ಅಪರೂಪದಲ್ಲಿ ಅಪರೂಪ ಎಂಬಂಥ ಪ್ರಕರಣದಲ್ಲಿ ಈ ನಟಿ, ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ಅನುಭವಿಸಿದ ನೋವಿನಿಂದ ಕಿವುಡುತನಕ್ಕೆ ಒಳಗಾಗಿದ್ದಾರೆ.

ಮಗುವಿಗೆ ಜನ್ಮ ನೀಡುವುದು ಎಲ್ಲರ ಬದುಕಿನಲ್ಲೂ ಮರೆಯಲಾಗದ ಅನುಭವ. ಪ್ರಸವ ವೇದನೆ ಮುಂದೆ ಸರಿಸಮನಾಗಿ ಮತ್ತೊಂದು ನೋವು ನಿಲ್ಲದು. ಆದರೆ, ಹಿಂದಿ ಟಿವಿ ನಟಿ ಚಾವಿ ಮಿತ್ತಲ್‌ಗೆ ಈ ಡೆಲಿವರಿ ಅನುಭವ ಉಳಿದೆಲ್ಲ ತಾಯಂದಿರಂತೆ ಕೇವಲ ಹೆರಿಗೆ ನೋವಿಗೆ ಸೀಮಿತವಾಗಲಿಲ್ಲ. ಬದಲಿಗೆ ಡೆಲಿವರಿ ಬಳಿಕ ಆಕೆಯ ಒಂದು ಕಿವಿ ಕಿವುಡಾಗಿದೆ. 

View post on Instagram

 ಎರಡನೆಯ ಮಗು ಆರಮ್ ಹುಸೇನ್‌ 10 ತಿಂಗಳಾದರೂ ಗರ್ಭದಿಂದ ಹೊರ ಬರುವ ಹುಮ್ಮಸ್ಸು ತೋರದಿದ್ದರಿಂದ ಚಾವಿಗೆ ವೈದ್ಯರು ಆರ್ಟಿಫಿಶಿಯಲ್ ಆಗಿ ನೋವು ಭರಿಸಿದ್ದರು. ಅಷ್ಟೇ ಅಲ್ಲ, ಮಗುವಿಗೆ ಏನಾದರೂ ಸಮಸ್ಯೆ ಇದೆಯೇ ಎಂದು ನೋಡಲು ಸ್ಪೈನಲ್ ಟ್ಯಾಪ್ ಟೆಸ್ಟ್ ಮಾಡಿದ್ದರು. ಇದೀಗ ಈ ಟೆಸ್ಟ್‌ನ ಅಡ್ಡ ಪರಿಣಾಮವಾಗಿ ಚಾವಿ ಕಿವುಡುತನ ಎದುರಿಸುತ್ತಿದ್ದಾರೆ. ಈ ಬಗ್ಗೆ ಸೋಷ್ಯಲ್ ಮೀಡಿಯಾಗಳಲ್ಲಿ ಆಸ್ಪತ್ರೆಯ ಹಾಸಿಗೆ ಮೇಲಿಂದಲೇ ಬರೆದುಕೊಂಡಿರುವ ಚಾವಿ, ಡೆಲಿವರಿ ಬಳಿಕ ತನ್ನ ಕಾಲುಗಳು ಊದಿಕೊಂಡಿದ್ದು, ತಲೆ ಹೊಟ್ಟಿ ಹಾರುವ ಅನುಭವವಾಗುತ್ತಿದೆ. ಕಿವಿ ಕಿವುಡಾಗಿದೆ. ದಿನಕ್ಕೆ 5 ಲೀಟರ್ ನೀರು ಕುಡಿಯಲು ವೈದ್ಯರು ಹೇಳಿದ್ದು, ಒಮ್ಮೆ ಮೂತ್ರಕ್ಕೆ ಹೋಗಲು ಕನಿಷ್ಠ 15 ನಿಮಿಷಗಳು ಬೇಕಾಗುತ್ತಿವೆ ಎಂದು ತಿಳಿಸಿದ್ದಾರೆ. 

View post on Instagram

ಇದೊಂದು ಬಹಳ ಅಪರೂಪದ ಪ್ರಕರಣವಾಗಿದ್ದು, ಕಿವುಡುತನ ಕೆಲ ದಿನಗಳ ಬಳಿಕ ಹೋಗುತ್ತದೆ ಎಂದು ವೈದ್ಯರು ನೀಡಿದ ಭರವಸೆಯನ್ನು ಚಾವಿ ಪುನರುಚ್ಚರಿಸುತ್ತಾರೆ. ಇಷ್ಟಾದರೂ ತಾನು ಎಕ್ಸ್‌ಕ್ಯೂಸ್ ಕೊಟ್ಟುಕೊಳ್ಳದೆ ಕೆಲಸ ಮಾಡಲು ಬಯಸುತ್ತೇನೆ. ಈ ಕಾಲ ಬದಲಾಗುತ್ತದೆ, ಮಕ್ಕಳಿಗೆ ಹಾರ್ಡ್ ವರ್ಕ್ ಮಾಡಲು ಪ್ರೇರಣೆಯಾಗುತ್ತೇನೆ ಎಂದು ಆಕೆ ಪಾಸಿಟಿವ್ ಚಿಂತನೆಗಳನ್ನು ಹರಿಬಿಟ್ಟಿದ್ದಾರೆ.