ನಿಮ್ಮನ್ನು ಆಗಾಗ ಕಾಡೋ ತಲೆನೋವಿಗೆ ಏಸಿ ಆಗಬಹುದು ಕಾರಣ!
ಉರಿ ಉರಿ ಬಿಸಿಲಲ್ಲೂ ನಮ್ಮನ್ನು ತಂಪಾಗಿ ಇಡುವ ಏಸಿ, ನಮ್ಮ ದೇಹದ ಮೇಲೆ ಬೀರುವ ಪರಿಣಾಮ ಅಷ್ಟಿಷ್ಟಲ್ಲ. ತಲೆನೋವು, ಅಲರ್ಜಿ...ಸಣ್ಣ ಪುಟ್ಟ ಹಲವಾರು ಸಮಸ್ಯೆಗಳನ್ನು ಸೃಷ್ಟಿಸುವ ಈ ಹವಾ ನಿಯಂತ್ರಿತ ಯಂತ್ರ ದೇಹದ ಮೇಲೆ ಪರಿಣಾಮ ಬೀರುವುದರೊಂದಿಗೆ, ಮಾನಸಿಕವಾಗಿಯೂ ನಮ್ಮನ್ನು ಕುಂದಿಸುತ್ತದೆ.
ಈ ಕೂಲ್ ಮಷಿನ್ ನಮ್ಮ ಮೇಲೆ ಬೀರುವ ಪರಿಣಾಮಗಳೇನು ಗೊತ್ತಾ?
- ಡ್ರೈ ಕಣ್ಣು: ಕಣ್ಣು ಉರಿ ಮತ್ತು ನವೆ ತರಿಸುತ್ತದೆ.
- ನಿರ್ಜಲೀಕರಣ. ಎಸಿ ರೂಮಿನಲ್ಲಿ ನೀರು ಕುಡಿಯುವುದು ಕಡಿಮೆಯಾದರೆ, ಡೀಹೈಡ್ರೇಷನ್ ಸಮಸ್ಯೆ ಎದುರಿಸಬೇಕಾಗುತ್ತದೆ.
- ಉಸಿರಾಟದ ತೊಂದರೆಯೊಂದಿಗೆ ಗಂಟಲು ಒಣಗುವುದು, ಮೂಗು ಕಟ್ಟುವುದು ಹಾಗೂ ಮೂಗು ಉರಿ ಅಥವಾ ಊದಿಕೊಳ್ಳುತ್ತದೆ.
- ಆಸ್ತಮಾ ಮತ್ತು ಅಲರ್ಜಿ: ಶುದ್ಧ ಹಾಗೂ ನೈಸರ್ಗಿಕ ಗಾಳಿಯೇ ಇಲ್ಲದೇ, ಬರೀ ಏಸಿ ಕೆಳಗೆ ಕುಳಿತು ಕೆಲಸ ಮಾಡುವುದರಿಂದ ಅಸ್ತಾಮ, ಅಲರ್ಜಿಯಂಥ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.
- ತಲೆ ನೋವು: ಡೀಹೈಡ್ರೇಷನ್‌ನಿಂದ ತಲೆ ನೋವು, ಮೈಗ್ರೇನ್ ಕಾಡುವುದು ಗ್ಯಾರಂಟಿ.