ಮುಟ್ಟಿನ ಫೋಟೋ ಅಪ್‌ಲೋಡ್‌ ಮಾಡಿದವಳಿಗೆ ತಟ್ಟಿದ ಬಿಸಿ

First Published 2, Aug 2018, 9:40 PM IST
Blogger Posts a Picture of Period Blood Stain, After What Happened
Highlights

ಇಂದು ನಾವು 2018ರಲ್ಲಿ ಇದ್ದೇವೆ. ಲೈಂಗಿಕ ವಿಚಾರಗಳು, ಋತುಸ್ರಾವ ಮುಂತಾದ ವಿಚಾರಗಳನ್ನು ಮುಕ್ತವಾಗಿ ಮಾತನಾಡುವ ಹಂತಕ್ಕೆ ಕೆಲವೊಂದು ಕಡೆ ತಲುಪಿದ್ದೇವೆ. ಪಾಶ್ಚಾತ್ಯರು ನಮಗಿಂತಲೂ ಮುಂದೆ ಇದ್ದಾರೆ ಎಂಬ ನಂಬಿಕೆಯಲ್ಲಿದ್ದೇವೆ. ಆದರೆ ಇದೆಲ್ಲವೂ ಸುಳ್ಳು ಎಂಬ ಕತೆಯನ್ನು ಈ ಫೋಟೋ ಹೇಳುತ್ತಿದೆ. ಅಂಥದ್ದು ಏನಪ್ಪಾ ಆಯ್ತು ಅಂತೀರಾ? ಈ ಸುದ್ದಿ ಓದಿ. 

ಲಂಡನ್[ಆ.2]  ಇಂದು ಪ್ರತಿಯೋದು ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಕಾಲಕ್ಕೆ ಬಂದು ನಿಂತಿದ್ದೇವೆ. ಯುವತಿಯೊಬ್ಬಳು ಅಂತೆ ತನ್ನ ಪಿರಿಯಡ್ಸ್ ನ ರಕ್ತ ಸ್ರಾವದ ಫೋಟೋ ವನ್ನು ಇನ್ ಸ್ಟಾಗ್ರಾಮ್ ಗೆ ಅಪ್ ಲೋಡ್ ಮಾಡಿದ್ದಾಳೆ.ಆದರೆ ಇದಾದ ಮೇಲೆ ಆಕೆ ಅನೇಕ ಫಾಲೋವರ್ಸ್ ಗಳನ್ನು ಕಳೆದುಕೊಂಡಿದ್ದಾಳೆ.

ನಟಿಯ ಬೆಡ್‌ರೂಮ್‌ನ ಸೆಕ್ಸ್‌ಟಾಯ್ ಫೋಟೋ ವೈರಲ್!

ಅಲ್ಲದೇ ನೆಗೆಟಿವ್ ಕಮೆಂಟ್ ಕೂಡ ಕೇಳಬೇಕಾಗಿ ಬಂದಿದೆ. ಲಂಡನ್ ನ ಗ್ರೇಸ್ ಎನ್ನುವ ಯುವತಿ ಫೋಟೋ ಅಪ್ ಲೋಡ್ ಮಾಡಿದ್ದಕ್ಕೆ 150ಕ್ಕೂ ಅಧಿಕ ಫಾಲೋವರ್ಸ್ ಕಳೆದುಕೊಂಡಿದ್ದಾರೆ. ಆಧುನಿಕತೆಯ ತುತ್ತ ತುದಿಗೆ ಬಂದು ನಿಂತಿದ್ದರೂ ಮಡಿವಂತಿಕೆಯ ಕವಚದಿಂದ ಇನ್ನು ಹೊರಬಂದಿಲ್ಲ ಎಂಬುದು ಈ ಘಟನೆಯಿಂದ ಮತ್ತೆ ಸಾಬೀತಾಗಿದೆ.

loader