ಹೆಚ್ಚಿನ ವೇತನ, ಕಡಿಮೆ ತೆರಿಗೆ ಮತ್ತು ಉತ್ತಮ ಜೀವನ ಮಟ್ಟಕ್ಕಾಗಿ ಬೆಂಗಳೂರಿನ ಐಟಿ ದಂಪತಿ ಲಕ್ಸಂಬರ್ಗ್‌ನಲ್ಲಿ ನೆಲೆಸಿದ್ದಾರೆ. ಲಕ್ಸಂಬರ್ಗ್‌ನಲ್ಲಿ ತಮ್ಮ ಅನುಭವ, ವೇತನ, ತೆರಿಗೆ ವ್ಯವಸ್ಥೆ ಮತ್ತು ಜೀವನಶೈಲಿಯ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರು (ಸೆ.7): ದೊಡ್ಡ ಸಂಬಲ ಬರುವ ನೌಕರಿ, ಹುಟ್ಟಿದ ಊರು ಎಲ್ಲವನ್ನೂ ಬಿಟ್ಟು ಪ್ರತೀಕ್‌ ಗುಪ್ತಾ ಮತ್ತು ನೇಹಾ ಮಹೇಶ್ವರಿ ಬೆಂಗಳೂರನ್ನು ಶಾಶ್ವತವಾಗಿ ತೊರೆದು 2020ರಲ್ಲಿ ಯುರೋಪ್‌ನ ಪುಟ್ಟ ದೇಶ ಲಕ್ಸಂಬರ್ಗ್‌ನಲ್ಲಿ ಜೀವನ ಕಂಡುಕೊಂಡಿದ್ದಾರೆ. ಇತ್ತೀಚೆಗೆ ಲಕ್ಸಂಬರ್ಗ್‌ನಿಂದಲೇ ತಮ್ಮ ಜೀವನದ ಆಯ್ಕೆಯ ಬಗ್ಗೆ ಮಾತನಾಡಿದ ಅವರು, ತಮ್ಮ ವೇತನ, ಲಕ್ಸಂಬರ್ಗ್‌ನ ತೆರಿಗೆ, ಯುರೋಪ್‌ ಹಾಗೂ ಭಾರತದಲ್ಲಿರುವ ಬದುಕಿನ ವ್ಯತ್ಯಾಸಗಳ ಬಗ್ಗೆ ತಿಳಿಸಿದ್ದಾರೆ. ಅಮೇಜಾನ್‌ನಲ್ಲಿ ಪ್ರತೀಕ್‌ ಸೀನಿಯರ್‌ ಅನಾಲಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದರೆ, ನೇಹಾ ಜರ್ಮನ್‌ನ ರಿಯಲ್‌ ಎಸ್ಟೇಟ್‌ ಕಂಪನಿಯಲ್ಲಿ ಹಣಕಾಸು ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಹಾಗೇನಾದರೂ ಭಾರತದಲ್ಲಿ ವಾಸ ಮಾಡುತ್ತಿದ್ದರೆ, ನಮ್ಮ ವೇತನ ಹಾಗೂ ಹುದ್ದೆಗಳು ಇನ್ನೂ ದೊಡ್ಡ ಮಟ್ಟಕ್ಕೆ ಏರಿಕೆ ಆಗುತ್ತಿತ್ತು. ಅಮೆರಿಕ ಅಥವಾ ದುಬೈಗೆ ತೆರಳಿದ್ದರೆ, ನಿರೀಕ್ಷೆಗೂ ಮೀರಿದ ವೇತನ ಪಡೆಯಬಹುದಿತ್ತು ಆದರೆ, ತಮ್ಮ ಆಯ್ಕೆ ಬೇರೆಯದೇ ಆಗಿತ್ತು ಎಂದು ಅವರು ಹೇಳಿದ್ದಾರೆ.

'ಭಾರತದಲ್ಲಿಯೇ ಮುಂದುವರಿದಿದ್ದರೆ, ಅಥವಾ ಅಮೆರಿಕಕ್ಕೆ ಹೋಗಿದ್ದರೆ ನಮ್ಮ ವೃತ್ತಿಜೀವನ ಇನ್ನಷ್ಟು ಉತ್ತಮವಾಗಿರುತ್ತಿತ್ತು. ದೊಡ್ಡ ವೇತನದ ಬೇರೆ ಬೇರೆ ಕೆಲಸಗಳೂ ಸಿಗುತ್ತಿದ್ದವು. ಆದರೆ ನಾವು ಯುರೋಪ್ ನೀಡುವ ಉತ್ತಮ ಗುಣಮಟ್ಟದ ಜೀವನವನ್ನು ಸವಿಯಲು ಬಯಸಿದ್ದೆವು' ಎಂದು ಹೇಳಿದ್ದಾರೆ. "ಕಾರ್ಮಿಕ ವರ್ಗದ ಭಾರತೀಯರು ಹೆಚ್ಚಿನ ಹಣಕ್ಕಾಗಿ ಯುರೋಪ್‌ಗೆ ಬರುವುದಿಲ್ಲ. ಭಾರತದಲ್ಲಿ ಸಿಗುವುದಕ್ಕಿಂತ ಒಂದೂವರೆ ಅಥವಾ ಎರಡು ಪಟ್ಟು ವೇತನ ಬೇಕೆಂದರೆ, ಅಮೆರಿಕ ಅಥವಾ ದುಬೈಗೆ ಭಾರತೀಯರು ಹೋಗುತ್ತಾರೆ. ಅಲ್ಲಿ ನಿವ್ವಳ ಉಳಿತಾಯ ಕೂಡ ಹೆಚ್ಚು..' ಎಂದು ಪ್ರತೀಕ್‌ ಹೇಳಿದ್ದಾರೆ.

ಕಡಿಮೆ ತೆರಿಗೆ, ಉತ್ತಮ ಸೇವೆ: ಪ್ರತೀಕ್‌ ಹಾಗೂ ನೇಹಾ ತಮ್ಮ ಆದಾಯದ ಶೇ. 28ರಷ್ಟನ್ನು ಆದಾಯ ತೆರಿಗೆಯಾಗಿ ಲಕ್ಸಂಬರ್ಗ್‌ನಲ್ಲಿ ಕಟ್ಟುತ್ತಿದ್ದಾರೆ. ಭಾರತದಲ್ಲಿ ನಾವು ಕಟ್ಟು ತೆರಿಗೆಗಿಂತ ಇಂದು ಶೇ. 2-3ರಷ್ಟು ಕಡಿಮೆ. ಆದರೆ, ಇಲ್ಲಿ ಶೇ. 28ರಷ್ಟು ತೆರಿಗೆ ಇದ್ದರೂ, ನಮಗೆ ಹೊರೆ ಅಂತಾ ಅನಿಸೋದಿಲ್ಲ. ಅದಕ್ಕೆ ಕಾರಣ ಇಲ್ಲಿನ ಸರ್ಕಾರ ನಮಗೆ ವಿವಿಧ ಸೇವೆಗಳ ಮೂಲಕ ಇದನ್ನು ನಮಗೇ ವಾಪಾಸ್‌ ನೀಡುತ್ತದೆ. “ನಾವು ನಮ್ಮ ವೈಯಕ್ತಿಕ ಆದಾಯದ 3% ಅನ್ನು ಸರ್ಕಾರಿ ಪ್ರಾಯೋಜಿತ ಆರೋಗ್ಯ ವಿಮೆಗೆ ಕಡ್ಡಾಯವಾಗಿ ಕೊಡುಗೆ ನೀಡುತ್ತೇವೆ. ಕೇವಲ 3% ವೆಚ್ಚದಲ್ಲಿ, ಹಲ್ಲಿನ ಆರೈಕೆಯನ್ನು ಹೊರತುಪಡಿಸಿ ಆರೋಗ್ಯ ಸೇವೆಯು ನಮಗೆ ಸಂಪೂರ್ಣವಾಗಿ ಉಚಿತವಾಗಿದೆ" ಎಂದು ನೇಹಾ ತಿಳಿಸುತ್ತಾರೆ.

ಲಕ್ಸೆಂಬರ್ಗ್ ತೆರಿಗೆಯ ವಿಚಾರದಲ್ಲಿ ಮೆಚ್ಚುವ ಮತ್ತೊಂದು ವೈಶಿಷ್ಟ್ಯವೆಂದರೆ ನಿರುದ್ಯೋಗ ನಿಧಿ, ಇಬ್ಬರೂ ತಮ್ಮ ಆದಾಯದ 2% ರಷ್ಟು ಈ ನಿಧಿಗೆ ಕೊಡಗೆ ನೀಡುತ್ತಿದ್ದಾರೆ. ಇದರ ಅರ್ಥ ಏನೆಂದರೆ, ಹಾಗೇನಾದರೂ ನೀವು ಕೆಲಸ ಮಾಡುತ್ತಿರುವ ಕಂಪನಿ ನಿಮ್ಮನ್ನು ಕೆಲಸದಿಂದ ವಜಾ ಮಾಡಿದರೆ, ವಜಾ ಮಾಡುವ ಸಮಯದಲ್ಲಿ ಇದ್ದ ನಿಮ್ಮ ವೇತನದ ಶೇ.80ರಷ್ಟು ಮೊತ್ತವನ್ನು ಎರಡು ವರ್ಷಗಳ ಕಾಲ ಸರ್ಕಾರವೇ ನೀಡುತ್ತದೆ.ಸ ಇಷ್ಟರ ಒಳಗಾಗಿ ನಾವು ಹೊಸ ಕೆಲಸವನ್ನು ಹುಡುಕಿಕೊಳ್ಳಬೇಕಾಗಿರುತ್ತದೆ ಎಂದು ನೇಹಾ ಹೇಳಿದ್ದಾರೆ. ಆ ರೀತಿಯಲ್ಲಿ ಯೋಚನೆ ಮಾಡಿದರೆ, ನನ್ನ ವಾರ್ಷಿಕ ಆದಾಯದ 5% ನಲ್ಲಿ, ನಾನು ಎರಡು ಪ್ರಮುಖ ತುರ್ತು ಪರಿಸ್ಥಿತಿಗಳಿಗೆ ನಾನು ರಕ್ಷಣೆ ಪಡೆದುಕೊಂಡಿದ್ದೇನೆ. ವೈದ್ಯಕೀಯ ಮತ್ತು ಉದ್ಯೋಗ ನಷ್ಟಕ್ಕೆ ನಾವು ಪ್ರತ್ಯೇಕವಾಗಿ ತುರ್ತು ನಿಧಿಯನ್ನು ಹೊಂದುವ ಅಗತ್ತವೇ ಇಲ್ಲ ಎಂದು ತಿಳಿಸಿದ್ದಾರೆ.

ವಿಶ್ವದಲ್ಲೇ ಸಿರಿವಂತ ದೇಶವಿದು, ಆದ್ರೂ ಬಾಡಿಗೆ ಕಟ್ಟಲು ಪರದಾಡ್ತಾರೆ ಮಂದಿ!

ಐಷಾರಾಮಿ ಕಾರುಗಳು, ಯುರೋಪಿಯನ್‌ ಹಾಲಿಡೇಗಳು: ನೇಹಾ ಮತ್ತು ಪ್ರತೀಕ್‌ಗೆ, ಲಕ್ಸೆಂಬರ್ಗ್‌ನಲ್ಲಿ ವಾಸಿಸುವ ಮತ್ತೊಂದು ಪ್ರಯೋಜನವೆಂದರೆ ಕೈಗೆಟುಕುವ ಯುರೋಪಿಯನ್ ಹಾಲಿಡೇಗಳು ಮತ್ತು ಐಷಾರಾಮಿ ಕಾರುಗಳ ಖರೀದಿ. ಪ್ರಸ್ತುತ ಇವರ ಬಳಿಕ Mercedes Benz A-ಕ್ಲಾಸ್ ಕಾರ್‌ ಇದೆ. ಅದರ ಬೆಲೆ ಸುಮಾರು 43,000 ಯುರೋ. 43,000 ಯೂರೋಗಳನ್ನು ಖರೀದಿಸುವ ಶಕ್ತಿಯ ಸಮಾನತೆಗಾಗಿ ಹೊಂದಿಸಲಾಗಿದೆ, ಇದು ಸುಮಾರು ₹10.3 ಲಕ್ಷಕ್ಕೆ ಸಮನಾಗಿರುತ್ತದೆ. ಆದರೆ ಇದೇ ಕಾರ್‌ಗೆ ಬೆಂಗಳೂರಿನಲ್ಲಿ ₹55 ಲಕ್ಷ ರೂಪಾಯಿ ಬೆಲೆ ಇದೆ.

ಅಮೆರಿಕಕ್ಕಿಂತ ಸ್ವಿಜರ್ಲೆಂಡ್‌ನಲ್ಲಿಯೇ ಹೆಚ್ಚು ಮಿಲಿಯನೇರ್‌ಗಳೇಕೆ? ಇಲ್ಲಿದೆ ರಹಸ್ಯ!

ಭಾರತದಲ್ಲಿ 50 ಲಕ್ಷಕ್ಕಿಂತ ಮೇಲಿನ ಐಷಾರಾಮಿ ಕಾರ್‌ಳನ್ನು ಖರೀದಿ ಮಾಡುವುದು ಸುಲಭವಲ್ಲ, ಆದರೆ, ಈ ಜರ್ಮನ್‌ ಕಾರುಗಳು ಲಕ್ಸಂಬರ್ಗ್‌ನಲ್ಲಿ ಬಹಳ ಕಡಿಮೆ ಬೆಲೆಗೆ ದೊರೆಯುತ್ತದೆ. ಇನ್ನು ನಮ್ಮ ಆದಾಯ ಕೂಡ ಯುರೋದಲ್ಲಿ ಇರುವ ಕಾರಣ ನಾವು ಇದನ್ನು ಸುಲಭವಾಗಿ ಖರೀದಿ ಕುಡ ಮಾಡಬಹುದು ಎಂದಿದ್ದಾರೆ. ಪರ್ಚೇಸಿಂಗ್ ಪವರ್ ಪ್ಯಾರಿಟಿ (PPP) ಎನ್ನುವುದು ಪ್ರತಿ ದೇಶದಲ್ಲಿ ಸರಕು ಮತ್ತು ಸೇವೆಗಳ ಒಂದು ಸೆಟ್ ಎಷ್ಟು ವೆಚ್ಚವಾಗುತ್ತದೆ ಎಂಬುದನ್ನು ನೋಡುವ ಮೂಲಕ ವಿವಿಧ ಕರೆನ್ಸಿಗಳ ಮೌಲ್ಯವನ್ನು ಹೋಲಿಸುವ ವಿಧಾನವಾಗಿದೆ. ಬೆಲೆ ಮಟ್ಟದ ವ್ಯತ್ಯಾಸಗಳಿಗೆ ಸರಿಹೊಂದಿಸುವ ಮೂಲಕ, ವಿವಿಧ ದೇಶಗಳಲ್ಲಿ ಹಣ ಎಷ್ಟು ದೂರ ಹೋಗುತ್ತದೆ ಎಂಬುದರ ಕುರಿತು ಹೆಚ್ಚು ನಿಖರವಾದ ಚಿತ್ರವನ್ನು ಒದಗಿಸುತ್ತದೆ.