Asianet Suvarna News Asianet Suvarna News

ಉಸಿರಾಡುತ್ತಿದ್ದರೆ ನೀರಲ್ಲಿ ಮುಳುಗೋ ಶರೀರ ಸತ್ತ ಮೇಲೆ ತೇಲುವುದು ಹೇಗೆ?

ನೀರಿನಲ್ಲಿ ವ್ಯಕ್ತಿಯ ಹೆಣ ತೇಲುತ್ತಿದ್ದಂತೆ ಎಂದೋ ಅಥವಾ ವ್ಯಕ್ತಿ ಬಿದ್ದಾಗ ನೀರಿನಲ್ಲಿ ಮುಳುಗಿ ಸಾವು ಎಂದೋ ನೀವು ಸುದ್ದಿಗಳನ್ನು ಕೇಳ್ತಿರುತ್ತೀರಿ. ಜೀವನಂತ ವ್ಯಕ್ತಿ ನೀರಿಗೆ ಬೀಳ್ತಿದ್ದಂತೆ ಮುಳುಗಲು ಶುರು ಮಾಡ್ತಾನೆ. ಸತ್ತ್ಮೇಲೆ ತೇಲುತ್ತಾರೆ. ಅದಕ್ಕೆ ಕಾರಣ ಇಲ್ಲಿದೆ. 
 

Alive Person Drowns In Water But Why Dead Body Float On Water Know Answer roo
Author
First Published Nov 15, 2023, 1:00 PM IST

ಜಗತ್ತಿನಲ್ಲಿ ಅನೇಕ ರೀತಿಯ ಜೀವರಾಶಿಗಳಿವೆ. ಪ್ರತಿಯೊಂದು ಜೀವರಾಶಿ ಅಥವಾ ಘಟನೆಗಳು ಕೂಡ ಒಂದೊಂದು ವೈವಿಧ್ಯತೆ ಹಾಗೂ ರಹಸ್ಯವನ್ನು ಹೊಂದಿರುತ್ತದೆ. ಅಂತಹ ನಿಗೂಢ ರಹಸ್ಯವನ್ನು ಭೇದಿಸುವುದು ಸುಲಭವಲ್ಲ. ಹಾಗೊಮ್ಮೆ ರಹಸ್ಯವನ್ನು ಭೇದಿಸಿದರೂ ಅದರ ಹಿಂದಿರುವ ಕಾರಣ ನಮ್ಮ ಊಹೆಗೂ ನಿಲುಕದ್ದಾಗಿರುತ್ತದೆ.

ಮನುಷ್ಯ (Human) ನ ಶರೀರದಲ್ಲಿ ಕೂಡ ನಮಗೆ ತಿಳಿಯದ ಎಷ್ಟೋ ರಹಸ್ಯಗಳು ಅಡಗಿವೆ. ವಿಜ್ಞಾನ (Science) ಎಷ್ಟೇ ಮುಂದುವರೆದರೂ ಮನುಷ್ಯನ ಶರೀರದ ಅನೇಕ ರಹಸ್ಯಗಳನ್ನು ಇಂದಿಗೂ ಭೇದಿಸಲಾಗಲಿಲ್ಲ. ಹಾಗೆಯೇ ಮನುಷ್ಯನ ಸಾವಿನ ನಂತರದ ಸ್ಥಿತಿಗಳ ಬಗ್ಗೆ ಕೂಡ ಅನೇಕರಿಗೆ ತಿಳಿದಿಲ್ಲ. ನೀರಿನಲ್ಲಿ ಈಜಲು ಬರದೇ ಇರುವ ಒಬ್ಬ ವ್ಯಕ್ತಿ ನೀರಿಗೆ ಬಿದ್ದರೆ ಆತನ ಶರೀರ ನೀರಿನಲ್ಲಿ ಮುಳುಗುತ್ತದೆ. ನೀರಿ (Water) ನಲ್ಲಿ ಮುಳುಗಿದ ಆ ವ್ಯಕ್ತಿ ಅಲ್ಲೇ ಸತ್ತಾಗ ಆತನ ಶವ ಮುಳುಗುವ ಬದಲು ನೀರಿನ ಮೇಲೆ ತೇಲುತ್ತದೆ. ಹೀಗೆ ಸತ್ತ ಮನುಷ್ಯನ ಶರೀರ ನೀರಿನಲ್ಲಿ ತೇಲಲು ಕಾರಣವೇನು... ಅದರಲ್ಲಿ ಯಾವ ರಹಸ್ಯ ಅಡಗಿದೆ ಎನ್ನುವುದರ ಮಾಹಿತಿ ಇಲ್ಲಿದೆ.

ಇಶಾ ಅಂಬಾನಿಯ 8.4 ಲಕ್ಷ ಕೋಟಿ ಮೌಲ್ಯದ ಸಂಸ್ಥೆಯ ಸಕ್ಸಸ್‌ಗೆ ಕಾರಣವಾಗಿರೋ ಭಕ್ತಿ ಮೋದಿ ಯಾರು?

ಸಾಮಾಜಿಕ ಜಾಲತಾಣದಲ್ಲಿ ಕ್ಯೋರಾದ ವ್ಯಕ್ತಿಯೊಬ್ಬ ಮನುಷ್ಯನ ಮೃತ ಶರೀರ ನೀರಿನಲ್ಲಿ ಏಕೆ ತೇಲುತ್ತದೆ ಎಂದು ಪ್ರಶ್ನೆ ಮಾಡಿದ್ದ. ಆತನ ಪ್ರಶ್ನೆಗೆ ಅನೇಕ ಮಂದಿ ಉತ್ತರ ನೀಡಿದ್ದಾರೆ. ಅವರಲ್ಲಿ ಒಬ್ಬರು ವ್ಯಕ್ತಿ ಸತ್ತ ನಂತರ ಆತನ ಶರೀರದಲ್ಲಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಈ ಬ್ಯಾಕ್ಟೀರಿಯಾಗಳು ಶರೀರದಲ್ಲಿ ಗ್ಯಾಸ್ ಉತ್ಪತ್ತಿ ಮಾಡುತ್ತವೆ. ಹೀಗೆ ಉತ್ಪತ್ತಿಯಾದ ಗ್ಯಾಸ್ ದೇಹದ ಸಾಂದ್ರತೆಯನ್ನು ಕಡಿಮೆಮಾಡುತ್ತದೆ. ಈ ಕಾರಣದಿಂದಲೇ ಮೃತ ಶರೀರ ನೀರಿನ ಮೇಲೆ ತೇಲುತ್ತದೆ ಎಂದು ಹೇಳಿದ್ದಾನೆ. ಇನ್ನೊಬ್ಬ ಬಳಕೆದಾರ ಒಬ್ಬ ವ್ಯಕ್ತಿ ವೃತನಾದ ನಂತರ ಆತನ ಶರೀರ ಆಕ್ಸಿಜನ್ ಉತ್ಪಾದನೆಯನ್ನು ನಿಲ್ಲಿಸುತ್ತದೆ. ಆದರೆ ಆತನ ಶರೀರ ಕಾರ್ಬನ್ ಡೈ ಆಕ್ಸೈಡ್ ಅನ್ನು ಹೊರಹಾಕುತ್ತಲೇ ಇರುತ್ತದೆ. ಇದರಿಂದ ಶರೀರದಲ್ಲಿ ಗಾಳಿಯ ಪ್ರಮಾಣ ಹೆಚ್ಚುತ್ತದೆ. ಇದರಿಂದ ನೀರಿನ ಸಾಂದ್ರತೆಗಿಂತ ದೇಹದ ಸಾಂದ್ರತೆ ಕಡಿಮೆಯಾಗುತ್ತದೆ. ಈ ಕಾರಣದಿಂದಲೇ ಆತನ ಶರೀರ ನೀರಿನ ಮೇಲೆ ತೇಲುತ್ತದೆ ಎಂದಿದ್ದಾನೆ.

ಆಲೂಗಡ್ಡೆಯಿಂದ ಮಾಡೋ ರೆಸಿಪಿ ಗೊತ್ತು, ಸಿಪ್ಪೆಯಿಂದ ಹೊಸ ಅಡುಗೆ ಮಾಡಿದ್ದಾರೆ ನೋಡಿ!

ದೇಹದ ಸಾಂದ್ರತೆಯಿಂದ ಹೀಗಾಗುತ್ತಾ?: ನಮಗೆ ತಿಳಿದಂತೆ ಹೆಚ್ಚಿನ ಸಾಂದ್ರತೆಯನ್ನು ಹೊಂದಿರುವ ವಸ್ತುಗಳು ಅಥವಾ ಘನ ವಸ್ತುಗಳು ನೀರಿನಲ್ಲಿ ಮುಳುಗುತ್ತದೆ. ವ್ಯಕ್ತಿಯು ಜೀವಂತವಿದ್ದಾಗ ಆತನ ದೇಹದ ಸಾಂದ್ರತೆ ಹೆಚ್ಚು. ಆದರೆ ಸಾವಿನ ನಂತರ ಜೀವಕೋಶಗಳು ಸಾಯಲು ಆರಂಭವಾಗುತ್ತದೆ. ಇನ್ಕೆಲವು ಜೀವಕೋಶಗಳು ಕೆಲವು ಗಂಟೆಗಳ ಕಾಲ ಜೀವಂತವಾಗಿರುತ್ತವೆ. ದೇಹದಲ್ಲಾಗುವ ಇಂತಹ ಅನೇಕ ಬದಲಾವಣೆಗಳಿಂದ ದೇಹದ ಸಾಂದ್ರತೆ ಕಡಿಮೆಯಾಗುತ್ತದೆ. ಈ ಕಾರಣಕ್ಕಾಗಿ ಮೃತ ದೇಹವು ನೀರಿನ ಮೇಲೆ ತೇಲುತ್ತದೆ. ಜೀವಂತ ವ್ಯಕ್ತಿಯ ದೇಹದ ಸಾಂದ್ರತೆಯು ಅವನ ಶ್ವಾಸಕೋಶದಲ್ಲಿ ಎಷ್ಟು ಗಾಳಿ ತುಂಬಿದೆ ಅಥವಾ ಅವನ ದೇಹದಲ್ಲಿ ಎಷ್ಟು ಕೊಬ್ಬು ಇದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ.

ಸತ್ತ ನಂತರ ದೇಹದಲ್ಲಿ ಗ್ಯಾಸ್ ಉತ್ಪತ್ತಿಯಾಗುತ್ತೆ : ಒಬ್ಬ ವ್ಯಕ್ತಿ ನೀರಿನಲ್ಲಿ ಮೃತಪಟ್ಟಾಗ ಒಮ್ಮೆಲೇ ಆತನ ಶರೀರ ಮೇಲೆ ತೇಲಲು ಆರಂಭವಾಗುವುದಿಲ್ಲ. ಮೃತ ಶರೀರ ನೀರಿನ ಮೇಲೆ ತೇಲಲು ಕೆಲವು ಗಂಟೆಗಳ ಸಮಯ ಹಿಡಿಯುತ್ತದೆ. ಒಬ್ಬ ವ್ಯಕ್ತಿ ಮೃತನಾದಾಗ ಅವನ ಶ್ವಾಸಕೋಶದಿಂದ ಗಾಳಿ ಹೊರಬರಲು ಆರಂಭವಾಗುತ್ತದೆ. ಗಾಳಿಯು ಶ್ವಾಸಕೋಶದಿಂದ ಹೊರಬಂದಾಗ ಮೃತದೇಹದ ಸಾಂದ್ರತೆ ಹೆಚ್ಚುತ್ತದೆ ಮತ್ತು ಅದು ಮುಳುಗುತ್ತದೆ. ಕೆಲವು ಸಮಯದ ನಂತರ ಸೂಕ್ಷ್ಮ ಜೀವಿಗಳು ದೇಹದ ಮೇಲೆ ದಾಳಿ ಮಾಡಿ ದೇಹವನ್ನು ತಿನ್ನಲು ಪ್ರಾರಂಭಿಸುತ್ತವೆ. ಈ ಕಾರಣದಿಂದಾಗಿ ದೇಹದಲ್ಲಿ ಅನಿಲ ಉತ್ಪತ್ತಿಯಾಗುತ್ತದೆ. ಆಗ ದೇಹದ ಸಾಂದ್ರತೆ ಕಡಿಮೆಯಾಗಿ ಮೃತ ಶರೀರ ನೀರಿನಲ್ಲಿ ತೇಲುತ್ತದೆ. 
 

Follow Us:
Download App:
  • android
  • ios