ಕೋಪಿಷ್ಠರನ್ನು ಈ ಸಮಾಜ ಎಂದಿನಿಂದಲೂ ದೂರದಿಂದಲೇ ನೋಡಿದೆ. ಅಯ್ಯೊ, ಅವರ ಸಹವಾಸವಲ್ಲ ಎಂದು ದೂರವೇ ಇರಲು ಪ್ರಯತ್ನಿಸುತ್ತದೆ. ಆದರೆ, ಬರುವ ಕೋಪವನ್ನು ಬೈಯುವ ಮೂಲಕ  ಪ್ರದರ್ಶನ ಮಾಡುವವರು ಬದುಕಿನಲ್ಲಿ ನೆಮ್ಮದಿಯಾಗಿರ್ತಾರಂತೆ. 

ಆಟೋದವರೊಂದಿಗೆ, ಬಸ್ ಕಂಡಕ್ಟರ್ ಜತೆಗೆ, ಯಾವುದಾದರೂ ಕ್ಯೂನಲ್ಲಿ, ಪಕ್ಕದ ಮನೆಯವರೊಂದಿಗೆ ಜಗಳ (quarrel) ಕಾಯುವವರನ್ನು ನೋಡಿರುತ್ತೇವೆ. ಎದುರಿನಲ್ಲಿ ಯಾರಿದ್ದಾರೆ, ಯಾರು ನೋಡುತ್ತಿದ್ದಾರೆ ಎಂದೆಲ್ಲ ಏನೂ ಗಮನಿಸದೆ ಕೆಟ್ಟ ಬೈಗುಳಗಳೊಂದಿಗೆ ಏರು ಸ್ವರದಲ್ಲಿ ಕಿರಿಚುತ್ತಿರುತ್ತಾರೆ. ಅನೇಕರು ಕಚೇರಿಯಲ್ಲೂ ತಮ್ಮ ಬೀಡುಬೀಸಾದ ವರ್ತನೆಯನ್ನು ಬಿಡುವುದಿಲ್ಲ. ಮನೆಯಲ್ಲಂತೂ ಸರಿಯೇ ಸರಿ. ಹಿರಿಯರಿರಲಿ, ಕಿರಿಯರೇ ಆಗಿರಲಿ ಎಲ್ಲರಿಗೂ ಬೈಯ್ಯುತ್ತಾರೆ. ಎಲ್ಲರ ನಿಷ್ಠುರ ಕಟ್ಟಿಕೊಳ್ಳುವುದು ಅವರ ಸ್ವಭಾವ. ಅವರನ್ನು ನೋಡಿದರೆ ಇವರಿಗೆ ಮಾನಸಿಕವಾಗಿ ತೊಂದರೆಯಿದೆ ಎಂದೆನಿಸುವುದು ಸಹಜ.

ಹೌದು, ತೀರ ಕೋಪಿಷ್ಠ (angry peolple) ರಿಗೆ ಮಾನಸಿಕವಾಗಿ ಸಾಕಷ್ಟು ತೊಂದರೆಗಳಿರುತ್ತವೆ. ಅವರನ್ನು ಮನೋತಜ್ಞರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸುವುದು ಬಹುಮುಖ್ಯ. ಆದರೆ, ಕೆಲವರಿಗೆ ಯಾವುದೇ ಸಮಸ್ಯೆ (problem) ಇಲ್ಲದಿದ್ದಾಗ್ಯೂ ಕೋಪ ಮಾಡಿಕೊಳ್ಳುವ ಅಭ್ಯಾಸವಿರುತ್ತದೆ. ಅವರ ಸ್ವಭಾವದಲ್ಲೇ ಕೋಪವಿರುತ್ತದೆ. ಅವರು ಕೆಟ್ಟ ಪದ (bad words) ಗಳನ್ನು ಅಯಾಚಿತವಾಗಿ ಬಳಸುತ್ತಾರೆ. ಅವರೊಂದಿಗೆ ಬಾಳುವುದು ಭಾರೀ ಕಷ್ಟವೆಂದು ದೂರದಿಂದ ಅನಿಸುತ್ತದೆ. ಆದರೆ, ಅಂಥವರ ಕುರಿತು ವಿಚಿತ್ರ ಸಂಗತಿಯನ್ನು ನ್ಯೂಜೆರ್ಸಿಯ ಕೀನ್ ವಿಶ್ವವಿದ್ಯಾಲಯದ ಅಧ್ಯಯನವೊಂದು ಬಹಿರಂಗಪಡಿಸಿದೆ. ಅದೆಂದರೆ, ಕೆಟ್ಟ ಶಬ್ದ ಉಪಯೋಗಿಸಿ ಹಿಗ್ಗಾಮುಗ್ಗಾ ಬೈಯುವವರು ಮಾನಸಿಕ (psychologically) ವಾಗಿ ಭಾರೀ ಹಾಯಾಗಿರ್ತಾರಂತೆ.

ಈ ರಾಶಿಯ ಹುಡುಗಿಯರಿಗೆ ವಿಪರೀತ ಕೋಪ....ನಿಮ್ಮದ್ಯಾವ ರಾಶಿ?

ಕೋಪವನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಹೊರಹಾಕುವವರು ನೆಮ್ಮದಿ(relax)ಯಾಗಿರುತ್ತಾರಂತೆ. ಎಲ್ಲರೆದುರು ತಮ್ಮ ಕೋಪ (anger) ಹೊರಹಾಕುವ ಮೂಲಕ ಅವರು ಹಗುರವಾಗುತ್ತಾರಂತೆ. ತಾವಾಡುವ ಮಾತಿನ (speech) ಮೇಲೆ ಹಿಡಿತ ಹೊಂದಿಲ್ಲದಿದ್ದರೇನು?ಬೈಗುಳ (biggle) ದ ಮೂಲಕ ಆಗಿಂದಾಗ್ಗೆ ಕೋಪ ನಿವಾರಣೆ ಮಾಡಿಕೊಂಡು ಒತ್ತಡರಹಿತ (tensionfree) ವಾಗಿ ಜೀವನ ಮಾಡುತ್ತಾರಂತೆ.
ಕೋಪವನ್ನು ನುಂಗಿಕೊಂಡು ಬದುಕುವ ಜನರೂ ಇರುತ್ತಾರೆ. ಎಲ್ಲರೆದುರು ಸಾಮಾಜಿಕ ಕಟ್ಟುಪಾಡಿಗೆ ಕಟ್ಟುಬಿದ್ದು ಮುಲಾಜಿಗೆ ಒಳಗಾದವರಂತೆ ವರ್ತಿಸುವವರು ಆಂತರಿಕವಾಗಿ ಒತ್ತಡದಲ್ಲಿ ಇರುತ್ತಾರಂತೆ. ಅವರು ಮೇಲ್ಮುಖವಾಗಿ ಮಾತ್ರ ಶಾಂತಿಯಿಂದಿರುವಂತೆ ಇರುತ್ತಾರೆ. ತಿಂಗಳಾನುಟ್ಟಲೆ ಕೋಪ ನುಂಗಿಕೊಂಡು ಬದುಕುತ್ತಾರೆ. ಯಾವಾಗಲಾದರೂ ಒಮ್ಮೆ ಕೋಪವನ್ನು ಹೊರಹಾಕುತ್ತಾರೆಯೇ ಹೊರತು ಆಗಿಂದಾಗ್ಗೆ ಶಮನ ಮಾಡಿಕೊಳ್ಳುವುದಿಲ್ಲ. ಇಂಥವರು ಪ್ರತಿದಿನ ಒತ್ತಡ, ಚಿಂತೆ, ನೊವಿನಲ್ಲಿ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ. 
ಬಂದ ಸಿಟ್ಟನ್ನು ಆ ಕ್ಷಣದಲ್ಲಿಯೇ ಎಗರಾಡಿ ಬಗೆಹರಿಸಿಕೊಳ್ಳುವವರಿಗೆ ಆಂತರಿಕ ಉದ್ವೇಗ ಕಡಿಮೆ. ಅವರಲ್ಲಿ ಋಣಾತ್ಮಕ (nagative) ಭಾವನೆಗಳೇ ಕಡಿಮೆ ಇರುತ್ತವೆ ಎನ್ನಲಾಗಿದೆ. ಯಾರಿಗಾದರೂ ಒಮ್ಮೆ ಬೈದರೂ ಅವರ ಕುರಿತಾಗಿ ಕಹಿ ಭಾವನೆ ಇಟ್ಟುಕೊಂಡಿರುವುದಿಲ್ಲ. ಒಮ್ಮೆ ಜಗಳವಾಡಿದರೂ ಮತ್ತೊಮ್ಮೆ ಅದನ್ನು ಮರೆತಿರುತ್ತಾರೆ.

ಕೀನ್ ವಿಶ್ವವಿದ್ಯಾಲಯವು ಈ ಸಂಶೋಧನೆಯ ಭಾಗವಾಗಿ ವಿದ್ಯಾರ್ಥಿಗಳ (students) ಮೇಲೆ ಪ್ರಯೋಗ ಮಾಡಿತ್ತು. ಕೈಗಳನ್ನು ತಣ್ಣನೆಯ ನೀರಿನಲ್ಲಿ ಮುಳುಗಿಸಿ, ಕೆಟ್ಟ ಪದಗಳನ್ನು ಬಳಕೆ ಮಾಡಬಹುದೆಂದು ವಿದ್ಯಾರ್ಥಿಗಳಿಗೆ ತಿಳಿಸಲಾಗಿತ್ತು. ಈ ಸಮಯದಲ್ಲಿ ಅವಾಚ್ಯ, ನಿಂದನೀಯ ಪದಗಳನ್ನು ಅತಿ ಹೆಚ್ಚಾಗಿ ಬಳಕೆ ಮಾಡಿದವರು ಅಧಿಕ ಸಮಯ ತಣ್ಣನೆಯ ನೀರಿನಲ್ಲಿ ಕೈಗಳನ್ನು ಇಟ್ಟುಕೊಳ್ಳಲು ಸಮರ್ಥರಾಗಿದ್ದರು. ಆದರೆ, ಮನಸ್ಸಿನಲ್ಲಿಯೇ ನೋವುಂಡವರಿಗೆ ಅಧಿಕ ಸಮಯ ಕೋಲ್ಡ್ ನೀರಿನಲ್ಲಿ ಕೈಗಳನ್ನು ಇಟ್ಟುಕೊಳ್ಳಲು ಸಾಧ್ಯವಾಗಿರಲಿಲ್ಲ. ಕೋಪ ಬಂದಾಗ ಬೈಯುವುದರಿಂದ ಮಾನಸಿಕ ಒತ್ತಡ ಮಾಯವಾಗಿ ರಕ್ತದೊತ್ತಡ ಉಂಟಾಗುವುದಿಲ್ಲ ಎಂದೂ ಈ ಅಧ್ಯಯನ ಹೇಳಿದೆ.

ಮುಖ ಸಿಂಡರಿಸಿ ಗಿಫ್ಟ್ ಎಸೆದ ವಧು..! ವಿಡಿಯೋ ವೈರಲ್

ಕೆಟ್ಟ ಶಬ್ದಗಳನ್ನು ಬಳಕೆ ಮಾಡದೆ ತಮ್ಮ ಪಾಡಿಗೆ ಕೋಪ ನಿಯಂತ್ರಿಸಿಕೊಳ್ಳುವ ಸ್ವಭಾವವರು ಕಷ್ಟದ ಸನ್ನಿವೇಶದಲ್ಲಿ ಹತಾಶರಾಗುತ್ತಾರಂತೆ. ಅವರಲ್ಲಿ ಉತ್ಸಾಹವೂ ಕಡಿಮೆ ಎನ್ನಲಾಗಿದೆ. ಹಾಗೆಂದ ಮಾತ್ರಕ್ಕೆ ನಾಳೆಯಿಂದ ನೀವೂ ಯಾರಿಗೆಂದರೆ ಅವರಿಗೆ ಬೈಯ್ಯಲು ಶುರು ಮಾಡಬೇಡಿ. ಏಕೆಂದರೆ, ಅದು ಸ್ವಭಾವಸಿದ್ಧವಾಗಿ ಬಂದಿರಬೇಕೇ ಹೊರತು ರೂಢಿ ಮಾಡಿಕೊಳ್ಳುವುದು ಸರಿಯಲ್ಲ. ಕೋಪಿಷ್ಠರಿಗೆ ಸಂಬಂಧವನ್ನು ಚೆನ್ನಾಗಿ ನಿಭಾಯಿಸುವ ಕಲೆ ಇರುವುದಿಲ್ಲ ಎನ್ನುವ ಆರೋಪವೂ ಇದೆ. ಹೀಗಾಗಿ, ಅವರ ಸ್ವಭಾವ ಅವರಿಗೆ, ನಿಮ್ಮ ಸ್ವಭಾವ ನಿಮಗೆ. ಅಷ್ಟಕ್ಕೂ ನಮ್ಮ ಸಮಾಜದಲ್ಲಿ ರೀತಿನೀತಿಗಳಿಗೆ. ಮನಸ್ಸಿಗೆ ಬಂದಂತೆ ವರ್ತಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಕೋಪ-ತಾಪ, ಪ್ರೀತಿ (love), ದ್ವೇಷಾಸೂಯೆಗಳ ಮೇಲೆ ನಿಯಂತ್ರಣಯೂ ಇರಬೇಕಾದುದು ಅಗತ್ಯ.