರುತ್ತಾರೆ. ಈ ಸಂದರ್ಭದಲ್ಲಿ ಕೋತಿ ವಧು-ವರರ ಇಬ್ಬರ ತಲೆಯ (Head) ಮೇಲೆ ಹಾರಿ ಹೋಗುತ್ತದೆ. ಕೋತಿಯ ಹಠಾತ್ ದಾಳಿ ಇಬ್ಬರೂ ದಂಗಾಗುತ್ತಾರೆ. ಅದರಲ್ಲೂ ವರನು ಒಮ್ಮೆಗೇ ಕಕ್ಕಾಬಿಕ್ಕಿಯಾಗುತ್ತಾನೆ. ಕೋತಿಯ ದಿಢೀರ್ ಆಗಮನದಿಂದ ವಧು-ವರರು ಇಬ್ಬರೂ ಗಾಬರಿಯಾಗುವುದನ್ನು ವೀಡಿಯೋದಲ್ಲಿ ನೋಡಬಹುದು. ಇಬ್ಬರ ತಲೆಗೂ ಹಾರಿ ಕೋತಿ ಅಕ್ಕಿಯನ್ನು ಹೆಕ್ಕಿ ಕೋತಿ ಅಲ್ಲಿಂದ ಹೊರಟು ಹೋಗುತ್ತದೆ.
ಸಂಪ್ರದಾಯ ಉಳಿಸಲು ಎತ್ತಿನ ಗಾಡಿ ಏರಿ ಬಂದ ವಧು, ನವಜೋಡಿಯ ಕಾರ್ಯಕ್ಕೆ ಭೇಷ್ ಎಂದ ನೆಟ್ಟಿಗರು
ಈ ಮೊದಲೇ ಹೇಳಿದಂತೆ ಮದುವೆ ಮನೆಯಲ್ಲಿ ಎಲ್ಲವೂ ನಾವಂದುಕೊಂಡಂತೆ ನಡೆಯುವುದಿಲ್ಲ ಎಂಬುದು ಈ ಘಟನೆಯಿಂದ ಸಾಬೀತಾಗಿದೆ. ಆದರೆ ಕೋತಿ ಆ ಕಡೆ ಈ ಕಡೆ ಹಾರಿದ್ದು ಬಿಟ್ಟರೆ ಮದುವೆ ಮನೆಯಲ್ಲಿ ಇನ್ನೇನು ರಂಪಾಟ ಮಾಡಿಲ್ಲ ಅನ್ನೋದೆ ಸಮಾಧಾನಕರ ವಿಚಾರ.ಅದೇನೆ ಇರ್ಲಿ, ಮದುವೆ ಮನೆಯಲ್ಲಿ ಸಂಬಂಧಿಕರ ರಂಪಾಟಕ್ಕಿಂತ ಇದುವೇ ವಾಸಿ ಅಂತಿದ್ದಾರೆ ಕೆಲವರು.
ಕುಡಿದು ತೂರಾಡುತ್ತಾ ಮಂಟಪಕ್ಕೆ ಬಂದು ನಿದ್ರೆ ಜಾರಿದ ವರ, ಮದುವೆ ಕ್ಯಾನ್ಸಲ್ ಮಾಡಿ ಹೊರನಡೆದ ವಧು!