ಹರಸುವ ಮನಸ್ಸಿರಲಿ: ಈ ಸಲಿಂಗಿಳ ಪ್ರಿ ವೆಡ್ಡಿಂಗ್ ಶೂಟ್ ಸದಾ ನೆನಪಿರಲಿ!

First Published 12, Dec 2019, 4:54 PM

ಪ್ರಿ ವೆಡ್ಡಿಂಗ್ ಪೋಟೋಶೂಟ್ ಸದ್ಯ ಮದುವೆಯ ಒಂದು ಭಾಗವಾಗಿ ಮಾರ್ಪಾಡಾಗಿದೆ. ಮದುವೆ ಎಂಬ ಬಂಧನದಲ್ಲಿ ಬೆಸೆಯುವ ಬಹುತೇಕ ಎಲ್ಲಾ ಜೋಡಿ ವಿವಾಹ ಪೂರ್ವ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಸದ್ಯ ಕೇರಳದಲ್ಲೂ ಸಲಿಂಗಿಗಳು ಫೋಟೋ ಶೂಟ್ ಮಾಡಿಸಿದ್ದಾರೆ. ತಮ್ಮೆಲ್ಲಾ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಇವರು #LoveIsLove ಎಂಬ ಹ್ಯಾಷ್ ಟ್ಯಾಗ್ ನೀಡಿದ್ದಾರೆ.

32 ವರ್ಷದ ನಿವೇದ್ ಆ್ಯಂಟನಿ ಹಾಗೂ 27 ವರ್ಷದ ಅಬ್ದುಲ್ ರಹೀಂ ಇಬ್ಬರೂ ಕೇರಳದವರು.

ಇವರಿಬ್ಬರೂ ಅತಿ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ.

ಈ ಜೋಡಿ ಮದುವೆಗೂ ಮುನ್ನ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡಿದ್ದಾರೆ. ತಮ್ಮ ಸಾಕು ನಾಯಿಗಳನ್ನೂ ಶಾಮೀಲುಗೊಳಿಸಿದ್ದಾರೆ.

ಸಲಿಂಗಿ ದಂಪತಿಯ ಪ್ರಿ ವೆಡ್ಡಿಂಗ್ ಫೋಟೋಶೂಟ್ ಕೂಡಾ ಇತರರಂತೆ ಸುಂದರ ಹಾಗೂ ರೊಮ್ಯಾಂಟಿಕ್ ಆಗಿರುತ್ತದೆ ಎಂದು ನಾವು ಸಾಬೀತುಪಡಿಸಿದ್ದೇವೆ. ಅಶ್ಲೀಲತೆ ಏನೂ ಇಲ್ಲ- ನಿವೇದ್ ಆ್ಯಂಟನಿ

ನಾವು ಇತರ ಸಾಮಾನ್ಯ ಜೋಡಿಗಳಂತೆ ಮದುವೆಯಾಗಲಿಚ್ಛಿಸುತ್ತೇವೆ. ಇದೇ ಕಾರಣದಿಂದ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದೇವೆ- ನಿವೇದ್ ಆ್ಯಂಟನಿ

ನಿವೇದ್ ಆ್ಯಂಟನಿ ಹಾಗೂ ಅಬ್ದುಲ್ ರಹೀಂ ಮದುವೆಗೂ ಮುನ್ನ ಮೆಹಂದಿ, ಅರಶಿಣ ಹಾಗೂ ಸಂಗೀತ್ ಕಾರ್ಯಕ್ರಮ ಕೂಡಾ ಏರ್ಪಡಿಸಲಾಗಿದೆ.

ಜಗತ್ತಿನೆದುರು ನಮ್ಮ ಸಂಬಂಧ ಬಹಿರಂಗಪಡಿಸುವುದು ಸುಲಭದ ಮಾತಾಗಿರಲಿಲ್ಲ. ಯಾಕಂದ್ರೆ ಭಾರತದಲ್ಲಿ ನಮ್ಮ ಪ್ರೀತಿ ನಿವೇದನೆ ಮಾಡಿಕೊಳ್ಳುವುದು ಬಹಳ ಕಷ್ಟ. ಆದರೀಗ ಮುಂದುವರೆಯುವ ನಿರ್ಧಾರ ತೆಗೆದುಕೊಂಡಿದ್ದೇವೆ. ಖುಷಿಯಾಗುತ್ತಿದೆ- ಅಬ್ದುಲ್ ರಹೀಂ

ನಿವೇದ್ ಹಾಗೂ ಅಬ್ದುಲ್ ಕಳೆದ 5 ವರ್ಷಗಳ ಹಿಂದೆ ಮದುವೆ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು.

ಮೊದಲು ಅಬ್ದುಲ್ ನಿವೇದ್ ಗೆ ಪ್ರೊಪೋಸ್ ಮಾಡಿದ್ದರಂತೆ

ಈ ಜೋಡಿ ಕೆನಡಾ ಅಥವಾ ಅಮೆರಿಕಾದಲ್ಲಿ ಮದುವೆಯಾಗಲು ಇವರು ನಿರ್ಧರಿಸಿದ್ದರು. ಬಳಿಕ ಇದನ್ನು ಕೈಬಿಟ್ಟು ಭಾರತದಲ್ಲೇ ಮದುವೆಯಾಗುವ ನಿರ್ಧಾರ ತೆಗೆದುಕೊಂಡಿದ್ದಾರೆ

ಮುಂದೆ ಮಕ್ಕಳನ್ನು ಮಾಡಿಕೊಳ್ಳಲು IVF ತಂತ್ರಜ್ಞಾನ ಬಳಸಿಕೊಳ್ಳುತ್ತೇವೆ ಎಂಬುವುದು ಈ ಜೋಡಿಯ ಮಾತು

loader