ನಿಶಾಂತ ಕಮ್ಮರಡಿ

ಈ ಟ್ರೆಂಡ್‌ ನಡೀತಿದೆ, ಇದು ಈಗ ಸ್ಟೈಲ್‌ ಅಂತ ಸಾಮಾನ್ಯ ಜನರಿಗೆ ಗೊತ್ತಾಗೋದು ಹೇಗೆ ಹೇಳಿ, ಸಿನಿಮಾ ಸ್ಟಾರ್‌ಗಳು ಆ ಡ್ರೆಸ್‌ ತೊಟ್ಟು ಪಬ್ಲಿಕ್‌ ಆಗಿ ಕಾಣಿಸಿಕೊಂಡಾಗ. ಫ್ಯಾಶನ್‌ ಶೋ, ಡಿಸೈನರ್ಸ್‌, ಮ್ಯಾಗಜೀನ್‌, ರೂಪದರ್ಶಿಗಳೆಲ್ಲ ಸಾಮಾನ್ಯ ಜನರ ಕೈಗೆ ಎಟಕುವಂಥವರಲ್ಲ. ಲೇಟೆಸ್ಟ್‌ ಆಗಿ ಬಂದ ಮೂವಿಯಲ್ಲೋ, ಪೇಜ್‌ ತ್ರೀ ಪಾರ್ಟಿಯಲ್ಲೋ, ಏರ್‌ಪೋರ್ಟ್‌ನಲ್ಲೇ ಕಾಣ ಸಿಕ್ಕ ಸೆಲೆಬ್ರಿಟಿಗಳು ಕ್ಯಾಮರ ಕಣ್ಣಿಗೆ ಬಿದ್ದಾಗ ಕೆಲವೇ ಹೊತ್ತಲ್ಲಿ ಅದು ಸೋಷಿಯಲ್‌ ಮೀಡಿಯಾ, ಪೇಪರ್‌, ಟಿವಿಗಳಿಂದ ಜನರಿಗೆ ತಲುಪುತ್ತೆ. ಮರುದಿನ ಅವರು ಶಾಪಿಂಗ್‌ ಮಾಡುವಾಗ ತನ್ನಿಷ್ಟದ ಸೆಲೆಬ್ರಿಟಿ ತೊಟ್ಟಂಥದ್ದೇ ಉಡುಗೆಗಾಗಿ ಹುಡುಕಾಡ್ತಾರೆ.

ಚೂರು ಉದ್ದ ಇರ್ಬೇಕಿತ್ತು ಅನ್ನೋ ಆಸೆನಾ? ಹಾಗಾದ್ರೆ ಹೀಗ್ ಮಾಡಿ ...

ಸದ್ಯಕ್ಕೀಗ ಬಾಲಿವುಡ್‌ ಸೆಲೆಬ್ರಿಟಿಗಳು ಮೆರವಣಿಗೆ ಹೊರಟಿರೋದು ಉದ್ದುದ್ದ ಗೆರೆಗಳ ಆಕರ್ಷಕ ಡ್ರೆಸ್‌ಗಳ ಮೂಲಕ. ಅಂದರೆ ಸ್ಟೆ್ರೖಪ್‌ ಸ್ಟೈಲ್‌ ಈಗ ಮತ್ತೆ ಟ್ರೆಂಡ್‌ ಆಗ್ತಿದೆ. ಅದರಲ್ಲೂ ಉದ್ದುದ್ದ ಗೆರೆಗಳುಳ್ಳ ಉಡುಗೆಗಳು ಹೆಚ್ಚು ಜನಪ್ರಿಯವಾಗುತ್ತಿವೆ.

ಬಣ್ಣಗಳು ಅನೇಕ, ಸ್ಟೈಲ್‌ ಏಕೈಕ

‘ಅದೇ ಬ್ಲ್ಯಾಕ್‌ ಆ್ಯಂಡ್‌ ವೈಟ್‌ ಕಾಂಬಿನೇಶನ್‌, ಸೀರಿಯಸ್‌ ಲುಕ್‌ ನೋಡಿ ನೋಡಿ ಸಾಕಾಯ್ತು, ಸ್ವಲ್ಪ ಫನ್‌ ಇರಲಿ ಅಂತ ಕಲರ್‌ಫುಲ್‌ ಆಗಿರೋ ಸ್ಟೆ್ರೖಪ್‌ ಡ್ರೆಸ್‌ಗಳನ್ನು ಮುನ್ನೆಲೆಗೆ ತರುತ್ತಿದ್ದೀವಿ’ ಅಂತಾರೆ ಬಾಲಿವುಡ್‌ನ ಡಿಸೈನರ್‌ ಜೆನ್‌ಜಮ್‌ ಗುಡಿ. ಈತ ಅರುಣಾಚಲ ಮೂಲದ ಡಿಸೈನರ್‌. ಡಿಸೈನ್‌ ಲೆಜೆಂಡ್‌ ರೋಹಿತ್‌ ಬಾಲ್‌ ಅವರನ್ನೂ ದಂಗು ಬಡಿಸಿದ ಅಪ್ಪಟ ಯುವ ಪ್ರತಿಭೆ. ಅಲ್ಟಾ್ರ ಮಾಡರ್ನ್‌ ಡಿಸೈನ್‌ಗಳಲ್ಲೂ ಟಪ್ಪಟ ಟ್ರೈಬಲ್‌ ಬಣ್ಣಗಳನ್ನು ತಂದು ತನ್ನ ನೆಲದ ದೇಸಿ ಕಲೆಯನ್ನು ಜಗತ್ತಿಗೆ ಪರಿಚಯಿಸುವುದು ಈತನಿಗಿಷ್ಟ. ಈ ಡಿಸೈನ್‌ಅನ್ನು ಹೆಚ್ಚು ಜನಪ್ರಿಯಗೊಳಿಸಿದ್ದು ಈತನೇ. ಬ್ರೈಟ್‌ ಕಲರ್‌ಗಳಲ್ಲಿ ಉದ್ದುದ್ದ ಗೆರೆಗಳಿರುವ ವಿನ್ಯಾಸಕ್ಕೆ ಬಾಲಿವುಡ್‌ ಸ್ಟಾ​ರ್‍ಸ್ ಬೇಷ್‌ ಅಂದಿದ್ದಾರೆ.

ಪೋಲ್ಕಾ ಡಾಟ್‌ ಸ್ಟೈಲ್‌ ಬಗ್ಗೆ ಡೌಟೇ ಬೇಡ!

ಸದ್ಯಕ್ಕೀಗ ಫೇಮಸ್‌ ಆಗಿರುವ ಉದ್ದುದ್ದ ಗೆರೆಗಳ ಸಪರೇಟ್ಸ್‌, ಡ್ರೆಸ್‌ಗಳಲ್ಲಿ ಕಡುಗೆಂಪು ಬಣ್ಣ ಮತ್ತು ಬಿಳಿಯ ಕಾಂಬಿನೇಶನ್‌ ಹೆಚ್ಚು ಚಲಾವಣೆಯಲ್ಲಿದೆ. ಜೊತೆಗೆ ಸೂರ್ಯಕಾಂತಿಯ ಹಳದಿ ಹಾಗೂ ಹಸಿರು ಬಣ್ಣದ ಕಾಂಬಿನೇಶನ್‌ನ ಓವರ್‌ಕೋಟ್‌ ಜೊತೆಗೆ ಬಂದಿರುವ ಸ್ಟೆ್ರೖಪ್‌ ಡ್ರೆಸ್‌ ಅದರ ಅನನ್ಯತೆಯ ಕಾರಣಕ್ಕೆ ಯೂತ್‌್ಸ ಫೇವರೆಟ್‌ ಆಗ್ತಿದೆ.

ಸೆಲೆಬ್ರಿಟಿಗಳಿಗೇಕೆ ಮೆಚ್ಚು

ಐದಾರು ತಿಂಗಳ ಕೆಳಗೆ ಆ್ಯಂಜಲೀನಾ ಜೋಲಿ ಸ್ಟೆ್ರಪ್‌ ಡ್ರೆಸ್‌ನಲ್ಲಿ ಪ್ಯಾರಿಸ್‌ನ ಬೀದಿಗಳಲ್ಲಿ ಕ್ಯಾಟ್‌ವಾಕ್‌ ಮಾಡಿದ್ದರು. ಬಿಳಿ ಬಣ್ಣದ ಹಿನ್ನೆಲೆಗೆ ನಸುಗಪ್ಪು ಸ್ಟೈಪ್‌ಗಳಿದ್ದ ಮ್ಯಾಕ್ಸಿ ಡ್ರೆಸ್‌ ಅದು. ಆಮೇಲೆ ಕೆಲವು ದಿನ ಪ್ಯಾರಿಸ್‌ನ ಫ್ಯಾಶನ್‌ ಮಳಿಗೆಗಳಲ್ಲಿ ರಾಶಿ ರಾಶಿ ಈ ನಮೂನೆಯ ಉಡುಗೆಗಳು. ಅದನ್ನು ಮುಗಿಬಿದ್ದು ಕೊಳ್ಳುತ್ತಿದ್ದ ಫ್ಯಾಶನ್‌ ಪ್ರಿಯರು. ಬಾಲಿವುಡ್‌ನಲ್ಲಿ ದೀಪಿಕಾ ಮೊದಲಾದವರೂ ಈ ಸ್ಟೈಲ್‌ ಮಾಡಿದರು. ಅಷ್ಟಕ್ಕೇ ಮುಗೀಲಿಲ್ಲ, ಕೆಲವು ತಿಂಗಳ ಗ್ಯಾಪ್‌ನಲ್ಲೇ ಬೋಲ್ಡ್‌ ಕಲರ್‌ಗಳ ಸ್ಟೆ್ರೖಪ್‌ ಡ್ರೆಸ್‌ಗಳು ಬಿಂಕದ ನಡಿಗೆಯಲ್ಲಿ ಫ್ಯಾಶನ್‌ ಜಗತ್ತು ಪ್ರವೇಶಿಸಿತು. ಅಲಿಯಾ ಭಟ್‌, ಕೃತಿ ಸನೂನ್‌, ಕಂಗನಾ ಮೊದಲಾದವರು ಈ ಉಡುಗೆ ತೊಟ್ಟು ಮೆರೆದರು.

ಒಂದಿಷ್ಟುಗೈಡ್‌ಲೈನ್‌

- ಉದ್ದ ಗೆರೆಗಳ ಡ್ರೆಸ್‌ಗಳು ಕೆಂಪು ಬಿಳಿ, ಹಸಿರು ಹಳದಿ ಮೊದಲಾದ ಬಣ್ಣಗಳ ಡ್ರೆಸ್‌ ಆಯ್ಕೆ ಮಾಡಿಕೊಳ್ಳಿ.

- ಟಾಪ್‌ ಪ್ಯಾಂಟ್‌ಗಳೆರಡೂ ಒಂದೇ ಡಿಸೈನ್‌ನಲ್ಲಿರಲಿ.

- ಗೆರೆ ಅಂದರೆ ಗೆರೆಗಳೇ ಇರಬೇಕಿಲ್ಲ. ಉದ್ದ ಲೈನ್‌ ಲೈನ್‌ ಇರುವ ಶ್ರದ್ಧಾ ಕಪೂರ್‌ ತೊಟ್ಟಂಥ ಉಡುಗೆಗಳಾದ್ರೂ ಚೆನ್ನಾಗಿರುತ್ತೆ.

ಹೆಂಗಳೆಯರ ಮನ ಸೆಳೆಯುತ್ತಿದೆ ಟ್ರೆಂಡಿ ಟ್ರೆಂಡಿ ಕುರ್ತಾಗಳು!

- ಇದಕ್ಕೆ ಪಲಝೋ ಕಾಂಬಿನೇಶನ್‌ ಇರಲಿ. ಟ್ಯೂನಿಕ್ಸ್‌ ಆದರೂ ಓಕೆ.

- ಹೆಚ್ಚು ಮೇಕಪ್‌ ಮಾಡಿದ್ರೆ ಚೆನ್ನಾಗಿರಲ್ಲ. ಸಹಜವಾಗಿರಿ.

- ಫ್ರೀ ಹೇ​ರ್‍ಸ್ ಚೆನ್ನಾಗಿರುತ್ತೆ.

- ಪಾಯಿಂಟೆಡ್‌ ಹೀಲ್ಸ್‌ ಇರೋ ಸ್ಯಾಂಡಲ್ಸ್‌ ಚೆಂದ.

ಇದು ಟ್ಯೂಬ್‌ ಡ್ರೆಸ್‌ ಜಮಾನ;ನಾಚೋ ಹುಡುಗೀರಿಗಲ್ಲ ಈ ಫ್ಯಾಷನ್!