ಕಿಡಿಗೇಡಿಗಳು ಅದೆಂತಹ ಫೋಟೋ ಶಾಪ್ ಮಾಡ್ತಾರೆ ಎಂದು ಹೇಳಲೇ ಸಾಧ್ಯವಿಲ್ಲ ಬಿಡಿ. ಪಾಪ ಈ ನಟಿ ಮಾರ್ನಿಂಗ್ ಸೆಲ್ಫಿಯೊಂದನ್ನು ಹಾಕಿದ್ದರೆ ಅದಕ್ಕೆ ಇನ್ನೇನನ್ನೋ ಸೇರಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದರು.

ಮುಂಬಯಿ[ಜೂ.28] ಬಾಲಿವುಡ್ ನಟಿ ನೇಹಾ ಶರ್ಮಾ ಅವರ ಸೆಲ್ಫಿ ಫೋಟೋವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಕಾರಣ ಇಷ್ಟೆ ಆ ಫೋಟೋದಲ್ಲಿ ನಟಿಯೊಂದಿಗೆ ಸೆಕ್ಸ್ ಟಾಯ್ ವೊಂದು ಕಾಣಸಿಗುತ್ತದೆ.

ಈ ಫೋಟೋದ ಸತ್ಯಾಸತ್ಯತೆ ತಿಳಿಯದೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಮಾರ್ನಿಂಗ್ ಸೆಲ್ಫಿ ಎಂದು ಹೇಳಿ ಪೋಸ್ಟ್ ಮಾಡಿದ್ದ ಫೋಟೋವನ್ನು ಯಾರೋ ಕಿಡಿಗೇಡಿಗಳು ಫೋಟೋ ಶಾಪ್ ಮಾಡಿ ಅದರಲ್ಲಿ ಸೆಕ್ಸ್ ಟಾಯ್‌ವೊಂದನ್ನು ಕುಳ್ಳಿರಿಸಿದ್ದರು.

ಮತ್ತೆ ಅಸಲಿ ಫೋಟೋವನ್ನು ಶೇರ್ ಮಾಡಿರುವ ನೇಹಾ ಶರ್ಮಾ ಕಿಡಿಗೇಡಿಗಳ ಅಸಭ್ಯ ವರ್ತನೆಗೆ ನಾಚಿಕೆಯಾಗಬೇಕು ಎಂದು ತಿರುಗೇಟು ನೀಡಿದ್ದಾರೆ. ನಿರಂತರ ಪ್ರತಿಕ್ರಿಯೆಗೆ ಬೇಸತ್ತ ನಟಿ ಮತ್ತೊಮ್ಮೆ ಟ್ವಿಟರ್‌ನಲ್ಲಿ ಫೋಟೋ ಶೇರ್ ಮಾಡೊದ್ದು ‘ಇದು ನೈಜ ಫೋಟೋ., ಈ ರೀತಿಯ ಅಸಭ್ಯ ವರ್ತನೆ ಮಾಡಿದ ಎಲ್ಲರಿಗೂ ಉತ್ತರ ಇಲ್ಲಿದೆ’ ಎಂದು ಝಾಡಿಸಿದ್ದಾರೆ.

Scroll to load tweet…
Scroll to load tweet…