ಉತ್ತಮ ಆರೋಗ್ಯಕ್ಕೆ ಅಥವಾ ತೂಕ ಕಳೆದುಕೊಳ್ಳಲು ಒಂದು ಬೌಲ್ ಪೂರ್ತಿ ಓಟ್ಸ್ ತಿಂದರೆ ಸಾಕು. ಇದು ಡೆಡ್ ಸ್ಕಿನ್, ಬ್ಲಾಕ್ ಹೆಡ್  ನಿವಾರಿಸುತ್ತದೆ. ಆದರೆ ಇದನ್ನು ಹೇಗೆ ಬಳಸಬೇಕು  ಅನ್ನೋದು ತಿಳಿದಿದ್ದರೆ ಸಾಕು.. 

- ಓಟ್ಸ್‌ಗೆ ನೀರು ಬೆರೆಸಿ ಪೇಸ್ಟ್ ತಯಾರಿಸಿ, ಮುಖಕ್ಕೆ ಫೇಸ್ ಮಾಸ್ಕ್‌ನಂತೆ ಹಚ್ಚಿ. ಇದರಿಂದ  ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ. 

- ಓಟ್ಸ್‌ನಲ್ಲಿರುವ ವಿಟಮಿನ್ ಇ ಚರ್ಮಕ್ಕೆ ಮಾಯಿಶ್ಚರೈಸ್ ನೀಡುತ್ತದೆ.  ಎರಡೂ ಚಮಚ ಓಟ್ಸ್ ಪುಡಿಗೆ ಒಂದು ಚಮಚ ಜೇನುತುಪ್ಪ, ಎರಡು ಚಮಚ ಹಾಲು ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಸ್ಕಿನ್ ಸಾಫ್ಟ್ ಆಗುತ್ತದೆ. 

- ಓಟ್ಸ್‌ಗೆ  ಸ್ವಲ್ಪ ಟೊಮ್ಯಾಟೋ ಹಣ್ಣಿನ ತಿರುಳನ್ನು ಬೆರಸಿ.  ಮೆತ್ತಗಾದ ಬಳಿಕ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. ಹತ್ತು ನಿಮಿಷಗಳ ನಂತರ ತೊಳೆಯಿರಿ. ಇದರಲ್ಲಿರುವ ಟೊಮ್ಯಾಟೋ ಮುಖದ ಬಣ್ಣವನ್ನು ತಿಳಿಯಾಗಿಸುತ್ತದೆ. 

ಈರುಳ್ಳಿ ರಸದಲ್ಲಿ ಅಡಗಿದೆ ಸ್ಕಿನ್ ಮತ್ತು ಕೂದಲಿನ ಆರೋಗ್ಯದ ಗುಟ್ಟು !

- ಡ್ರೈ ಸ್ಕಿನ್ ಸಮಸ್ಯೆ ಇದ್ದವರು ಸ್ನಾನ ಮಾಡುವ ನೀರಿಗೆ ಓಟ್ಸ್ ಮತ್ತು ಬೇಕಿಂಗ್ ಸೋಡಾ ಹಾಕಿ ಆ ನೀರಿನಲ್ಲಿ ಸ್ನಾನ ಮಾಡಿ. ಹೀಗೆ ನಿಯಮಿತವಾಗಿ ಮಾಡಿದರೆ ಡ್ರೈ ಸ್ಕಿನ್ ಸಮಸ್ಯೆ ನಿವಾರಣೆಯಾಗುತ್ತೆ. 

- ಎರಡು ಚಮಚ ಓಟ್ಸ್‌ಗೆ ಅರ್ಧ ಹೋಳು ನಿಂಬೆ ರಸ ಮತ್ತು ಒಂದು ಚಮಚ ಆಲಿವ್ ಎಣ್ಣೆಯನ್ನು ಹಾಕಿ ಬೆರೆಸಿ. ಇದನ್ನು ಮುಖಕ್ಕೆ ಲೇಪಿಸಿ ಹತ್ತು ನಿಮಿಷದ ನಂತರ ತೊಳೆಯಿರಿ. ಇದು ಆಯ್ಲಿ ಸ್ಕಿನ್ ಸಮಸ್ಯೆಗೆ ಮದ್ದು.  

- ಓಟ್ಸ್ ಜೊತೆಗೆ ಯೋಗರ್ಟ್ ಮಿಕ್ಸ್ ಮಾಡಿ ಅದಕ್ಕೆ ನಿಂಬೆ ರಸ ಬರೆಸಿ ಮುಖಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ತೊಳೆದರೆ ಬ್ಲಾಕ್ ಹೆಡ್ಸ್ ನಿವಾರಣೆಯಾಗಿ ಮುಖ ಸಾಫ್ಟ್ ಆಗುತ್ತೆ. 

ಬಾಯಿಗೂ ರುಚಿ, ದೇಹಕ್ಕೂ ಹಿತವಾದ ಓಟ್ಸ್ ದೋಸೆ

- ತುರಿಕೆ ಸಮಸ್ಯೆ ಇದ್ದರೆ ಹಾಲಿನ ಜೊತೆ ಓಟ್ಸ್ ಮಿಕ್ಸ್ ಮಾಡಿ ಪೇಸ್ಟ್ ಮಾಡಿ. ಮುಖಕ್ಕೆ ಹಚ್ಚಿ ಒಣಗಿದ ನಂತರ ತಣ್ಣಗೆ ನೀರಿನಲ್ಲಿ ತೊಳೆಯಿರಿ. ಇದರಿಂದ ತುರಿಕೆ ಸಮಸ್ಯೆ ಸಂಪೂರ್ಣ ನಿವಾರಣೆಯಾಗುತ್ತದೆ.