Asianet Suvarna News Asianet Suvarna News

ಹೂವಿನಂಥ ಸ್ಕಿನ್ ನಿಮ್ಮದಾಬೇಕೆಂದ್ರೆ ಗುಲಾಬಿ ಬಳಸಿ...

ಗುಲಾಬಿ ಹೂವು ನೋಡಲು ಎಷ್ಟು ಚಂದವೋ  ಅಷ್ಟೇ ಸೌಂದರ್ಯಕ್ಕೂ ಬೆಸ್ಟ್. ಗುಲಾಬಿ ಹೂವನ್ನು ಬಳಸಿ ಡೆಡ್‌ಸ್ಕಿನ್, ಡಾರ್ಕ್ ಸರ್ಕಲ್ ಸೇರಿ ಹಲವಾರು ಸಮಸ್ಯೆ ನಿವಾರಿಸಬಹುದು. ಇದರಿಂದ ಇನ್ನೇನಿವೆ ಪ್ರಯೋಜನಗಳು?
 

6 magical beauty benefits of rose
Author
Bangalore, First Published Jun 11, 2019, 10:27 AM IST

ಸುಂದರ ತ್ವಚೆ ಪಡೆಯೋದು ಸುಲಭವಲ್ಲ, ಅದಕ್ಕಾಗಿ ಕ್ರೀಮ್ ಬಳಸುವ ಬದಲು ಗುಲಾಬಿ ಹೂವನ್ನು ಬಳಸಿದರೆ ನೈಸರ್ಗಿಕವಾಗಿಯೇ ಸ್ಕಿನ್ ಸಾಫ್ಟ್ ಆಗುತ್ತದೆ. ಜೊತೆಗೆ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳೆಲ್ಲವೂ ನಿವಾರಣೆಯಾಗುತ್ತವೆ. ರೋಸ್ ಅಂತೂ ಎಲ್ಲರ ಮನೆಯಲ್ಲೂ ಇರುತ್ತದೆ. ಅದನ್ನ ಇಲ್ಲಿ ತಿಳಿಸಿದಂತೆ ಬಳಸಿದರೆ ಗುಲಾಬಿಯಂತೆ ಸಾಫ್ಟ್ ತ್ವಚೆ ಪಡೆಯಬಹುದು. 

ಕಾಂತಿ ಹೆಚ್ಚುತ್ತದೆ

ಗುಲಾಬಿ ಎಸಳು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಇದಕ್ಕಾಗಿ ಕೆಲವು ಹೂವಿನ ಎಸಳನ್ನು ನೀವು ಸ್ನಾನ ಮಾಡುವ ಟಬ್‌ನಲ್ಲಿ ಹಾಕಿ ಕೊಂಚ ಹೊತ್ತು ಈ ನೀರಿನಲ್ಲಿ ಶರೀರವನ್ನು ಮುಳುಗಿಸಿ. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. 

ನಿಮ್ಮ ವ್ಯಕ್ತಿತ್ವಕ್ಕೆ ಹೊಳಪು ನೀಡುವ 8 ಹವ್ಯಾಸಗಳು

ಸ್ಕಿನ್ ಟೋನರ್ 

ಗುಲಾಬಿ ಹೂವಿನ ಎಸಳುಗಳನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ. ಬೆಳಗ್ಗೆ ಆ ನೀರಿನಿಂದ ಮುಖ ಮತ್ತು ಕೈ ತೊಳೆದರೆ ಸ್ಕಿನ್ ಸಾಫ್ಟ್ ಆಗುತ್ತದೆ. ಇದು ನ್ಯಾಚುರಲ್ ಸ್ಕಿನ್ ಟೋನರ್‍‌ನಂಕೆ ಕಾರ್ಯ ನಿರ್ವಹಿಸುತ್ತದೆ. 

ಪಿಂಪಲ್ ಬೈ ಹೇಳುತ್ತೆ....

ಅಬ್ಬಾ ಮುಖದಲ್ಲೊಂದು ಮೊಡವೆ ಇಣುಕಿ ನೋಡಲು ಆರಂಭಿಸಿದರೆ ಹೆಣ್ಣು ಮಕ್ಕಳ ಎದೆ ಝಲ್ಲೆನ್ನುತ್ತದೆ. ಏನೋ ಆಗಬಾರದು ಆಯಿತು ಎಂಬಂತೆ ರಿಯಾಕ್ಟ್ ಮಾಡುತ್ತಾರೆ. ಇದನ್ನು ಹೋಗಲಾಡಿಸಲು ಗುಲಾಬಿ ದಳಗಳನ್ನು ಪೇಸ್ಟ್ ಮಾಡಿ ಅದಕ್ಕೆ ಚಂದನ, ಜೇನು ಸೇರಿಸಿ ಮಿಕ್ಸ್ ಮಾಡಿ. ಮುಖಕ್ಕೆ ಹಚ್ಚಿ. ಹತ್ತು ನಿಮಿಷದ ನಂತರ ಬಿಸಿ ನೀರಿನಲ್ಲಿ ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡುತ್ತಿದ್ದರೆ ಪಿಂಪಲ್ ನಿಮ್ಮ ಮುಖದತ್ತ ಸುಳಿಯೋದೂ ಇಲ್ಲ. 

ಸುಮ್ ಸುಮ್ನೆ ತುರಿಸೋ ತಲೆಗೆ ಇಲ್ಲಿದೆ ಮನೆ ಮದ್ದು....

ಡಾರ್ಕ್ ಸರ್ಕಲ್ ನಿವಾರಣೆ

ಇಂದಿನ ಅವಿಶ್ರಾಂತ ಜೀವನ ಶೈಲಿಯಿಂದ ಸರಿಯಾಗಿ ನಿದ್ರೆ ಇಲ್ಲದೇ ಡಾರ್ಕ್ ಸರ್ಕಲ್ ಸಮಸ್ಯೆ ಕಾಡುತ್ತದೆ. ಅದಕ್ಕಾಗಿ ಪ್ರತಿದಿನ ರಾತ್ರಿ ರೋಸ್ ವಾಟರಿನಲ್ಲಿ ಹತ್ತಿಯನ್ನು ಅದ್ದಿ ಅದನ್ನು ಕಣ್ಣಿನ ಮೇಲಿಡಿ. ಹತ್ತು ನಿಮಿಷದ ಬಳಿಕ ಅದನ್ನು ತೆಗೆಯಿರಿ. ಇದನ್ನು ಪ್ರತಿದಿನ ಮಾಡುವುದರಿಂದ ಡಾರ್ಕ್ ಸರ್ಕಲ್ ಸಮಸ್ಯೆ ಕಡಿಮೆಯಾಗುತ್ತದೆ. 

ಸ್ಕಿನ್ ಮಾಯಿಶ್ಚರೈಸ್ 

ನಿಮ್ಮ ಮಾಯಿಶ್ಚರೈಸ್ ಕ್ರೀಮಿನಲ್ಲಿ ಸ್ವಲ್ಪ ರೋಸ್ ವಾಟರ್ ಬೆರೆಸಿ. ಅದನ್ನು ಹಚ್ಚಿಕೊಂಡರೆ ದಿನ ಪೂರ್ತಿ ತ್ವಚೆ ಮಾಯಿಶ್ಚರೈಸ್ ಆಗಿರುತ್ತದೆ. 

ರೋಜ್ ರೋಸ್ ವಾಟರ್ ಹಚ್ಚಿದ್ರೆ ಹೆಚ್ಚುತ್ತೆ ಸೌಂದರ್ಯ

ಡೆಡ್ ಸ್ಕಿನ್ ನಿವಾರಣೆ

ಒಂದು ದಿನ ಮೊದಲು ರಾತ್ರಿ ಬಾದಾಮಿ ಮತ್ತು ಗುಲಾಬಿ ಎಸಳನ್ನು ಬೇರೆ ಬೇರೆ ಬೌಲಿನಲ್ಲಿ ನೀರು ಹಾಕಿ ನೆನೆಸಿಡಿ. ಮರುದಿನ ಎರಡನ್ನೂ ಬೇರೆ ಬೇರೆಯಾಗಿ ಪೇಸ್ಟ್ ಮಾಡಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಇದರಿಂದ ಸ್ಕ್ರಬ್ ಮಾಡುವುದರಿಂದ ಡೆಡ್ ಸ್ಕಿನ್ ಸಮಸ್ಯೆ ನಿವಾರಣೆಯಾಗುತ್ತದೆ. 

Follow Us:
Download App:
  • android
  • ios