ಅದೇ ಬೇಳೆ, ಟೊಮ್ಯಾಟೋ ರಸಂ ತಿಂದು ಬೇಜಾರಾ? ಇಲ್ಲಿದೆ ಹೊಸ ರಸಂ ರೆಸಿಪಿ

First Published 10, Jul 2018, 11:33 AM IST
Beetroot rasam easy recipe
Highlights

ಥಟ್ ಅಂತ ಮನೆಗೆ ಅಥಿತಿಗಳ ಆಗಮನದಿಂದ ದಿಢೀರನೆ  ಅಡುಗೆ ಮಾಡಿ ಬಡಿಸುವುದು ಕಷ್ಟ. ಆದರೆ, ರಸಮ್ ಮಾಡುವುದು ಸುಲಭ. ಅಷ್ಟೇ ಅಲ್ಲದೆ ಊಟದ ನಂತರ ಸುಲಭ ಜೀರ್ಣವಾಗಲು ರಸಂ ದಿವ್ಯೌಷಧ.

ಅದೇ ಬೇಳೆ, ಟೊಮ್ಯಾಟೋ ಸಾರು ತಿಂದು ಬೇಜಾರಾಗಿದ್ಯಾ? ಆದರೂ ಸಾರು ಹಿತ ಎನಿಸೋ ಅಡುಗೆ. ಇಂಥ ರಸಂಗಳ ಪಟ್ಟಿಗೆ ಮತ್ತೊಂದು ರೀತಿಯ ರಸಂ ಅನ್ನು ಸೇರಿಸಿಕೊಳ್ಳಿ. ಆರೋಗ್ಯಕ್ಕೂ ಒಳ್ಳೆಯದಾದ ಸೂಪ್‌ನಂತೆಯೂ ಬಳಸಬಹುದಾದ ಬೀಟ್ರೂಟ್ ರಸಂ ಮಾಡೋ ವಿಧಾನ ಇಲ್ಲಿದೆ....

ಬೇಕಾಗುವ ಪದಾರ್ಥ:

 • ಮಧ್ಯ ಗಾತ್ರದ ಬೀಟ್ರೊಟ್
 • 2 ಚಮಚ ತುರಿದ ತೆಂಗಿನಕಾಯಿ
 • ಎಣ್ಣೆ
 • ಸಾಸಿವೆ 
 • ಜೀರಿಗೆ
 • ಇಂಗು
 • ಹುರಿದ ಉದ್ದಿನ ಬೇಳೆ
 • ಜಜ್ಜಿದ 1 ಬೆಳ್ಳುಳ್ಳಿ
 • ಕರಿ ಬೇವು
 • ಈರುಳ್ಳಿ
 • 2 ಮೆಣಸಿನಕಾಯಿ
 • ಹುಣನೆ ರಸ.
 • ಉಪ್ಪು
 • ಅರಿಷಿಣ
 • ಕೆಂಪು ಖಾರದ ಪುಡಿ
 • ಪುದಿನಾ ಸೊಪ್ಪು
 • ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ:

ಸಣ್ಣಗೆ ಹೆಚ್ಚಿದ ಬೀಟ್ರೊಟ್ ಮತ್ತು ತೆಂಗಿನಕಾಯಿ ತುರಿಯನ್ನು ರುಬ್ಬಿಕೊಳ್ಳಿ.

ವಿಧಾನ - ಒಂದು ಪಾತ್ರೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ ಮತ್ತು ಇಂಗು ಹುರಿದುಕೊಳ್ಳಿ. ಬೆಳ್ಳುಳ್ಳಿ, ಕರಿ ಬೇವು, ಈರುಳ್ಳಿ, ಮೆಣಸಿನಕಾಯಿ ಹಾಕಿ, ತುಸು ಸಮಯ ಹಾಗೇ ಬಿಡಿ. 

 • 5 ನಿಮಿಷಗಳ ನಂತರ  ಹುಣಸೆ ರಸ, ಉಪ್ಪು ಮತ್ತು ಅರಿಶಿಣ ಸೇರಿಸಿ ಕುದಿಸಿ.
 • ಅಳತೆಗೆ ತಕ್ಕಂತೆ ಬೀಟ್ರೊಟ್ ರಸ ಮತ್ತು ನೀರು ಸೇರಿಸಿ ಅದಕ್ಕೆ ಅಚ್ಚು ಖಾರದ ಪುಡಿ, ಪುದಿನಾ ಎಲೆ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಹಾಗೇ ತುಸು ಕಾಲ ಬಿಟ್ಟು ಒಗ್ಗರಣೆ ಹಾಕಿದರೆ, ಬೀಟ್ರೊಟ್ ರಸಂ ರೇಡಿ. 
loader