ಶತಾವರಿ ಸಸ್ಯಕ್ಕೆ ಸಂಸ್ಕೃತದಲ್ಲಿ ಶತಮೂಲಿ ಎಂಬ ಹೆಸರಿದೆ. ಇಂಗ್ಲೀಷ್‌ನಲ್ಲಿ ಅಸ್ಪರಾಗಸ್ ಎನ್ನುತ್ತಾರೆ. ಇದಕ್ಕೆ ಆಯುರ್ವೇದದಲ್ಲಿ ಮಹತ್ವದ ಸ್ಥಾನವಿದೆ. ಎದೆಹಾಲು ಉತ್ಪತ್ತಿ, ಚರ್ಮ ರೋಗ, ಮಧುಮೇಹ ಮೊದಲಾದ ಸಮಸ್ಯೆಗಳನ್ನೂ ನಿವಾರಿಸುವ ಶಕ್ತಿ ಈ ಶತಾವರಿಗಿದೆ. ಇದರಿಂದೇನು ಉಪಯೋಗ?

ಡಯಾಬಿಟಿಸ್ ಕಂಟ್ರೋಲ್‌ಗೆ ಡಯಟ್ ಹೀಗಿರಲಿ...

- ಶತಾವರಿ ಬೇರನ್ನು ಎಣ್ಣೆಯಲ್ಲಿ ಕುದಿಸಿ, ಆ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿದರೆ ಚರ್ಮ ರೋಗ ನಿವಾರಣೆಯಾಗುತ್ತದೆ. 
- ಇದರ ಬೇರನ್ನು ಅರೆದು ರಸ ತೆಗೆದು, ಹಾಲಿಗೆ ಬೆರೆಸಿ ದಿನವೂ ಒಂದೊಂದು ಲೋಟ ಕುಡಿಯಬೇಕು. 45 ದಿನಗಳ ಕಾಲ ಈ ಚಿಕಿತ್ಸೆ ಮಾಡಿದರೆ ಮಧುಮೇಹಕ್ಕೆ ಮದ್ದು. 
- ಶತಾವರಿ ಬೇರಿನ ರಸವನ್ನು ಹಾಲು ಸಕ್ಕರೆಯೊಂದಿಗೆ ಪೇಯ ತಯಾರಿಸಿ ಸೇವಿಸಿದರೆ, ಆರೋಗ್ಯ ವರ್ಧನೆಯಾಗುತ್ತದೆ.
- ಶತಾವರಿ ಬೇರನ್ನು ಅಥವಾ ಗಡ್ಡೆಯನ್ನು ಅರೆದು ಜೇನುತುಪ್ಪ ಬೆರೆಸಿ ಸೇವಿಸಿದರೆ, ವಸಡಿನಲ್ಲಿ ರಕ್ತಸ್ರಾವವಾಗೋ ಸಮಸ್ಯೆಗೆ ಮದ್ದು. 
- ಅಡುಗೆಯಲ್ಲಿ ಶತಾವರಿಯನ್ನು ಬಳಸುವುದರಿಂದ ಹೃದಯ ಸಮಸ್ಯೆ ಪರಿಹಾರವಾಗುತ್ತದೆ.
- ಶತಾವರಿ ಬೇರನ್ನು ಅರೆದು ಅದೇ ಪ್ರಮಾಣದ ಹಾಲು ಬೆರೆಸಿ ಕುಡಿದರೆ, ಮೂತ್ರಕೋಶದ ಕಲ್ಲೂ ಕರಗುತ್ತದೆ.
- ಡೆಲಿವರಿ ಆದ ನಂತರ ಎದೆಹಾಲು ಉತ್ಪತ್ತಿ ಆಗದೆ ಇದ್ದರೆ, ಶತಾವರಿ ಬೇರಿನ ಕಷಾಯ ಮಾಡಿ ಕುಡಿದರೊಳಿತು.