Asianet Suvarna News Asianet Suvarna News

ಫಳ ಫಳ ಹೊಳೆಯೋ ತ್ವಚೆಗೆ ಬ್ಲ್ಯಾಕ್ ಫುಡ್....

ತ್ವಚೆ ಕಪ್ಪಾಗಿದ್ದರೆ ನಿಮಗೆ ಇಷ್ಟವಾಗುವುದೇ?  ಇಲ್ಲ ತಾನೇ? ಹಾಗಿದ್ದರೆ ಈ ಕಪ್ಪು ಆಹಾರ ಸೇವಿಸಿ. ಹೌದು, ಕೆಲವೊಂದು ಕಪ್ಪು ಆಹಾರಗಳು ತ್ವಚೆ ಬಿಳುಪಾಗಲು ಸಹಕರಿಸುತ್ತೆ. ಅಂಥ ಆಹಾರಗಳು ಯಾವವು? 

Black foods for healthy skin
Author
Bangalore, First Published May 9, 2019, 3:48 PM IST

ಕಪ್ಪು ಯಾವಾಗಲೂ ಒಳ್ಳೆಯದಲ್ಲ ಅನ್ನೋ ಆಲೋಚನೆ ಹೆಚ್ಚಿನ ಜನರ ತಲೆಯಲ್ಲಿರುತ್ತದೆ. ಆದರೆ ಕಪ್ಪು ಎಷ್ಟು ಚೆಂದ ಅನ್ನೋದು ಗೊತ್ತಾ? ಚೆಂದ ಅನ್ನೋದಕ್ಕಿಂತ ಆ ಕಪ್ಪು ವಸ್ತುಗಳಿಂದ ಸ್ಕಿನ್ ಎಷ್ಟು ಸುಂದರವಾಗುತ್ತದೆ ಅನ್ನೋದು ಗೊತ್ತಾ? ಸೌಂದರ್ಯ ಹೆಚ್ಚಿಸುವಲ್ಲಿ ಯಾವ ಕಪ್ಪು ವಸ್ತುಗಳು ಸಹಕರಿಸುತ್ತೆ... 

ಕಪ್ಪು ಕಡ್ಲೆ: ಇದರಲ್ಲಿ ಆ್ಯಂಟಿ ಆ್ಯಕ್ಸಿಡೆಂಟ್ಸ್‌, ಫೈಬರ್‌ ಅಧಿಕವಾಗಿರುತ್ತದೆ. ಇವುಗಳನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ತ್ವಚೆಯ ಬಣ್ಣ ನಿಖರವಾಗುತ್ತಾ ಹೋಗುತ್ತದೆ. 

ಬ್ಲಾಕ್ ಸಾಲ್ಟ್ : ಇದರಲ್ಲಿ ಐರನ್‌, ಕ್ಯಾಲ್ಷಿಯಂ ಹೆಚ್ಚಿರುತ್ತದೆ. ಸೌಂದರ್ಯ ಹೆಚ್ಚಿಸಲೂ ಸಹಕರಿಸುತ್ತದೆ. ಬ್ಲಾಕ್ ಸಾಲ್ಟನ್ನು ಕೂದಲ ಸಮಸ್ಯೆ ನಿವಾರಿಸಲು, ಇದು ಉತ್ತಮ ಕ್ಲೆನ್ಸೆರ್ ಆಗಿ ಕಾರ್ಯ ನಿರ್ವಹಿಸುತ್ತದೆ. 

ಬ್ಲ್ಯಾಕ್‌ ಕಾಫಿ: ಬ್ಲಾಕ್ ಕಾಫಿ ಸೌಂದರ್ಯ ಹೆಚ್ಚಿಸುತ್ತದೆ. ಡಾರ್ಕ್ ಸರ್ಕಲ್, ವಯಸ್ಸಾಗುವಿಕೆಯ ಲಕ್ಷಣ ಕಡಿಮೆ ಮಾಡಲು ಇದು ಪರ್ಫೆಕ್ಟ್. ಇದನ್ನು ಮುಖಕ್ಕೆ ಹಚ್ಚಿದರೆ ಮೊಡವೆ ನಿವಾರಣೆಯಾಗುತ್ತದೆ.

ಕಪ್ಪು ದ್ರಾಕ್ಷಿ: ಇದರಲ್ಲಿರುವ ಕಾರ್ಬೋಹೈಡ್ರೈಟ್‌ ಮತ್ತು ನೈಟ್ರೇಟ್ಸ್‌ ಮುಖದ ಹೊಳಪನ್ನು ಹೆಚ್ಚಿಸುತ್ತದೆ. ಕೂದಲು ಚೆನ್ನಾಗಿ ಬೆಳೆಯಲು ಹಾಗೂ ಫೇಷಿಯಲ್‌ಗೆ ಇದು ಸಹಕಾರಿ. 

ಡಾರ್ಕ್‌ ಚಾಕಲೇಟ್‌: ಇದು ಕೊಲೆಸ್ಟ್ರಾಲ್‌ ಲೆವೆಲ್‌ ಕಡಿಮೆ ಮಾಡುತ್ತದೆ. ಮೂಡ್‌ ಚೆನ್ನಾಗಿಡುತ್ತದೆ. ಇದರಿಂದ ನಿಮ್ಮ ಮುಖವೂ ಫ್ರೆಶ್‌ ಆಗಿರುತ್ತದೆ.

ಬ್ಲ್ಯಾಕ್‌ ಟೀ: ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ ಸ್ಟ್ರೆಸ್‌‌ ಕಡಿಮೆ ಮಾಡುತ್ತದೆ. ಬ್ಲ್ಯಾಕ್ ಟೀ ಯಿಂದ ಕೂದಲು, ಚರ್ಮದ ಆರೋಗ್ಯ ಒಳಿತು. 

Follow Us:
Download App:
  • android
  • ios