ನವ ವಧುವಿಗೆ ವರನ ಗೆಳೆಯ ಕೊಟ್ಟ ಗಿಫ್ಟ್ ಏನದು ? ಮುಖ ಸಿಂಡರಿಸಿ ಗಿಫ್ಟ್ ಎಸೆದ ನವ ವಧು

ದೆಹಲಿ(ಜು.23): ಭಾರತದಲ್ಲಿ ವಧು-ವರರ ಫನ್‌ಗಳನ್ನು ನೆಟ್ಟಿಗರು ಸಖತ್ ಎಂಜಾಯ್ ಮಾಡ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಕೆಲವು ವಾರಗಳಿಂದ ಇಂತಹ ಬಹಳಷ್ಟು ವಿಡಿಯೋಗಳು ವೈರಲ್ ಆಗುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಲವು ಭಾರತೀಯ ವಿವಾಹಗಳು ಅತಿರೇಕಕ್ಕೆ ಹೋಗುತ್ತವೆ. ಫನ್, ತಮಾಷೆ, ಹಾಸ್ಯ, ಕೀಟಲೆ ಇಲ್ಲದೆ ಭಾರತೀಯ ಮದುವೆಗಳು ಮುಗಿಯೋದೇ ಇಲ್ಲ.

21 ಆಮೆ, ಲ್ಯಾಬ್ರಡಾರ್ ವರದಕ್ಷಿಣೆ ಕೇಳಿದ ವರ..!

ಕಿಡಿಗೇಡಿತನ ಮತ್ತು ಚಿಕ್ಕಪುಟ್ಟ ಅಪಾಯವಿಲ್ಲದೆ ಭಾರತೀಯ ವಿವಾಹಗಳು ಅಪೂರ್ಣವಾಗಿವೆ. ಆದರೆ ಕೆಲವೊಮ್ಮೆ, ಅತಿಥಿಗಳು ಸ್ವಲ್ಪ ಹೆಚ್ಚೇ ವರ್ತಿಸಿಬಿಟ್ಟು ಪೇಚಿಗೀಡಾಗುತ್ತಾರೆ.

ಕೆಲವು ವಾರಗಳ ಹಿಂದೆ, ವಧುವಿನ ಕುಟುಂಬವು ಜಜ್ಪುರದ ಸುಕಿಂದಾದಲ್ಲಿ ವರನ ದಿಬ್ಬಣಕ್ಕೆ ಮಟನ್ ಬಡಿಸದ ಕಾರಣ ಮದುವೆ ಮುರಿದುಬಿತ್ತು. ವರನು ತನ್ನ ಮದುವೆಯಿಂದ ಹೊರನಡೆದಿದ್ದಾನೆ. ನಂತರ ಮಹೋಬಾದಲ್ಲಿನ ವಧು ಆರು ಸುತ್ತುಗಳ ಪವಿತ್ರ ಬೆಂಕಿಯನ್ನು ತೆಗೆದುಕೊಂಡ ನಂತರ ತನ್ನ ಮದುವೆಯನ್ನು ರದ್ದುಗೊಳಿಸಿದಳು.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಹೊಸ ವಿಡಿಯೋವು ವರನ ಸ್ನೇಹಿತರಿಂದ ಉಡುಗೊರೆಯನ್ನು ಪಡೆದ ಮೇಲೆ ವಧು ಕೋಪದಿಂದ ಪ್ರತಿಕ್ರಿಯಿಸುತ್ತಿರುವುದನ್ನು ತೋರಿಸುತ್ತದೆ. ವರನ ಪಕ್ಕದಲ್ಲಿ ಕುಳಿತಿದ್ದ ವಧು, ವರನ ಸ್ನೇಹಿತರಿಂದ ಪ್ಯಾಕ್ ಮಾಡಿದ ಉಡುಗೊರೆಯನ್ನು ಪಡೆಯುತ್ತಾರೆ.

ವರಮಾಲೆ ಹಾಕೋವಾಗ ಸತಾಯಿಸಿದ ವರ..! ಮುಂದಾಗಿದ್ದೇನು ?

ಅವಳು ಪೆಟ್ಟಿಗೆಯನ್ನು ತೆರೆಯುತ್ತಾರೆ. ಅದರೊಳಗೆ ಮಗುವಿನ ಫೀಡಿಂಗ್ ಬಾಟಲ್ ಇರುತ್ತದೆ. ಉಡುಗೊರೆಯಿಂದ ವಧು ಖುಷಿಯಾಗುವುದಿಲ್ಲ. ಪ್ಯಾಕೇಟ್‌ ಎಸೆಯುವ ಮೊದಲು ಅದನ್ನು ಹಸ್ತಾಂತರಿಸಿದ ವ್ಯಕ್ತಿಯನ್ನು ದುರುಗುಟ್ಟಿ ನೋಡುತ್ತಾಳೆ ವಧು.

ಈ ವಿಡಿಯೋವನ್ನು ಬಂಟಿ ಠಾಕೂರ್ ಎಂಬ ಬಳಕೆದಾರರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ 10 ಮಿಲಿಯನ್ ವೀಕ್ಷಣೆಗಳನ್ನು ಮತ್ತು 3.17 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.