ಪ್ರತಿಯೊಬ್ಬ ತಂದೆ-ತಾಯಿಗೂ ತಮಗೆ ಹುಟ್ಟುವ ಮಗು ತಮ್ಮನ್ನೇ ಹೋಲಬೇಕೆನ್ನುವ ಆಸೆ, ತವಕ ಇದ್ದೇ ಇರುತ್ತದೆ. ಮಗು ಹುಟ್ಟಿದ ಕೂಡಲೇ ಮಗು ಯಾರ ಹಾಗೆ ಇದೆ, ಅಪ್ಪನನ್ನು ಹೋಲುತ್ತದೆಯಾ, ಅಮ್ಮನನ್ನು ಹೋಲುತ್ತದೆಯಾ ಎಂಬ ಚರ್ಚೆ ಶುರುವಾಗುತ್ತದೆ. ಇಲ್ಲೊಂದು ಅಪರೂಪದ ಪ್ರಕರಣ ನಡೆದಿದೆ. ಸೋಫಿಯಾ ಬ್ಲೇಕ್ ಎನ್ನುವ ಮಹಿಳೆ ಹೆಣ್ಣು ಮಗಳಿಗೆ ಜನ್ಮ ನೀಡುತ್ತಾರೆ. ಅವರು ಕಪ್ಪು ಜನಾಂಗಕ್ಕೆ ಸೇರಿದ ಮಹಿಳೆ. ಅಚ್ಚರಿ ಎಂಬಂತೆ ಅವರ ಮಗಳು ಬೆಳ್ಳಗೆ ಹುಟ್ಟಿದ್ದಳು. ಇವಳು ಬೆಳೆಯುತ್ತಾ ತಮ್ಮ ಬಣ್ಣವನ್ನು ಹೋಲಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಅವರ ನಿರೀಕ್ಷೆ ಸುಳ್ಳಾಯಿತು.
ಬೆಂಗಳೂರು (ಡಿ.22): ಪ್ರತಿಯೊಬ್ಬ ತಂದೆ-ತಾಯಿಗೂ ತಮಗೆ ಹುಟ್ಟುವ ಮಗು ತಮ್ಮನ್ನೇ ಹೋಲಬೇಕೆನ್ನುವ ಆಸೆ, ತವಕ ಇದ್ದೇ ಇರುತ್ತದೆ. ಮಗು ಹುಟ್ಟಿದ ಕೂಡಲೇ ಮಗು ಯಾರ ಹಾಗೆ ಇದೆ, ಅಪ್ಪನನ್ನು ಹೋಲುತ್ತದೆಯಾ, ಅಮ್ಮನನ್ನು ಹೋಲುತ್ತದೆಯಾ ಎಂಬ ಚರ್ಚೆ ಶುರುವಾಗುತ್ತದೆ. ಇಲ್ಲೊಂದು ಅಪರೂಪದ ಪ್ರಕರಣ ನಡೆದಿದೆ. ಸೋಫಿಯಾ ಬ್ಲೇಕ್ ಎನ್ನುವ ಮಹಿಳೆ ಹೆಣ್ಣು ಮಗಳಿಗೆ ಜನ್ಮ ನೀಡುತ್ತಾರೆ. ಅವರು ಕಪ್ಪು ಜನಾಂಗಕ್ಕೆ ಸೇರಿದ ಮಹಿಳೆ. ಅಚ್ಚರಿ ಎಂಬಂತೆ ಅವರ ಮಗಳು ಬೆಳ್ಳಗೆ ಹುಟ್ಟಿದ್ದಳು. ಇವಳು ಬೆಳೆಯುತ್ತಾ ತಮ್ಮ ಬಣ್ಣವನ್ನು ಹೋಲಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಅವರ ನಿರೀಕ್ಷೆ ಸುಳ್ಳಾಯಿತು.
"ನನ್ನ ಮಗಳ ಜೊತೆ ರಸ್ತೆಯಲ್ಲಿ ಓಡಾಡುವಾಗ ಕೆಲವರು ನಮ್ಮನ್ನು ಣೊಡಿ ಕಮೆಂಟ್ ಮಾಡುತ್ತಾರೆ. ಅದನ್ನು ಎದುರಿಸುವುದು ಕಷ್ಟವಾಗುತ್ತದೆ. ಮಗಳು ಚಿಕ್ಕವಳಿದ್ದಾಗ ಹೇಗೋ ನಡೆಯುತ್ತಿತ್ತು. ಈಗ ದೊಡ್ಡವಳಾಗಿದ್ದಾಳೆ. ಹಾಗಾಗಿ ಸಂಭಾಳಿಸುವುದು ಕಷ್ಟವಾಗುತ್ತದೆ. ಅವಳು ಆಗಾಗ ಕೇಳುತ್ತಾಳೆ; ನೀವೆಲ್ಲಾ ಕಪ್ಪಗಿದ್ದೀರಿ. ನಾನು ಮಾತ್ರ ಯಾಕೆ ಬಿಳಿ ಇದ್ದೇನೆ ಎಂದು. ಅವಳಿಗೆ ವಿವರಿಸಿದರೂ ಅರ್ಥವಾಗುವುದಿಲ್ಲ" ಎಂದು ತಾಯಿ ಸೋಫಿಯಾ ಹೇಳುತ್ತಾರೆ.
ಬಹಳ ಅಪರೂಪದ ಪ್ರಕರಣ ಇದಾಗಿದ್ದು, ಮಿಲಯನ್’ನಲ್ಲಿ ಒಂದು ಇಂತಹ ಅಚ್ಚರಿ ನಡೆಯುತ್ತದೆ ಎನ್ನಲಾಗಿದೆ.
