ಮಧುಮೇಹ ಇಂದಿನ ದಿನಗಳಲ್ಲಿ ಕೇವಲ ಹಿರಿಯರಿಗೆ ಮಾತ್ರವಲ್ಲ, ಮಕ್ಕಳಿಗೂ ಕಾಡುವುದು ಕಾಮನ್. ಟೈಪ್ 1 ಡಯಾಬಿಟಿಸ್  ಮತ್ತು ಟೈಪ್ 2 ಡಯಾಬಿಟಿಸ್ ಎಂದು ಜನರು ಬಳಲುತ್ತಾರೆ. ಹಲವು ಅಂಗಗಳಿಗೂ ಇದು ಕೆಡಕುಂಟು ಮಾಡುತ್ತದೆ. ಗರ್ಭಿಣಿಯರೂ ಈ ಸಮಸ್ಯೆ ಕಾಡದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಮಕ್ಕಳ ಬೆಳವಣಿಗೆ ಕುಂದು ತರುತ್ತೆ.

ಆದರೆ, ಆಹಾರದಲ್ಲಿ ಪಥ್ಯ ಮಾಡಿದರೆ ಮಧುಮೇಹವನ್ನು ದೂರ ಮಾಡಿಕೊಳ್ಳಬಹುದು. ವಿಟಮಿನ್, ಮಿನರಲ್, ಫ್ಯಾಟ್ ಹೆಚ್ಚಿನ ಪ್ರಮಾಣದಲ್ಲಿರೋ ಆಹಾರಗಳನ್ನು ಸೇವಿಸಿ, ದೇಹದ ಶಕ್ತಿ ಹೆಚ್ಚುವಂತೆ ನೋಡಿಕೊಳ್ಳಬೇಕು. ಇವು ದೇಹದ ಇನ್ಸುಲಿನ್ ಪ್ರಮಾಣವನ್ನೂ ಕಡಿಮೆ ಮಾಡುತ್ತದೆ. ಯಾವವು ಅವು?

ಡ್ರೈ ಫ್ರೂಟ್ಸ್: ಇದು ಮಧುಮೇಹಕ್ಕೆ ಸೂಪರ್ ಫುಡ್. ಮಕ್ಕಳು ಮತ್ತು ಹಿರಿಯರಿಗೂ ಒಳಿತು. ಮುಂಜಾನೆ ವಾಲ್‌ನಟ್ ಸೇವಿಸಿದರೆ ಶುಗರ್‌ಗೆ  ಬೆಸ್ಟ್. 

ಆಲಿವ್ ಆಯಿಲ್: ಅಡುಗೆಗೂ ಬಳಸಬಹುದಾದ ಇದು ಹೃದಯ ಅರೋಗ್ಯ ಚೆನ್ನಾಗಿರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ. 

ಬ್ರೊಕೋಲಿ: ಇದೂ ಶುಗರ್ ಕಂಟ್ರೋಲ್ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ, ಮೆಗ್ನೇಷಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಶುಗರ್ ಲೆವೆಲ್ ಕಂಟ್ರೋಲ್ ಮಾಡುತ್ತದೆ. ಬ್ರೊಕೋಲಿಯನ್ನು ಬೇಯಿಸಿ, ಇಲ್ಲವೇ ಸಲಾಡ್ ಜೊತೆ ತಿನ್ನಬಹುದು. 

ಫ್ಲಕ್ಸ್ ಸೀಡ್ಸ್ : ಈ ಬೀಜ ಅರೋಗ್ಯ ವರ್ಧನೆಗೆ ಒಳ್ಳೆಯದು. ಇದರಲ್ಲಿರುವ ಫೈಬರ್ ಸಕ್ಕರೆ ಪ್ರಮಾಣವನ್ನು ಶುಗರ್ ಕಂಟ್ರೋಲ್ ಮಾಡುತ್ತದೆ. ಟೈಪ್ 2 ಡಯಾಬಿಟಿಸ್ ಸಮಸ್ಯೆ ಉಳ್ಳವರು 12 ವಾರಗಳ ಇದನ್ನು ಸೇವಿಸಿದರೆ, ಶುಗರ್ ಸಮಸ್ಯೆ ನಿವಾರಣೆಯಾಗುತ್ತದೆ. 

ಬೆಳ್ಳುಳ್ಳಿ:  ಬೆಳ್ಳುಳ್ಳಿಯನ್ನು ಪ್ರತಿನಿತ್ಯ ಬಳಸುತ್ತೇವೆ. ಇದರಿಂದ ಎಷ್ಟೊಂದು ಲಾಭ ಇದೆ ಗೊತ್ತಾ? ಬೆಳ್ಳುಳ್ಳಿ ಶುಗರ್ ಕಂಟ್ರೋಲ್ ಮಾಡುವುದರೊಂದಿಗೆ, ಕೊಲೆಸ್ಟ್ರಾಲ್ ಅನ್ನೂ ನಿಯಂತ್ರಣದಲ್ಲಿಡುತ್ತದೆ. 

ಗ್ರೀಕ್ ಯೋಗರ್ಟ್: ಇದು ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ಸಮಸ್ಯೆ ನಿವಾರಿಸುತ್ತದೆ. ಇದು ಬ್ಲಡ್ ಶುಗರ್ ಲೆವೆಲ್ ನಿಯಂತ್ರಿಸುತ್ತೆ. ಟೈಪ್ 2 ಡಯಾಬಿಟಿಸ್ ಹೆಚ್ಚು ಮಹಿಳೆಯರನ್ನು ಕಾಡುತ್ತದೆ. ಹಾರ್ಮೋನ್ ಬದಲಾವಣೆಯಿಂದ ಹೀಗಾಗುತ್ತದೆ. ಇದರಿಂದ ಹೆಚ್ಚುತ್ತದೆ. ಅದಕ್ಕೆ ಗ್ರೀಕ್ ಯೋಗರ್ಟ್ ಸೇವಿಸಿದರೆ ಡಯಾಬಿಟಿಸ್ ನಿಯಂತ್ರಣಕ್ಕೆ ಬರುತ್ತದೆ. 

ಹಸಿರು ತರಕಾರಿ: ಹಸಿರು ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ, ಫೈಬರ್ ಮತ್ತು ಕ್ಯಾಲ್ಶಿಯಂ ಇರುತ್ತದೆ. ಡಯಟ್‌ನಲ್ಲಿ ಪಾಲಕ್, ಸೋರೆಕಾಯಿ, ಮೊದಲಾದ ಹಸಿರು ತರಕಾರಿ ಸೇವಿಸಬೇಕು. 

ಹಾಗಲಕಾಯಿ: ಡಯಾಬಿಟಿಸ್ ರೋಗಿಗಳಿಗೆ ಹಾಗಲಕಾಯಿ ಕೇವಲ ಒಂದು ತರಕಾರಿ ಅಲ್ಲ, ಬದಲಾಗಿ ಅದೊಂದು ಔಷಧಿ. ಯಾಕೆಂದರೆ ಇದರಲ್ಲಿ ಬೀಟಾ ಕ್ಯಾರೋಟಿನ್, ಕ್ಯಾಲ್ಶಿಯಂ, ಐರನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದರ ಜ್ಯೂಸ್ ಸೇವಿಸಿದರೆ ಡಯಾಬಿಟಿಸ್ ಸಮಸ್ಯೆ ಮಾಯವಾಗುತ್ತದೆ.