ಚತುರ್ಭಾಷಾ ತಾರೆ ರಾಕುಲ್ ಪ್ರೀತ್ ಸಿಂಗ್ ಇಡೀ ದಿನ ಚಾರ್ಜ್ ಆಗಿರೋ ಬ್ಯಾಟರಿ ಥರ ಇರ‌್ತಾರೆ ಅನ್ನೋದು ಅವರ ಫ್ರೆಂಡ್ಸ್ ಹೊಡೆಯೋ ಕಮೆಂಟ್. ಏನು ಮಾಡಿದರೂ ಒಂಚೂರು ದಪ್ಪಗಾಗದ ಈ ಹುಡುಗಿ ಫಿಟ್‌ನೆಸ್‌ಗೆ ಆಕೆ ಆ ಪರಿ ಚುರುಕಾಗಿರೋದೇ ಕಾರಣಾನಾ..

ಜಂಕ್‌ಫುಡ್ ತಿನ್ಬೇಕು ಅನಿಸಿದ್ರೂ ತಿನ್ನಲ್ಲ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ಟ್ರಿಕ್ಟ್ ಡಯೆಟ್‌ಗಿಂತ ಬ್ಯಾಲೆನ್ಸ್‌ಡ್ ಡಯೆಟ್ ಹೆಚ್ಚು ಪರಿಣಾಮಕಾರಿ ಅಂತ ನಂಬ್ಕೊಂಡಿರೋ ಹುಡ್ಗಿ ರಾಕುಲ್. ಡಯೆಟ್ ಹೆಸರಿನಲ್ಲಿ ಹಸಿದುಕೊಂಡಿ ರೋರನ್ನು ಕಂಡರೆ ಈಕೆಗೆ ಸಿಟ್ಟು. ಅನಾರೋಗ್ಯಕಾರಿ ಅನಿಸಿದ ಫುಡ್ ಅನ್ನು ಕಣ್ಣೆತ್ತಿಯೂ ನೋಡಲ್ಲ. ಹಾಗಂತ ಈಕೆ ಏನೂ ಆಹಾರ ಸಂನ್ಯಾಸ ತೆಗೆದುಕೊಂಡವರಲ್ಲ, ಫ್ರೈಡ್ ಐಟಮ್‌ಗಳು, ಚಾಟ್ಸ್ ತಿನ್ನಬೇಕು ಅಂತ ಅನಿಸಿಯೇ ಅನಿಸುತ್ತೆ. ಆದರೆ ಅಂಥ ಆಸೆಗಳನ್ನು ಹತ್ತಿಕ್ಕುತ್ತಾರೆ. ಕೆಲವೊಮ್ಮೆ ನಾಲಗೆ ಚಪಲಕ್ಕೆ ಒಂಚೂರೇ ಚೂರು ತಿಂದು ಎದ್ದು ಬರುತ್ತಾರೆ. ಉಳಿದಂತೆ ಶೂಟಿಂಗ್ ಹೋದ್ರೂ ಔಟಿಂಗ್ ಹೋದ್ರೂ ಮನೆ ಊಟವೇ. ಅದು ಬಿಟ್ಟರೆ ಹಣ್ಣು, ತರಕಾರಿ, ಕಾಳು.

ಫಿಟ್‌ನೆಸ್ ಫ್ರೀಕ್

‘ದಿನದಲ್ಲಿ ಒಮ್ಮೆಯಾದರೂ ಮೈ ಬೆವರದಿದ್ದರೆ ನನಗೆ ಸಹಿಸೋಕೇ ಆಗಲ್ಲ. ಜಿಮ್ ಫ್ರೀಕ್ ನಾನು. ಅನಿವಾರ್ಯವಾಗಿ ಜಿಮ್ ಇಲ್ಲ ಅಂದರೆ ಏನಾದರೂ ವರ್ಕೌಟ್ ಮಾಡ್ತೀನಿ’ ಅನ್ನೋ ರಾಕುಲ್ ಸಖತ್ ಮೂಡಿಯೂ ಹೌದು. ಈ ಮೂಡ್ ಸ್ವಿಂಗ್ ತಪ್ಪಿಸಲು ಆಕೆಗೆ ಸಹಕಾರಿಯಾಗಿರೋದು ವರ್ಕೌಟ್. ಶಕ್ತಿ ಹಾಕಿ ಮಾಡುವ ಹೈ ಇಂಟೆನ್ಸಿಟಿ ಎಕ್ಸರ್‌ಸೈಸ್ಗಳನ್ನೇ ಮಾಡೋಕೆ ಇಷ್ಟ. 

View post on Instagram

ಸಮ್ಮರ್ ಟಿಪ್ಸ್

ಬೇಸಿಗೆಯಲ್ಲಿ ದೇಹ ಬಹಳ ಬೇಗ ನೀರಿನಂಶ ಕಳೆದುಕೊಳ್ಳುತ್ತೆ. ಹೆಚ್ಚೆಚ್ಚು ನೀರು ಕುಡಿಯಿರಿ. ಇದರಿಂದ ದೇಹ ಇಡೀ ದಿನ ಉಲ್ಲಾಸದಿಂದಿರುತ್ತೆ.