ಅನಿವಾರ್ಯ ಕಾರಣಗಳಿಂದ ಪ್ರತಿಯೊಬ್ಬರಿಗೂ ಸಿಟ್ಟು ನೆತ್ತಿಗೇರುತ್ತದೆ. ಆಗ ಕುಟುಂಬದ ಮೇಲೋ, ಪ್ರೀತಿ ಪಾತ್ರರ ಮೇಲೋ ಹರಿಹಾಯುತ್ತೇವೆ. ಕೋಪ ನಿಯಂತ್ರಿಸಿಕೊಳ್ಳಲು ಕಲಿಯಬೇಕು ನಿಜ. ಅದಕ್ಕೂ ಮೊದಲು ಸಿಟ್ಟಿಗೆದ್ದ ಸಮಯದಲ್ಲಿ ಏನನ್ನು ಮಾಡಬಾರದು ಎಂಬುದನ್ನು ಅರಿತುಕೊಳ್ಳಲು ಇಲ್ಲಿವೆ ಟಿಪ್ಸ್
1)ಸಂಬಂಧ ಕಡಿತ: ಸಿಟ್ಟು ಬಂದಾಕ್ಷಣ ಸಂಬಂಧ ಕಡಿದುಕೊಳ್ಳುವ ಮಾತನ್ನು ಆಡಬೇಡಿ. ಆ ಕ್ಷಣಕ್ಕೆ ಹೀಗೆ ಹೇಳುವುದರಿಂದ ನಾನೇ ಗೆದ್ದೆ ಎಂದು ಅನಿಸಬಹುದು. ಆದರೆ, ಅದರಿಂದ ದೀರ್ಘಕಾಲ ದುಃಖ ಪಡಬೇಕಾದ ಸ್ಥಿತಿ ಎದುರಾಗಬಹುದು.
2) ಕೆಟ್ಟಭಾಷೆ: ನೀವೆಷ್ಟೇ ಕೋಪಿಷ್ಠರಾಗಿ ದ್ದರೂ, ಅದು ಗೊತ್ತಿರುವವರು ಹೊಂದಿಕೊಂಡು ಹೋಗುತ್ತಾರೆ. ಆದರೆ, ಸಿಟ್ಟು ಬಂದಾಗ ಯಾವುದೇ ಕಾರಣಕ್ಕೂ ಅವಾಚ್ಯ ಪದ ಬಳಸಬೇಡಿ. ಬಳಸಿದರೆ ಅದು ಪರಿಸ್ಥಿತಿಯನ್ನು ವಿಕೋಪಕ್ಕೆ ತಳ್ಳಬಹುದು.
