ಸುಮ್ಮನೆ ಟೈಂ ಪಾಸ್‌ಗಲ್ಲ, ತಿನ್ನೋ ಪಾಪ್‌ಕಾರ್ನ್ ಆರೋಗ್ಯಕ್ಕೂ ಬೇಕು

First Published 17, Jun 2018, 9:46 AM IST
Benefits of Popcorn
Highlights

ಪಾಪ್ ಕಾರ್ನ್ ಇಲ್ಲದೆ ಸಿನಿಮಾ ನೋಡಿದ ಸಮಾಧಾನ ಸಿಗುವುದಿಲ್ಲ. ಅದೆಷ್ಟೇ ದುಡ್ಡಾದರೂ ಪಾಪ್‌ಕಾರ್ನ್ ತಿಂದು, ಚಿತ್ರ ನೋಡುತ್ತೇವೆ. ಬಾಯಲ್ಲಿ ನೀರೂರಿಸುವ ಈ ಪಾಪ್‌ಕಾರ್ನ್ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನೂ ಪೂರೈಸುತ್ತೆ ಎನ್ನುವುದು ಗೊತ್ತಾ?

ಕಡಿಮೆ ಕ್ಯಾಲೋರಿ ಮತ್ತು ಕೊಬ್ಬಿನಂಶ ಇರುವ ಪಾಪ್‌ಕಾರ್ನ್ ತಿಂದರೆ ಬಾಯಿ ಚಪಲ ತೀರುವುದು ಮಾತ್ರವಲ್ಲ, ಹೊಟ್ಟೆಯನ್ನೂ ತುಂಬಿಸುತ್ತದೆ. ಅಬ್ಬಬ್ಬಾಎಂದರೆ ಕೇವಲ ಉಪ್ಪು, ಬೆಣ್ಣೆ ಹಾಕುವ ಈ ಪಾಪ್‌ಕಾರ್ನ್ ಅನ್ನು ಮಧುಮೇಹಿಗಳೂ ಸೇವಿಸಬಹುದು. ಫೈಬರ್, ವಿಟಮಿನ್ ಬಿ ಹಾಗೂ ಮ್ಯಾಂಗನೀಸ್ ಅಂಶ ಹೆಚ್ಚಿರುವ ಇದು, ದೇಹದ ಅನೇಕ ಅಗತ್ಯಗಳನ್ನು ಪೂರೈಸುತ್ತದೆ. 

*ತೊಕ ಕಡಿಮೆ ಮಾಡುತ್ತದೆ

ಪಾಪ್ ಕಾರ್ನ್ 30 ಕ್ಯಾಲೋರಿ ಹೊಂದಿದ್ದು, ಅದರಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶವಿದೆ. ಹಸಿವು ಹೆಚ್ಚಿಸೋ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೇ ಸ್ಯಾಚುರೇಟೆಡ್ ಕೊಬ್ಬನ್ನೂ ಸೂಕ್ತ ಪ್ರಮಾಣದಲ್ಲಿಡುತ್ತದೆ.

ಕ್ಯಾನ್ಸರ್ ನಿರೋಧಕ

ಕಾರ್ನ್‌ನಲ್ಲಿ ಫೆನೋಲಿಕ್ ಅಂಶವಿದ್ದು, ಇದು ಕ್ಯಾನ್ಸರ್‌ನಂತ ಮಾರಕ ರೋಗವನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

* ಚರ್ಮದ ಸುಕ್ಕು ನಿವಾರಣೆ

ಸುಕ್ಕುಗಳು, ಮಕ್ಯುಲಾರ್ ಡಿಜೆನರೇಷನ್, ದೃಷ್ಟಿದೋಷ, ಸ್ನಾಯು ದೌರ್ಬಲ್ಯ ಮತ್ತು ಕೂದಲುದುರುವಿಕೆ ಸೇರಿ ಅನೇಕ ಸಮಸ್ಯೆಗಳನ್ನು ನಿಯಂತ್ರಿಸಬಲ್ಲದು. 

* ಪಚನ ಕ್ರಿಯೆ ಚುರುಕುಗೊಳಿಸುತ್ತದೆ

ಫೈಬರ್ ಯಥೇಚ್ಛವಾಗಿರುವ ಕಾರ್ನ್ ಪಚನ ಕ್ರಿಯೆ ಸುಲಭಗೊಳಿಸಲು ಸಹಕರಿಸಿ, ಮಲಬದ್ಧತೆಯಂಥ ಸಮಸ್ಯೆಯನ್ನೂ ನಿವಾರಿಸಬಲ್ಲದು.

* ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ

ಪಾಪ್ ಕಾರ್ನ್‌ ರಕ್ತದ ಸಕ್ಕರೆ ಮತ್ತು  ಹೆಚ್ಚು ಇನ್ಸುಲಿನ್ ಬಿಟುಗಡೆಯಾಗುವುದನ್ನು ತಡೆಯುತ್ತದೆ.

loader