Asianet Suvarna News Asianet Suvarna News

90 ವರ್ಷಗಳಿಂದ ಬಟ್ಟೆಯನ್ನೇ ಧರಿಸಿಲ್ಲ ಈ ಗ್ರಾಮದ ಜನ

ಪ್ರಪಂಚದಲ್ಲಿ ಅನೇಕ ದೇಶವಿದೆ. ಪ್ರತಿಯೊಂದು ದೇಶದಲ್ಲೂ ನಾನಾ ಪದ್ಧತಿ, ಸಂಪ್ರದಾಯಗಳಿವೆ. ಆಧುನಿಕ ಜಗತ್ತಿನಲ್ಲಿ ಕೆಲ ಪದ್ಧತಿಗಳು ಮೂಲೆಗುಂಪಾಗಿವೆ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಈಗ್ಲೂ ಹಳೆ ಸಂಪ್ರದಾಯಪಾಲಿಸಿಕೊಂಡು ಬರ್ತಿದ್ದಾರೆ. ಬೆತ್ತಲಾಗಿ ಓಡಾಡ್ತಾರೆ. 
 

A Village Where Nobody Wears Clothes since 9 dicades
Author
First Published Sep 15, 2022, 1:15 PM IST

ಫ್ಯಾಷನ್ ಜಗತ್ತು ಬೆಳೆಯುತ್ತಿದೆ. ದಿನಕ್ಕೊಂದು ಸುಂದರ, ಆಕರ್ಷಕ ಬಟ್ಟೆಗಳು ಜನರನ್ನು ಸೆಳೆಯುತ್ತಿವೆ. ಜನರು ಆಕರ್ಷಕ ಬಟ್ಟೆಗಳನ್ನು ಖರೀದಿಸಿ ಅದನ್ನು ಧರಿಸಲು ಉತ್ಸುಕರಾಗಿದ್ದಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಬೆತ್ತಲಾಗಿರಲು ಇಷ್ಟಪಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಕೆಲ ದೇಶಗಳಲ್ಲಿ ಇದಕ್ಕಾಗಿಯೇ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಬಟ್ಟೆ ಇಷ್ಟಪಡದ, ಬೆತ್ತಲಾಗಿರಲು ಇಚ್ಛಿಸುವ ಜನರ ಗುಂಪುಗಳೂ ಇವೆ. ಬಟ್ಟೆ ಅಂದ್ರೆ ಅಲರ್ಜಿ ಎನ್ನುವವರು ನೀವೂ ಆಗಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಬಟ್ಟೆಯನ್ನೇ ಧರಿಸದ ಊರಿಗೆ ನೀವು ಪ್ರಯಾಣ ಬೆಳೆಸಬಹುದು. ಬೆತ್ತಲಾಗಿ ಎಲ್ಲ ಕಡೆ ಸುತ್ತಾಡಬಹುದು. 

ಪ್ರಪಂಚ (World) ದಲ್ಲಿ ಚಿತ್ರ ವಿಚಿತ್ರ ಪದ್ಧತಿಗಳಿವೆ. ಕೆಲ ಪ್ರದೇಶಗಳಲ್ಲಿ ಮೈತುಂಬ ಬಟ್ಟೆ (Clothes) ಧರಿಸದೆ ಮನೆಯಿಂದ ಹೊರಗೆ ಹೋಗುವಂತಿಲ್ಲ. ಮತ್ತೆ ಕೆಲವೆಡೆ ಬಟ್ಟೆಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಆದ್ರೆ ಈ ಊರಿನಲ್ಲಿ ಯಾರೂ ಬಟ್ಟೆಯನ್ನೇ ಧರಿಸೋದಿಲ್ಲ. ವಿಚಿತ್ರ ಸಂಪ್ರದಾಯ ಪಾಲನೆಯಲ್ಲಿರುವ ಆ ಊರಿನಲ್ಲಿ 90 ವರ್ಷಗಳಿಂದ ಜನರು ಬಟ್ಟೆ ಧರಿಸಿಲ್ಲ. ಇಂದು ಆ ಊರಿನ ವಿಶೇಷತೆಗಳ ಬಗ್ಗೆ ನಿಮಗೆ ಹೇಳ್ತೇವೆ.

ಈ ಊರಿನಲ್ಲಿ  ಬೆತ್ತಲಾಗಿರುತ್ತಾರೆ ಜನರು : ಬ್ರಿಟನ್ (Britain) ನ ಹರ್ಟ್‌ಫೋರ್ಡ್‌ಶೈರ್‌ ನಲ್ಲಿ ಸ್ಪೀಲ್‌ಪ್ಲಾಟ್ಜ್ (Spielplatz)  ಹೆಸರಿನ ಒಂದು ಊರಿದೆ. ಸ್ಪೀಲ್‌ಪ್ಲಾಟ್ಜ್ ಅಂದರೆ ಆಟದ ಮೈದಾನ ಎನ್ನುವ ಅರ್ಥವನ್ನು ನೀಡುತ್ತದೆ. ಈ ಊರು ಸಾಕಷ್ಟು ರಹಸ್ಯದಿಂದ ಕೂಡಿದೆ. ಇಲ್ಲಿ ಜನರು 90 ವರ್ಷಗಳಿಂದ ಬಟ್ಟೆ ಧರಿಸಿಲ್ಲ. ಇವರ ಬಳಿ ಬಟ್ಟೆ ಖರೀದಿಸಲು ಹಣವಿಲ್ಲ ಎಂದಲ್ಲ. ಬಟ್ಟೆ ಧರಿಸದೆ ಇರೋದು ಇಲ್ಲಿನ ಸಂಪ್ರದಾಯ. ಅದನ್ನು ಈಗ್ಲೂ ಜನರು ಪಾಲಿಸಿಕೊಂಡು ಬರ್ತಿದ್ದಾರೆ.

ಚಿಕ್ಕ ಮಕ್ಕಳು ದೊಡ್ಡವರಿಗಿಲ್ಲ ವ್ಯತ್ಯಾಸ : ಹಿಂದೆ ಹೇಳಿದಂತೆ ಕಳೆದ 90 ವರ್ಷಗಳಿಂದ ಇಲ್ಲಿನವರು ಬಟ್ಟೆ ಧರಿಸಿಲ್ಲ. ಬರೀ ಮಕ್ಕಳು ಮಾತ್ರವಲ್ಲ ಹಿರಿಯರು ಕೂಡ ಬೆತ್ತಲಾಗಿಯೇ ಓಡಾಡ್ತಾರೆ. ಹಿಂದಿನಿಂದ ನಡೆದು ಬಂದ ಪದ್ಧತಿಯನ್ನು ಇಲ್ಲಿನವರು ಚಾಚು ತಪ್ಪದೆ ಪಾಲಿಸುತ್ತ ಬಂದಿರುವುದು ವಿಶೇಷ.

ಸ್ಮೋಕ್‌ ಮಾಡ್ತೀರಾ ? ಬೆನ್ನು ನೋವು ಅಂತ ಒದ್ದಾಡ್‌ಬೇಕಾಗುತ್ತೆ ಎಚ್ಚರ

ಏಕೆ ಧರಿಸಲ್ಲ ಬಟ್ಟೆ? : ಈ ಸಮುದಾಯವನ್ನು ಚಾರ್ಲ್ಸ್ ಮೆಕ್‌ಕಾಸ್ಕಿ ಎಂಬಾತ 1929ರಲ್ಲಿ ಸ್ಥಾಪನೆ ಮಾಡಿದ್ದಾನೆ. ಪ್ರಕೃತಿ ಹಾಗೂ ನಗರದಲ್ಲಿ ವಾಸಿಸುವ ಜನರಿಗೆ ಯಾವುದೇ ವ್ಯತ್ಯಾಸವಿಲ್ಲವೆಂದು ಆತ ಹೇಳಿದ್ದ. ಹಾಗೆಯೇ ಬೇರೆ ಸಮುದಾಯದವರಿಗೆ ಬಟ್ಟೆ ಧರಿಸದಂತೆ ಆತ ಮನವಿ ಮಾಡಿದ್ದನಂತೆ. ಆತನ ಮಗ 82 ವರ್ಷದ ಐಸೆಲ್ಟ್ ರಿಚರ್ಡ್‌ಸನ್ ಇನ್ನೂ ಬದುಕಿದ್ದು, ಜೀವನವನ್ನು ಆನಂದಿಸುತ್ತಿದ್ದಾನೆ. ಇಲ್ಲಿನ ಜನರು ಪ್ರಕೃತಿ ಪ್ರೇಮಿಗಳು. ದೇವರು ನಮ್ಮನ್ನು ಬಟ್ಟೆಯಿಲ್ಲದೆ ಈ ಪ್ರಪಂಚಕ್ಕೆ ನೀಡಿದ್ದಾನೆ. ಹಾಗಿರುವಾಗ ನಾವು ಬಟ್ಟೆ ಏಕೆ ಧರಿಸಬೇಕು? ಬಟ್ಟೆ ಧರಿಸುವುದು ತಪ್ಪು ಎಂದು ಇಲ್ಲಿನವರು ಭಾವಿಸಿದ್ದಾರೆ.

ಗ್ರಾಮದಲ್ಲಿದೆ ಈ ಎಲ್ಲ ಸೌಲಭ್ಯ : ಬೆತ್ತಲಾಗಿ ಓಡಾಡುವ ಇಲ್ಲಿನ ಜನರು ಆಧುನಿಕ ಸೌಲಭ್ಯಗಳನ್ನು (Modern Facility) ಹೊಂದಿದ್ದಾರೆ. ಜನರು ದೊಡ್ಡ ಮನೆಗಳಲ್ಲಿ ವಾಸಿಸುತ್ತಾರೆ. ಎರಡು ಅಂತಸ್ತಿನ ಮನೆಗಳು ಇಲ್ಲಿವೆ. ಈಜುಕೊಳ, ಬಾರ್‌ ಸೇರಿದಂತೆ ಅನೇಕ ಐಷಾರಾಮಿ ಸೌಲಭ್ಯಗಳು ಈ ಗ್ರಾಮದಲ್ಲಿದೆ. ಈ ಗ್ರಾಮದಲ್ಲಿ 78.6 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಮೌಲ್ಯದ ಎರಡು ಮಲಗುವ ಕೋಣೆ ಬಂಗಲೆ ಕೂಡ ಇದೆ ಅಂದ್ರೆ ನೀವು ನಂಬ್ಲೇಬೇಕು. 

Sexual Wellness: ಈ ಹುಡುಗಂಗೆ ಆಂಟೀರಂದ್ರೆ ಪ್ರಾಣ ಅಂತೆ; ಹುಡುಗೀರಂದ್ರೆ ಅಷ್ಟಕ್ಕಷ್ಟೇ!

ಈ ಗ್ರಾಮದ ಬಗ್ಗೆ ಅನೇಕ ಸಿನಿಮಾ ಹಾಗೂ ಸಾಕ್ಷ್ಯ ಚಿತ್ರಗಳನ್ನು ಮಾಡಲಾಗಿದೆ. ನೆರೆ ಹೊರೆಯ ಊರಿನವರು, ಪೋಸ್ಟ್ ಮೆನ್ ಗಳು ಅಥವಾ ಡಿಲೆವರಿ ಹುಡುಗ್ರು ಇಲ್ಲಿಗೆ ಬರ್ತಿರುತ್ತಾರೆ. ನೀವು ಈ ಊರು ನೋಡ್ಬೇಕೆಂದ್ರೆ ಆರಾಮವಾಗಿ ಹೋಗಿ ಬರಬಹುದು. ಅದಕ್ಕೆ ನೀವು ಬಟ್ಟೆ ಬಿಚ್ಚಬೇಕಾಗಿಲ್ಲ. 
 

Follow Us:
Download App:
  • android
  • ios