ಏನೇನೋ ಚಿತ್ರ ವಿಚಿತ್ರ ಫೇಷಿಯಲ್‌ಗಳಿವೆ. ಅವುಗಳಲ್ಲಿ ಹಕ್ಕಿ ಹಿಕ್ಕೆಯಿಂದ ಮಾಡಿದ ಫೇಷಿಯಲ್ ಕೂಡ ಒಂದು. ಈ ಫೇಷಿಯಲ್ ಬಗ್ಗೆ ಕೇಳಲು ವಿಚಿತ್ರ ಎನಿಸಿದರೂ ಸೌಂದರ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಟಿಯರು ಯಾವಾಗಲೂ ಚಿರ ಯೌವ್ವನ ಹಾಗೆ ಉಳಿಸಿಕೊಳ್ಳಲು ಬೇರೆ ಬೇರೆ ಥೆರಪಿ ಮಾಡುತ್ತಾರೆ. ಅದರಲ್ಲಿ ಇದು ಮುಖ್ಯವಾಗಿದೆ. 

ಕಾಂತಿಯುತ ಕೂದಲಿಗೆ ಕೆಫಿನ್ ಟ್ರೀಟ್ಮೆಂಟ್!

ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಥೆರಪಿ ಹೆಸರುವಾಸಿ. ಜನಪ್ರಿಯ ಫ್ಯಾಷನ್ ಡಿಸೈನರ್ ವಿಕ್ಟೊರಿಯಾ ಬೆಹಕಂ ಎಂಗ್ ಆಗಿ ಕಾಣುವುದೂ ಈ ಥೆರಪಿಯಿಂದಲೇ. ಈ ಥೆರಪಿ ಜಪಾನ್‌ನಲ್ಲಿ ತುಂಬಾ ಫೇಮಸ್. ಇದರಲ್ಲಿ ಹಕ್ಕಿ ಹಿಕ್ಕೆಯನ್ನು ಮುಖದ ಮೇಲೆ ಹಾಕಿ ಅದರಿಂದ ಮಸಾಜ್ ಮಾಡಲಾಗುತ್ತದೆ. 

ಈ ಥೆರಪಿಯಲ್ಲಿ ಮೊದಲಿಗೆ ಹಕ್ಕಿ ಹಿಕ್ಕೆಯನ್ನು ಒಣಗಿಸಲಾಗುತ್ತದೆ. ಇದರಿಂದ  ಹಿಕ್ಕೆ ಕೀಟಾಣು ಮುಕ್ತವಾಗುತ್ತದೆ. ನಂತರ ಅದನ್ನು ಪುಡಿ ಮಾಡಿ, ಫೇಷಿಯಲ್ ಮಾಡಲು ಬಳಸುತ್ತಾರೆ. 

ಇದರಿಂದ ಏನೆಲ್ಲಾ ಪ್ರಯೋಜನಗಳಿವೆ?

ಜೊಜೊಬಾ ಎಣ್ಣೆ ಏನೂ ಜುಜುಬಿಯಲ್ಲ, ತ್ವಚಾ ಆರೋಗ್ಯಕ್ಕೆ ಬೇಕೇ ಬೇಕು...

- ಈ ಫೇಷಿಯಲ್ ಮಾಡುವುದರಿಂದ ತ್ವಚೆ ತುಂಬಾ ಸ್ಮೂತ್ ಆಗುತ್ತದೆ. ಜೊತೆಗೆ ಇದು ಹೀಲಿಂಗ್ ಪ್ರಕ್ರಿಯೆಯಲ್ಲಿ ಹೆಚ್ಚು ಕೆಲಸ ಮಾಡುತ್ತೆ.

- ಡೆಡ್ ಸ್ಕಿನ್ ನಿವಾರಣೆಯಾಗುತ್ತದೆ. ಇದರಿಂದ ಸ್ಕಿನ್ ಕ್ಲಿಯರ್ ಆಗುತ್ತದೆ. 

- ನಿಯಮಿತವಾಗಿ ಇದನ್ನು ಬಳಸುವುದರಿಂದ ತ್ವಚೆ ಹೊಳೆಯುತ್ತದೆ. 

- ಈ ಫೇಷಿಯಲ್  ಒಂದು ಸಾರಿ ಮಾಡಿದರೆ 14 ರೂಪಾಯಿ ರೂ. ಖರ್ಚಾಗುತ್ತದೆ. ಅಷ್ಟೊಂದು ದುಬಾರಿ ಈ ಟ್ರೀಟ್‌ಮೆಂಟ್ ಇದು. ಅದಕ್ಕಾಗಿ ಸೆಲೆಬ್ರಿಟಿಗಳೇ ಇದನ್ನು ಹೆಚ್ಚು ಬಳಸುತ್ತಾರೆ.

ನೀವೂ ಎಂಗ್ ಆಗಿ ಕಾಣಬಯಸಿದರೆ , ಅಷ್ಟೊಂದು ಹಣ ಖರ್ಚು ಮಾಡಲು ಶಕ್ತರಾಗಿದರೆ, ಇದನ್ನು ಟ್ರೈ ಮಾಡಿ. 

ಶೇವಿಂಗ್ ಬಳಿಕ ತ್ವಚೆ ತುರಿಸುತ್ತದೆಯೇ? ಹೀಗ್ ಮಾಡಿ