ಅಥ್ಲೆಟ್‌ಗಳಿಗೆ ನಿಶ್ಶಕ್ತಿಯಾದರೆ ಹೀಗೆ ಮಾಡಬಹುದು...

Best way to get rid of tired for athletes
Highlights

ಓಟಗಾರ್ತಿ/ರರಿಗೆ ಸ್ಟೆಮಿನಾ, ಶಕ್ತಿ ಬಹಳ ಮುಖ್ಯ ಅನ್ನೋದು ಮಕ್ಕಳಿಗೂ ಗೊತ್ತಿರುವ ಸತ್ಯ. ಕೆಲವೊಮ್ಮೆ ಅಥ್ಲೆಟ್‌ಗಳು ನಿಶ್ಶಕ್ತಿಯಿಂದ ಬಳಲುವುದೂ ಇದೆ. ಕೆಲವೊಮ್ಮೆ ಅತಿಯಾದ ತರಬೇತಿ, ಅಭ್ಯಾಸ ಅವರಲ್ಲಿ ಆಯಾಸ, ಸುಸ್ತು ತರುವುದಿದೆ. ಇಂಥ ಸಮಯದಲ್ಲಿ ಎನರ್ಜಿ ತುಂಬಲು ಸಹಜವಾದ ಟೆಕ್ನಿಕ್ ಒಂದಿದೆ. 

 

ಅದು ಮತ್ತೇನಲ್ಲ, ಈಜೋದು. ಪ್ರತಿದಿನ ನಿಗದಿತ ಸಮಯದಲ್ಲಿ ಈಜಾಡುತ್ತಿದ್ದರೆ ಎನರ್ಜಿ ತನ್ನಿಂತಾನೇ ಬರುತ್ತದೆ. ಅಥ್ಲೆಟ್‌ಗಳ ಶಕ್ತಿ, ಉತ್ಸಾಹ ಎರಡೂ ಹೆಚ್ಚಾಗುತ್ತಂತೆ. ಮೊದಲಿನ ಓಟದ ಕ್ರಮಕ್ಕೂ, ಈಜೋದನ್ನು ಆರಂಭಿಸಿದ ಬಳಿಕ ಓಡೋದ್ರಲ್ಲೂ ಹೆಚ್ಚಿನ ವ್ಯತ್ಯಾಸವಾಗಿದೆಯಂತೆ, ಈ ಪರಿಣಾಮವನ್ನು ಸ್ವತಃ ಅಥ್ಲೆಟ್‌ಗಳೇ ಕಂಡುಕೊಂಡಿದ್ದಾರೆ. ದಿನವಿಡೀ ಓಟ, ವ್ಯಾಯಾಮಗಳಲ್ಲೇ ಮುಳುಗಿರುವ ಅಥ್ಲೆಟ್‌ಗಳಿಗೇ ಹಾಗಾಗ್ಬೇಕಾದರೆ ಇನ್ನು ಸಾಮಾನ್ಯರ ಕತೆಯೇನು, ಹಾಗಾಗಿ ಆದಷ್ಟು ಬೇಗ ಈಜುಕೊಳಕ್ಕೆ ಲಗ್ಗೆ ಇಡಿ.

 

loader