Asianet Suvarna News Asianet Suvarna News

ಅಮೆರಿಕಕ್ಕಿಂತ ಸ್ವಿಜರ್ಲೆಂಡ್‌ನಲ್ಲಿಯೇ ಹೆಚ್ಚು ಮಿಲಿಯನೇರ್‌ಗಳೇಕೆ? ಇಲ್ಲಿದೆ ರಹಸ್ಯ!

Country of millionaires Switzerland  ಸ್ವಿಜರ್ಲೆಂಡ್‌ನಲ್ಲಿ ಪ್ರತಿ ಏಳು ಜನರಲ್ಲಿ ಒಬ್ಬರು ಮಿಲಿಯನೇರ್ ಆಗಿದ್ದಾರೆ. ಅವರ ಸಂಪತ್ತಿನ ಗುಟ್ಟೇನು ಎಂದರೆ ಅವರು ಸ್ವಂತ ಮನೆ కొనడం ಮೇಲೆ ಹೂಡಿಕೆ ಮಾಡುವುದಿಲ್ಲ ಬದಲಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಾರೆ. ಅಲ್ಲದೆ, ಉಳಿತಾಯವನ್ನು ಬಿಲ್‌ನಂತೆ ಪರಿಗಣಿಸಿ, ಉಳಿದ ಹಣವನ್ನು ಮಾತ್ರ ಖರ್ಚು ಮಾಡುತ್ತಾರೆ.

Switzerland Country of millionaires 1 in 7 adults is Wealthy san
Author
First Published Sep 4, 2024, 3:53 PM IST | Last Updated Sep 4, 2024, 4:01 PM IST

ನವದೆಹಲಿ (ಸೆ.4): ಯುರೋಪ್‌ನ ಅತ್ಯಂತ ಸುಂದರ ದೇಶಗಳಲ್ಲಿ ಒಂದಾದ ಸ್ವಿಜರ್ಲೆಂಡ್‌ ತನ್ನ ಅಗತ್ಯಗಳನ್ನು ತಾನೇ ಪೂರೈಸಿಕೊಂಡು ಮುಂದುವರಿಯುತ್ತಿದೆ. ಇಂದು ಈ ದೇಶ ಯುರೋಪ್‌ನ ಅತ್ಯಂತ ಶ್ರೀಮಂತ ದೇಶಗಳಲ್ಲಿ ಒಂದು. ಸ್ವಿಜರ್ಲೆಂಡ್‌ ದೇಶದಲ್ಲಿ 7 ಜನರ ಪೈಕಿ ಒಬ್ಬರು ಮಿಲಿಯನೇರ್‌. ಇದು ಅಮೆರಿಕಕ್ಕಿಂತ ಐದು ಪಟ್ಟು ಹೆಚ್ಚು. ಹಾಗಿದ್ದಲ್ಲಿ, ಸ್ವಿಜರ್ಲೆಂಡ್‌ ದೇಶದ ಪ್ರಜೆಗಳು ಇಷ್ಟು ಕ್ವಿಕ್‌ ಆಗಿ ಕೋಟ್ಯಧಿಪತಿಗಳಾಗಿದ್ದು ಹೇಗೆ? ನೀವು ಶ್ರೀಮಂತರಾಗಬೇಕು ಎಂದು ಬಯಸಿದಲ್ಲಿ ಖಂಡಿತವಾಗಿಯೂ ಸ್ವಿಸ್‌ ಜನರು ಬಳಸುವ ವಿಧಾನವನ್ನು ಪ್ರಯೋಗಿಸಲೇಬೇಕು. ಅಷ್ಟಕ್ಕೂ ಅವರ ವಿಧಾನವೇನು ಅನ್ನೋದರ ವಿವರ ಇಲ್ಲಿದೆ. ಸ್ವಿಟ್ಜರ್ಲೆಂಡ್ ವಿಶ್ವದ ಅತಿ ಹೆಚ್ಚು ಶೇಕಡಾವಾರು ಮಿಲಿಯನೇರ್‌ಗಳನ್ನು ಹೊಂದಿದೆ. ಪ್ರತಿ 80 ಸಾವಿರ ಜನರಿಗೆ ಅಲ್ಲಿ ಒಬ್ಬ ಬಿಲಿಯನೇರ್‌ ಸಿಗುತ್ತಾರೆ.  ಹಾಗಾದರೆ ಸ್ವಿಸ್‌ ಜನರ ಸಂಪತ್ತು ವೃದ್ಧಿಗೆ ಕಾರಣವೇನು. ಕೇವಲ ಬ್ಯಾಂಕಿಂಗ್‌ ಹಾಗೂ ನ್ಯೂಟ್ರಾಲಿಟಿಯಿಂದಲೇ ಅವರು ಈ ಹಣ ಸಂಪಾದನೆ ಮಾಡುತ್ತಿದ್ದಾರೆಯೇ ಅಂದರೆ ಇದಕ್ಕೆ ಉತ್ತರ ಇಲ್ಲ.

ಹೌದು ಸ್ವಿಜರ್ಲಂಡ್‌ ದೇಶದ ಜನಸಂಖ್ಯೆಯ ಶೇ. 14.9 ಅಂದರೆ ಶೇ. 15 ಮಂದಿ ಮಿಲಿಯನೇರ್‌ಗಳಾಗಿದ್ದಾರೆ. ಇದು ಅಮೆರಿಕದಲ್ಲಿರುವ ಮಿಲಿಯನೇರ್‌ಗಳ ಪ್ರಮಾಣಕ್ಕಿಂತ (ಶೇ. 8.8) ದುಪ್ಪಟ್ಟು. ಇಷ್ಟೆಲ್ಲಾ ಆಗಿದ್ದರೂ, ಸರಾಸರಿ ಆದಾಯದಲ್ಲಿ ಸ್ವಿಟ್ಜರ್ಲೆಂಡ್ ಟಾಪ್ 10 ರಾಷ್ಟ್ರಗಳ ಪಟ್ಟಿಯಲ್ಲಿಲ್ಲ. ಇದಕ್ಕೆ ಕಾರಣವಾಗಿರೋದು ಏನೆಂದರೆ, ಅಲ್ಲಿನ ಜನರ ಮೈಂಡ್‌ಸೆಟ್‌.
ಸ್ವಂತ ಮನೆ ಬೇಕಾಗಿಲ್ಲ: ಇದು ಅಚ್ಚರಿಯಾದರೂ ಸತ್ಯ. ನಾವೆಲ್ಲರೂ ಸ್ವಂತ ಮನೆಯನ್ನು ಆಸ್ತಿ ಎಂದುಕೊಳ್ಳುತ್ತೇವೆ. ಆದರೆ, ಸ್ವಿಜರ್ಲೆಂಡ್‌ ಜನರು ಜೀವಮಾನಪೂರ್ತಿ ಬಾಡಿಗೆ ಮನೆಯಲ್ಲಿಯೇ ಇರಲಿ ಇಚ್ಛೆಪಡುತ್ತಾರೆ. ಹೌದು ಸ್ವಿಜರ್ಲೆಂಡ್‌ ಜನಸಂಖ್ಯೆಯ ಶೇ. 41ರಷ್ಟು ಜನ ಮಾತ್ರವೇ ಸ್ವಂತ ಮನೆ ಹೊಂದಿದ್ದಾರೆ. ಅಮೆರಿಕದಲ್ಲಿ ಈ ಪ್ರಮಾಣ ಶೇ. 65. ಅದರಲ್ಲೂ ಸ್ವಿಜರ್ಲೆಂಡ್‌ನ ಈಗಿನ ಜನಾಂಗವಂತೂ ಮನೆ ಕೊಂಡುಕೊಳ್ಳೋಕೆ ಇಷ್ಟಪಡುತ್ತಿಲ್ಲ. ಏಕೆಂದರೆ, ಅವರು ತಮ್ಮಲ್ಲಿರುವ ಹಣವನ್ನು ಹೆಚ್ಚಿನ ಲಾಭ ನೀಡುವ ಸಂಪತ್ತುಗಳಲ್ಲಿ ಹೂಡಿಕೆ ಮಾಡುತ್ತಾರೆ.

ಸೇವಿಂಗ್ಸ್‌ ಅಲ್ಲ ಬಿಲ್‌: ಮತ್ತೊಂದು ಮಹತ್ವದ ವಿಚಾರ ಏನೆಂದರೆ, ಅವರು ಸೇವಿಂಗ್ಸ್‌ಅನ್ನು ತಮ್ಮ ಉಳಿತಾಯ ಎಂದು ಯೋಚನೆ ಮಾಡೋದಿಲ್ಲ. ಅದು ಪ್ರತಿ ತಿಂಗಳ ತಮ್ಮ ಬಿಲ್‌ ಎನ್ನುವ ರೂಪದಲ್ಲಿ ನೋಡುತ್ತಾರೆ. ಜಗತ್ತಿನಲ್ಲಿ ಹೆಚ್ಚಿನ ಜನರು ತಾವು ಖರ್ಚು ಮಾಡಿದ ಬಳಿಕ ಇದ್ದನ್ನು ಉಳಿಸುತ್ತಾರೆ. ಆದರೆ, ಸ್ವಿಸ್‌ ಜನರು ಉಲ್ಟಾ ಅವರು ತಮ್ಮ ಬಿಲ್‌ ಅಂದರೆ ಉಳಿತಾಯಗಳನ್ನು ಮಾಡಿದ ಬಳಿಕ ಇದ್ದ ಹಣವನ್ನು ಖರ್ಚು ಮಾಡುತ್ತಾರೆ. ತಮ್ಮ ಆದಾಯದ ಶೇ. 20-30ರಷ್ಟು ಹಣವನ್ನು ಸೇವಿಂಗ್ಸ್‌ಗೆ ಹಾಕಿದ ಬಳಿಕವೇ ಉಳಿದ ಹಣವನ್ನು ಅವರು ಮುಟ್ಟುತ್ತಾರೆ. ಇದು ಅವರ ಇಚ್ಛಾಶಕ್ತಿ ಮಾತ್ರವಲ್ಲ, ಸ್ವಿಸ್‌ ಸರ್ಕಾರದ ವ್ಯವಸ್ಥೆ. ಆದರೆ, ಒಂದಂತೂ ತಿಳಿದಿರಲಿ ಕೇವಲ ಉಳಿತಾಯ ಯಾರನ್ನೂ ಶ್ರೀಮಂತರನ್ನಾಗಿ ಮಾಡೋದಿಲ್ಲ.

ಸ್ವಿಸ್ ಜನರು ತಮ್ಮಲ್ಲೇ ಹೂಡಿಕೆ ಮಾಡುತ್ತಾರೆ: ಸರಾಸರಿ ಸ್ವಿಸ್ ಜನರು ತಮ್ಮ ಆದಾಯದ 5-10% ಶಿಕ್ಷಣ ಮತ್ತು ಕೌಶಲ್ಯಕ್ಕಾಗಿ ಖರ್ಚು ಮಾಡುತ್ತಾರೆ. ಪ್ರತಿ ವರ್ಷ ಕೂಡ ಅವರು ಪದವಿಗಳನ್ನು ಪಡೆಯುವ ನಿಟ್ಟಿನಲ್ಲಿ ಹೋರಾಟ ಮಾಡೋದಿಲ್ಲ.ಆದರೆ, ನಿರ್ದಿಷ್ಟ, ಹೆಚ್ಚಿನ ಮೌಲ್ಯದ ಕೌಶಲ್ಯಗಳನ್ನು ಕಲಿಯುವ ನಿಟ್ಟಿನಲ್ಲಿ ಮನಸ್ಸು ಮಾಡುತ್ತಾರೆ. ಭಾಷೆಗಳು, ತಾಂತ್ರಿಕ ಕೌಶಲ್ಯಗಳು ಮತ್ತು ಆರ್ಥಿಕ ಸಾಕ್ಷರತೆಯ ಬಗ್ಗೆ ಯೋಚನೆ ಮಾಡುತ್ತಾರೆ.

ಮಲ್ಟಿ ಬ್ಯಾಂಕಿಂಗ್‌ ಸಂಸ್ಕೃತಿ: ಸ್ವಿಸ್ ಮಿಲಿಯನೇರ್‌ಗಳು ತಮ್ಮ ಎಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಹಾಕುವುದಿಲ್ಲ. ವಿವಿಧ ಉದ್ದೇಶಗಳಿಗಾಗಿ ಅವರು ಸಾಮಾನ್ಯವಾಗಿ 3-5 ವಿವಿಧ ಬ್ಯಾಂಕುಗಳನ್ನು ಬಳಸುತ್ತಾರೆ. ದೈನಂದಿನ ವಹಿವಾಟುಗಳಿಗಾಗಿ ಸ್ಥಳೀಯ ಬ್ಯಾಂಕ್ ಬಳಸುತ್ತಾರೆ. ಸಂಪತ್ತು ನಿರ್ವಹಣೆಗಾಗಿ ಖಾಸಗಿ ಬ್ಯಾಂಕ್ ಬಳಸುತ್ತಾರೆ.  ವಿದೇಶಿ ವಿನಿಮಯಕ್ಕಾಗಿ ಅಂತರಾಷ್ಟ್ರೀಯ ಬ್ಯಾಂಕ್ ಸೇವೆಗಳನ್ನು ಬಳಸುತ್ತಾರೆ.

ಸ್ವಿಸ್‌ ಬ್ಯಾಂಕ್‌ ಕಪ್ಪು ಕುಳಗಳ 5ನೇ ಪಟ್ಟಿ ಭಾರತಕ್ಕೆ ಹಸ್ತಾಂತರ

ಗಮನಿಸಿರಬಹುದು ಸ್ವಿಸ್ ಮಿಲಿಯನೇರ್‌ಗಳು ಡಿಸೈನರ್ ಲೋಗೊಗಳು ಅಥವಾ ಐಷಾರಾಮಿ ಕಾರುಗಳ ಬಳಕೆ ಮಾಡುವುದನ್ನು ನೋಡುವುದು ಬಹಳ ಅಪರೂಪ. ಅವರು ತಮ್ಮ ಆದಾಯಕ್ಕಿಂತ ಕಡಿಮೆ ಹಣದಲ್ಲಿ ವಾಸಿಸುತ್ತಾರೆ ಮತ್ತು ವ್ಯತ್ಯಾಸವನ್ನು ಮರುಹೂಡಿಕೆ ಮಾಡುತ್ತಾರೆ. ಅದಲ್ಲದೆ, ಇವರು ಗ್ಲೋಬಲ್‌ ಸಿಟಿಜನ್‌ಗಳು. ಸ್ವಿಸ್ ಹೂಡಿಕೆದಾರರು ಗಡಿಗಳನ್ನು ಮೀರಿ ಯೋಚಿಸುತ್ತಾರೆ. ಅವರು ಸ್ವತ್ತುಗಳಲ್ಲಿ ಮಾತ್ರವಲ್ಲದೆ ರೆಸಿಡೆನ್ಸಿ ಮತ್ತು ಪೌರತ್ವವನ್ನು ಪಡೆದುಕೊಳ್ಳುವುದನ್ನು ಗಮನ ನೀಡುತ್ತಾರೆ. ಸ್ವಿಸ್‌ ಜನರಲ್ಲಿ ಹೆಚ್ಚಿನರವರು ಇತರ ದೇಶಗಳಲ್ಲಿ ಎರಡನೇ ಪಾಸ್‌ಪೋರ್ಟ್‌ಗಳು ಅಥವಾ ರೆಸಿಡೆನ್ಸಿಗಳನ್ನು ಹೊಂದಿದ್ದಾರೆ ಏಕೆಂದರೆ ಇದು ಹೆಚ್ಚಿನ ಹಣಕಾಸಿನ ಅವಕಾಶಗಳು ಮತ್ತು ತೆರಿಗೆ ಆಪ್ಟಿಮೈಸೇಶನ್‌ಗಳನ್ನು ತೆರೆಯುತ್ತದೆ.
ಇನ್ನು ಸ್ವಿಸ್‌ ಜನರ ತಂತ್ರ ಬಹಳ ಸಿಂಪಲ್‌. ಸ್ವಿಸ್ ಜನರು ಶೀಘ್ರವಾಗಿ ಶ್ರೀಮಂತರಾಗುವ ಯೋಜನೆಗಳನ್ನು ಹೊಂದುವುದೇ ಇಲ್ಲ. ಭವಿಷ್ಯದ ಪೀಳಿಗೆಗಾಗಿ ಅವರು ಸಂಪತ್ತು ವೃದ್ಧಿಮಾಡುತ್ತಾರೆ. ಜಗತ್ತಿನ ಜನರಿಗೆ ಇದೇ ದೊಡ್ಡ ಪಾಠ. ನಿಜವಾದ ಸಂಪತ್ತು ಹಣ ಮಾಡುವುದಲ್ಲ. ಅದನ್ನು ಇಟ್ಟುಕೊಳ್ಳುವುದು ಮತ್ತು ಬೆಳೆಸುವುದು. ಇದೇ ಕಾರಣಕ್ಕಾಗಿ ಇಂದು ಸ್ವಿಸ್‌ನಲ್ಲಿ ಮಿಲಿಯನೇರ್‌ಗಳ ಪ್ರಮಾಣ ಸಾಕಷ್ಟಿದೆ.

ಸ್ವಿಜರ್ಲೆಂಡ್‌ನ ಕ್ರೆಡಿಟ್‌ ಸೂಸಿ ಬ್ಯಾಂಕ್‌ ಯುಬಿಎಸ್‌ ವಶಕ್ಕೆ: ಜಾಗತಿಕ ಬ್ಯಾಂಕಿಂಗ್‌ ತಲ್ಲಣ ತಪ್ಪಿಸಲು ಬೃಹತ್‌ ಕಸರತ್ತು

Latest Videos
Follow Us:
Download App:
  • android
  • ios