ಐಶ್ವರ್ಯಾ ರೈ ಫಿಟ್‌ನೆಸ್ ಗುಟ್ಟು ಯೋಗ

First Published 20, Mar 2018, 6:44 PM IST
Aishwarya Rai fitness secret is yoga
Highlights

ವಾರಕ್ಕೆರಡು ಬಾರಿ ಮಾತ್ರ ಜಿಮ್‌ಗೆ ಹೋಗ್ತಾರೆ. ಯೋಗ ಮತ್ತು ಡಯೆಟ್ ಎರಡೇ ಈಕೆಯ ಫಿಟ್‌ನೆಸ್ ರಹಸ್ಯವಂತೆ.

ವಾರಕ್ಕೆರಡು ಬಾರಿ ಮಾತ್ರ ಜಿಮ್‌ಗೆ ಹೋಗ್ತಾರೆ. ಯೋಗ ಮತ್ತು ಡಯೆಟ್ ಎರಡೇ ಈಕೆಯ ಫಿಟ್‌ನೆಸ್ ರಹಸ್ಯವಂತೆ. ಜಗತ್ತಿನ ಅತ್ಯಂತ ಸುಂದರಿ ಅಂದಾಗ ಕಣ್ಮುಂದೆ ಬರುವ ಚಿತ್ರ ಐಶ್ವರ್ಯಾ ರೈ ಬಚ್ಚನ್. 44 ವರ್ಷದ ಈ ಬೆಡಗಿ 5 ವರ್ಷದ ಹಿಂದೆ ತಾಯಿಯಾದಾಗಹಲವು ಕೆಜಿ ತೂಕ ಏರಿಸಿಕೊಂಡಿದ್ರು. ಇನ್ನು ಹಿಂದಿನ ಫಿಟ್‌ನೆಸ್ ಗಳಿಸಿಕೊಳ್ಳೋದು ಸಾಧ್ಯವೇ ಇಲ್ಲ ಎಂಬಂಥ ಮಾತುಗಳೂ ಕೇಳಿ ಬಂದಿದ್ದವು.

ಇದಕ್ಕೆಲ್ಲ ಕ್ಯಾರೇ ಅನ್ನದ ವಿಶ್ವಸುಂದರಿ ಈಗ ಮೊದಲಿನಂತೇ ಪರ್ಫೆಕ್ಟ್ ಫಿಟ್‌ನೆಸ್‌ಗೆ ಮರಳಿದ್ದಾರೆ. 
ಹೈಟ್: 5 ಅಡಿ 7 ಇಂಚು
ವೈಟ್: 56 ಕೆಜಿ
ಸುತ್ತಳತೆ: 34-26-35
ಐಶ್ ಡಯೆಟ್:  ನಿಂಬೆ ರಸ, ಜೇನುತುಪ್ಪ ಬೆರೆಸಿದ ಬಿಸಿನೀರು ಫಸ್ಟ್ ಡ್ರಿಂಕ್.  ಬ್ರೆಡ್ ರೋಸ್ಟ್, ಓಟ್ ಮೀಲ್‌ನ ಉಪಹಾರ.
ಮಧ್ಯಾಹ್ನ ದಾಲ್, ಅನ್ನ, ತರಕಾರಿಯ ಊಟ.  ರಾತ್ರಿ ಬ್ರೌನ್ ರೈಸ್, ಗ್ರಿಲ್ಡ್ ಫಿಶ್ ತಿನ್ನೋದು. ಅಪ್ಪಿತಪ್ಪಿಯೂ ಜಂಕ್‌ಫುಡ್, ಕರಿದ ಪದಾರ್ಥ ತಿನ್ನಲ್ಲ. ದಿನ ಯೋಗ ತಪ್ಪಿಸೋಲ್ಲ.

loader