ಬಾಳೆಹಣ್ಣಿನ ಇಡ್ಲಿ

Banana Idle
Highlights

ಪ್ರತಿ ದಿನ ಬಾಳೆಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಶಕ್ತಿ , ಆರೋಗ್ಯ ನೀಡಿ, ಫಿಟ್ ಇರುವಂತೆ ಮಾಡುತ್ತದೆ. ಹೊಟ್ಟೆ ತುಂಬಿಸಬಲ್ಲ ಈ ಹಣ್ಣನ್ನು ಕೆಲವರು ತಿನ್ನಲು ಇಷ್ಟಪಡುವುದಿಲ್ಲ. ಅಂಥವರು ಇಡ್ಲಿ ತಿನ್ನಬಹುದು. ಸದಾ ಸಾಮಾನ್ಯ ಇಡ್ಲಿತಿಂದು ಬೇಜಾರಾದವರಿಗೆ ಹೊಸ ಟೇಸ್ಟ್ ಸಿಗುವುದಲ್ಲದೇ, ಬಾಳೆಹಣ್ಣೂ ದೇಹ ಸೇರಿದಂತಾಗುತ್ತದೆ.

ಬೇಕಾಗುವ ಸಾಮಾಗ್ರಿ : 

  • 1 ಕಪ್ ರವೆ
  • ಕಾಲು ಕಪ್ ರುಬ್ಬಿದ ತೆಂಗಿನಕಾಯಿ 
  • 3-4  ಹಿಸುಕಿದ ಬಾಳೆಹಣ್ಣು 
  • ಅರ್ಧ ಕಪ್ ಸಕ್ಕರೆ 
  • ರುಚಿಗೆ ತಕ್ಕಷ್ಟು ಉಪ್ಪು
  • ಅರ್ಧ ಚಮಚ ಬೇಕಿಂಗ್ ಸೋಡಾ 
  • ತುಪ್ಪ ನಿಮ್ಮಗೆ ಬೇಕಾದ್ದಷ್ಟು 

ಮಾಡುವ ವಿಧಾನ :

- ಬಾಳೆ ಹಣ್ಣುನ್ನು ಕೈಯಿಂದ ಹಿಸುಕಿ ನಂತರ ತೆಂಗಿನಕಾಯಿ ತುರಿ, ಸಕ್ಕರೆ , ಉಪ್ಪು ಮತ್ತು ಬೇಕಿಂಗ್ ಸೋಡಾ ಸೇರಿಸಿ. 

- ಇಡ್ಲಿ ಪಾತ್ರೆಗೆ ತುಪ್ಪ ಸವರಿ ನಂತರ ಹಿಟ್ಟನ್ನು ಹಾಕಿ, ಮಾಮೂಲಿ ಇಡ್ಲಿಯಂತೆ ಬೇಯಿಸಿ. 

 

loader