ಬಳ್ಳಿಯಂತೆ ಬಾಗಿ ಬಳುಕುವ ಪುಟಾಣಿ ಬಾಲಕ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬಂತೆ ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ಪಡೆದ 20 ಪದಕಗಳಲ್ಲಿ 19 ಬಂಗಾರದ ಪದಕ ಬಾಚಿಕೊಂಡ ಯೋಗ ಪಟುವಿಗೆ 13 ರ ಹರೆಯ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಾಲ್ಕಣಿ ಜೋಗನಮನೆಯ ಅಭಿಷೇಕ ಹೆಗಡೆಗೆ ಯೋಗದ ಆಯಾಮವೆಂದರೆ ಸಲೀಸು.  

ಬಳ್ಳಿಯಂತೆ ಬಾಗಿ ಬಳುಕುವ ಪುಟಾಣಿ ಬಾಲಕ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬಂತೆ ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ಪಡೆದ 20 ಪದಕಗಳಲ್ಲಿ 19 ಬಂಗಾರದ ಪದಕ ಬಾಚಿಕೊಂಡ ಯೋಗ ಪಟುವಿಗೆ 13 ರ ಹರೆಯ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಾಲ್ಕಣಿ ಜೋಗನಮನೆಯ ಅಭಿಷೇಕ ಹೆಗಡೆಗೆ ಯೋಗದ ಆಯಾಮವೆಂದರೆ ಸಲೀಸು, ದೇಶದ ಯಾವುದೇ ಮೂಲೆಯ ಸ್ಪರ್ಧೆಯಲ್ಲೂ ಈತನಿಗೊಂದು ಪದಕ ಗ್ಯಾರಂಟಿ. ಚಿಕ್ಕ ವಯಸ್ಸಿನಲ್ಲಿಯೇ ಯೋಗ ಸಾಧನೆಯ ಮೂಲಕ ಪ್ರೌಢ ಶಿಕ್ಷಣ ಇಲಾಖೆಯ ಗಮನ ಸೆಳೆದಿರುವ ಇವನು ಯೋಗಾಸುರನೇ.

ಬಾಲಚಂದ್ರ ಹೆಗಡೆ ಹಾಗೂ ಮಂಗಳಾ ದಂಪತಿಗಳ ಪುತ್ರ ಅಭಿಷೇಕ ಹೆಗಡೆ ಸಮೀಪದ ಸಾಲ್ಕಣಿ ಶ್ರೀಲಕ್ಷ್ಮೀನೃಸಿಂಹ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿ. ಇದುವರೆಗೂ ಬರೋಬ್ಬರಿ 20 ಅಂತರಾಷ್ಟ್ರೀಯ ಮಟ್ಟದ ಪದಕಗಳ ಒಡೆಯನಾಗಿ ರಾಜ್ಯದ ಗಮನ ಸೆಳೆಯುತ್ತಿದ್ದಾನೆ.

ಎಲ್ಲೆಲ್ಲಿ ದಿಗ್ವಿಜಯ: ಛತ್ತೀಸ್ ಘಡ, ಗೋವಾ, ಡೆಲ್ಲಿ, ಚೆನ್ನೈ ಸೇರಿದಂತೆ ದೇಶದ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಖಾಸಗಿ ಹಾಗೂ ಸರ್ಕಾರಿ, ಪತಂಜಲಿ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಅಭಿಷೇಕ ಹೆಗಡೆ 20 ಕ್ಕೂ ಅಧಿಕ ಪದಕ, ಪಾರಿತೋಷಗಳನ್ನು ತನ್ನದಾಗಿಸಿಕೊಂಡಿದ್ದಾನೆ. ಪುಟ್ಟ ಯೋಗಪಟುವಿನ ಪ್ರತಿಭೆಗೆ ಪ್ರೋತ್ಸಾಹಿಸುವ ಮನಸ್ಸುಗಳು 9448227725
ಸಂಪರ್ಕಿಸಬಹುದು.