ಬಿರಿಯಾನಿ ಪ್ರಿಯರ ಫೇವರಿಟ್ ಕ್ಲಬ್

https://static.asianetnews.com/images/authors/b348a094-0bef-5801-a1f6-61e57071185f.jpg
First Published 13, Jul 2018, 10:45 AM IST
Biryani lovers club
Highlights

ಒಟ್ಟು 14 ಸಾವಿರ ಮಂದಿ. ಇವರೆಲ್ಲರೂ ಬಿರಿಯಾನಿ ಪ್ರಿಯರು. ಆಗಾಗ ಬೇರೆ ಬೇರೆ ಶೈಲಿಯ ಬಿರಿಯಾನಿ ಟೇಸ್ಟ್ ನೋಡಲೆಂದೇ ಈವೆಂಟ್ಗಳನ್ನು ಆಯೋಜನೆ ಮಾಡಿಕೊಂಡು ತಂಡ ಕಟ್ಟಿಕೊಂಡು ಹೋಗುತ್ತಾರೆ. ಎಲ್ಲರೂ ಒಟ್ಟಾಗಿ ಸೇರಿದಾಗ ಅನ್‌ಲಿಮಿಟೆಡ್ ಬಿರಿಯಾನಿ, ರೆಸಿಪಿಗಳ ಚರ್ಚೆ, ತಿಂದ ಬಿರಿಯಾನಿಯ ಮೆಲುಕು ಇವಿಷ್ಟಕ್ಕೆ ಮಾತ್ರ ಜಾಗ. ಬೆಂಗಳೂರು ಬಿರಿಯಾನಿ ಕ್ಲಬ್ ಮಾಡಿಕೊಂಡು ಫೇಸ್‌ಬುಕ್, ವಾಟ್ಸಪ್ ಮೂಲಕ ಒಟ್ಟಿಗೆ ಸೇರಿ ತಿಂದುಂಡು ಎಂಜಾಯ್ ಮಾಡುತ್ತಿದ್ದಾರೆ 

 

ಒಂದು ಬಾರಿ ಅಕ್ಕಿಪೇಟೆಯಲ್ಲಿ ದೊನ್ನೆ ಬಿರಿಯಾನಿ, ಮತ್ತೊಮ್ಮೆ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಬೊಂಬು ಬಿರಿಯಾನಿ, ಶಿವಾಜಿ ಹೋಟೆಲ್‌ನಲ್ಲಿ ಭರ್ಜರಿ ಬಿರಿಯಾನಿ, ಹೊಸಕೋಟೆಯಲ್ಲಿ ಬ್ರೇಕ್ ಫಾಸ್ಟ್ ಬಿರಿಯಾನಿ, ಕೋರಮಂಗಲದ ಶರೀಫ್ ಹೋಟೆಲ್‌ನಲ್ಲಿ ಬೆಳಿಗ್ಗೆ 4 ಗಂಟೆಗೆ ರಂಜಾನ್ ಬಿರಿಯಾನಿ, ಮರಾಠಿ ರುಚಿ ಗರಂನಲ್ಲಿ ಮರಾಠಿ ಶೈಲಿ ಬಿರಿಯಾನಿ, ಮೈಸೂರಿನ ಹನುಮಂತು ಹೋಟೆಲ್‌ನಲ್ಲಿ ಹನುಮಂತು ಬಿರಿಯಾನಿ......

- ಹೀಗೆ ಒಮ್ಮೊಮ್ಮೆ ಒಂದೊಂದು ಈವೆಂಟ್ ಮಾಡಿಕೊಂಡು ಅನ್ ಲಿಮಿಟೆಡ್ ಆಯಂಡ್ ಡಿಫರೆಂಟ್ ಬಿರಿಯಾನಿ ಟೇಸ್ಟ್ ಮಾಡುತ್ತಿದೆ ‘ಬೆಂಗಳೂರು ಬಿರಿಯಾನಿ ಕ್ಲಬ್’.

ಭಿನ್ನ ಭಿನ್ನ ಬಿರಿಯಾನಿ ಟೇಸ್ಟ್ ಮಾಡುವುದು, ಅದರ ರೆಸಿಪಿಗಳ ಬಗ್ಗೆ ಚರ್ಚೆ ಮಾಡುವುದು, ದೇಶ- ವಿದೇಶದ ಎಲ್ಲಾ ಬಗೆಯ ಬಿರಿಯಾನಿಗಳ ಬಗ್ಗೆ ತಿಳಿದುಕೊಳ್ಳುವುದೇ ಈ ತಂಡದ ಮುಖ್ಯ ಕೆಲಸ. ಶಿವಮೊಗ್ಗದ ರೇಣುಕೇಶ್ ಬಿಂಗೇರಿ, ಬೆಂಗಳೂರಿನ ವಿನಯ್ ನಾಗರಾಜು, ನವನೀತ್ ತಿಮ್ಮಪ್ಪ ಎನ್ನುವ ಈ ಮೂವರು ಬಿರಿಯಾನಿ ಪ್ರಿಯರು 1017ರಲ್ಲಿ ಒಟ್ಟಿಗೆ ಸೇರಿ ಕಟ್ಟುದ್ದು ಬಿರಿಯಾನಿ ಪ್ರಿಯರ ತಂಡ. ಐಟಿ ಉದ್ಯೋಗಿಗಳಾಗಿರುವ ಇವರು ತಿಂಗಳು, ಎರಡು ತಿಂಗಳಿಗೆ ಒಮ್ಮೆ ಬಿರಿಯಾನಿ ಈವೆಂಟ್ ಆರ್ಗನೈಜ್ ಮಾಡಿ, ಬಿರಿಯಾನಿ ಟ್ರೆಂಡ್ಗೆ ರಹದಾರಿ ತೆರೆದಿದ್ದಾರೆ.

14 ಸಾವಿರ ಜನ ಸದಸ್ಯರು

2017ರಲ್ಲಿ ಹೀಗೊಂದು ಟ್ರೆಂಡ್ ಆರಂಭಿಸಿದ ಇವರು ಫೇಸ್ ಬುಕ್‌ನಲ್ಲಿ ‘ಬೆಂಗಳೂರು ಬಿರಿಯಾನಿ ಕ್ಲಬ್’ ಶುರು ಮಾಡಿ ಇಂದಿಗೆ ಬರೋಬ್ಬರಿ 14 ಸಾವಿರ ಬಿರಿಯಾನಿ ಪ್ರಿಯರನ್ನು ತಂಡದೊಳಕ್ಕೆ ತಂದಿದ್ದಾರೆ. ಇದರಲ್ಲಿ ಹೆಚ್ಚಿನವರು ಬೆಂಗಳೂರಿನವರೇ ಆದರೂ ದೇಶ, ವಿದೇಶಗಳಲ್ಲಿಯೂ ಕ್ಲಬ್‌ನ ಸಕ್ರಿಯ ಸದಸ್ಯರಿದ್ದಾರೆ. 12 ವಯಸ್ಸಿನ ಮಗುವಿನಿಂದ ಹಿಡಿದು, 70 ವರ್ಷದ ಹಿರಿಯರೂ ಕ್ಲಬ್ ಮೂಲಕ ಬಿರಿಯಾನಿಯ ಟೇಸ್ಟ್ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಒಬ್ಬ ಸದಸ್ಯರು ಬೆಂಗಳೂರಿಗೆ ಬಂದು ಬಿರಿಯಾನಿ ಈವೆಂಟ್ನಲ್ಲಿ ಭಾಗವಹಿಸಿದ್ದು ವಿಶೇಷ.

ಟೇಸ್ಟ್ ಮಾಡುವುದೇ ಉದ್ದೇಶ

‘ನಾನು ನನ್ನ ಫ್ರೆಂಡ್ಸ್ ಎಲ್ಲರೂ ಬಿರಿಯಾನಿ ಪ್ರಿಯರು. ನಾನು ನೋಡಿದ ಹಾಗೆ ಬಿರಿಯಾನಿ ಸ್ಪೆಷಲ್ ಡಿಶ್. ದೇಶಾದ್ಯಂತ, ಪ್ರಪಂಚದಾತ್ಯಂತ ಎಲ್ಲ ಕಡೆಯಲ್ಲೂ ಬೇರೆ ಬೇರೆ ರೀತಿಯ ಬಿರಿಯಾನಿಗಳು ಸಿಕ್ಕುತ್ತವೆ. ಹಾಗಾಗಿ ಇದಕ್ಕೆ ಯಾವುದೇ ಪ್ರದೇಶದ ಮಿತಿಯಿಲ್ಲ. ಅದಕ್ಕಾಗಿ ಎಲ್ಲಾ ಬಗೆಯ ಬಿರಿಯಾನಿ ಟೇಸ್ಟ್ ಮಾಡಬೇಕು. ಎಲ್ಲದರ ರೆಸಿಪಿಯನ್ನು ತಿಳಿಯಬೇಕು ಎಂದು ಹೀಗೊಂದು ಪ್ರಯತ್ನ ಮಾಡಿದೆವು. ಇದು ನಾವು ಅಂದುಕೊಂಡದ್ದಕ್ಕಿಂತ ಹೆಚ್ಚು ಯಶಸ್ವಿಯಾಗಿ ಸಾಗುತ್ತಿದೆ. ಫಿಜ್ಜಾ, ಬರ್ಗರ್ ರೀತಿ ಇದಕ್ಕೂ ಪಬ್ಲಿಸಿಟಿ ಕೊಡಬೇಕು, ಎಲ್ಲಾ ಬಗೆಯ ಬಿರಿಯಾನಿ ಟೇಸ್ಟ್ ಮಾಡಬೇಕು ಎನ್ನುವುದೇ ನಮ್ಮ ಉದ್ದೇಶ’ ಎಂದು ಬಿರಿಯಾನಿ ಪ್ರೀತಿ ತೆರೆದಿಡುತ್ತಾರೆ ರೇಣುಕೇಶ್ ಬಿಂಗೇರಿ.

ಹೊಸ ಗೆಳೆಯರು, ಹೊಸ ಬಗೆಯ ಬಿರಿಯಾನಿ

‘ಪ್ರತಿ ಬಾರಿ ಈವೆಂಟ್ ಆರ್ಗನೈಜ್ ಮಾಡಿದಾಗಲೂ ಭಿನ್ನವಾಗಿಯೇ ಮಾಡುತ್ತೇವೆ. ಕಳೆದ ರಂಜಾನ್‌ನಲ್ಲಿ ಶರೀಫ್ ಎಂಬುವವರ ಹೋಟೆಲ್‌ಗೆ ಸುಮಾರು ೮೦ ಜನ ಹೋಗಿದ್ದೆವು. ರಂಜಾನ್ ವೇಳೆ ಬೆಳಿಗ್ಗೆ ನಾಲ್ಕು ಗಂಟೆ ಒಳಗೆ ಊಟ ಮಾಡುವ ಪದ್ಧತಿ ಇದೆ. ಅದೇ ರೀತಿ ನಾವು ಬೆಳಿಗ್ಗೆ ನಾಲ್ಕು ಗಂಟೆಯಲ್ಲೇ ಬಿರಿಯಾನಿ ಸವಿ ನೋಡಿ ಬಂದದ್ದಾಗಿತ್ತು. ಇನ್ನು ಮೈಸೂರಿನ ಹನುಮಂತು ಹೋಟೆಲ್‌ಗೆ ಹೋಗುವಾಗ ೬೦ ಮಂದಿ ಟ್ರೈನ್ ನಲ್ಲೇ ಹೋದೆವು. ಹೋಗುವಾಗೆಲ್ಲಾ ಬಿರಿಯಾನಿ ರೆಸಿಪಿ, ಬಿರಿಯಾನಿ ಇತಿಹಾಸದ್ದೇ ಮಾತು. ಅಲ್ಲಿಗೆ ಹೋಗಿ ಚೆನ್ನಾಗಿ ಹೊಸ ಗೆಳೆಯರೊಂದಿಗೆ ಹೊಸ ಬಗೆಯ ಬಿರಿಯಾನಿ ಟೇಸ್ಟ್ ಮಾಡಿ ಬರುವುದೇ ವಿಶೇಷ. ಪ್ರತಿಯೊಂದು ಪ್ರಸಿದ್ಧ ಹೋಟೆಲ್ ಕೂಡ ತನ್ನದೇ ಆದ ರೆಸಿಪಿ ಸ್ಟೈಲ್ ಹೊಂದಿರುತ್ತೆ. ಅದನ್ನವರು ನಮಗೆ ಹೇಳಿಕೊಡುವುದಿಲ್ಲ. ಆದರೆ ನಾವು ಅದರ ಟೇಸ್ಟ್ ಮಾಡಿ ಏನೇನು ಹಾಕಿರಬಹುದು, ಹೇಗೆ ತಯಾರು ಮಾಡಿರಬಹುದು ಎಂಬುದರ ಕುರಿತು ಚರ್ಚೆ ಮಾಡುತ್ತೇವೆ. ಒಟ್ಟಿನಲ್ಲಿ ನಮಗೆ ಇಡೀ ಈವೆಂಟ್ ಬಿರಿಯಾನಿಮಯವಾದರೂ ಇನ್ನುಳಿದ ನಾನ್ ವೆಜ್ ರೆಸಿಪಿಗಳಿಗೂ ಅವಕಾಶ ಇರುತ್ತದೆ’ ಎನ್ನುತ್ತಾರೆ ರೇಣುಕೇಶ್.

ದಕ್ಷಿಣ ಆಫ್ರಿಕಾದ ಅತಿಥಿ

ಮುಂದಿನ ಈವೆಂಟ್ ಅನ್ನು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಪ್ರಕಟ ಮಾಡಲಾಗುತ್ತದೆ. ಅದಕ್ಕೆ ತಕ್ಕಂತೆ ಫೀ ಅನ್ನೂ ನಿಗದಿ ಮಾಡಿ ತೆಗೆದುಕೊಳ್ಳಲಾಗುತ್ತೆ. ಎಲ್ಲೇ ಹೋಗಲಿ ಅನ್ ಲಿಮಿಟೆಡ್ ಬಿರಿಯಾನಿ ಇದ್ದೇ ಇರುತ್ತದೆ. ಇದನ್ನೆಲ್ಲಾ ನೋಡಿದ ದಕ್ಷಿಣ ಆಫ್ರಿಕಾದ ವ್ಯಕ್ತಿಯೊಬ್ಬರು ತಾವು ಭಾರತಕ್ಕೆ ಬಂದಾಗಿ ಬಿರಿಯಾನಿ ಕ್ಲಬ್‌ನೊಂದಿಗೆ ಸೇರಿಕೊಂಡು ಬಿರಿಯಾನಿ ಸವಿ ನೋಡಿ, ಇವರ ಕಾರ್ಯಕ್ಕೆ ಅಪಾರ ಮೆಚ್ಚುಗೆಯನ್ನೂ ಸೂಚಿಸಿ ಹೋಗಿದ್ದಾರೆ.

loader