ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ವಾಂತಿ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ನಿವಾರಿಸಲು ಕೆಲವರು ವೈದ್ಯರ ಬಳಿ ಹೋಗುತ್ತಾರೆ. ಇದನ್ನು ಬಗೆಹರಿಸಲು ಮನೆಯಲ್ಲಿಯೇ ಕೆಲವು ಮನೆ ಮದ್ದುಗಳಿವೆ..

ತಲೆ ಸುತ್ತು, ವಾಂತಿ, ಕಾಲು ಊದಿಕೊಳ್ಳುವುದು.....ಹೀಗೆ ಹತ್ತು ಹಲವು ಸಮಸ್ಯೆಗಳು ಗರ್ಭಿಣಿಯನ್ನು ಕಾಡುವುದು ಕಾಮನ್. ವಾಂತಿಯಂತೂ ಸರ್ವೇ ಸಾಮಾನ್ಯ. ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ವಾಂತಿಯಾದರೆ, ಇನ್ನು ಕೆಲವರಿಗೆ ತಿಂಡಿ ತಿಂದ ನಂತರ, ಇನ್ನೂ ಕೆಲವರಿಗೆ ಅಡುಗೆಯ, ಕೆಲವು ಪದಾರ್ಥಗಳ ಪರಿಮಳದಿಂದ ವಾಂತಿ ಬರುತ್ತದೆ. ಈ ಸಮಸ್ಯೆ ಕಂಡು ಬಂದ ಕೂಡಲೇ ಆಸ್ಪತ್ರೆಗೆ ಹೋಗುವ ಬದಲು ಮನೆಯಲ್ಲಿಯೇ ಈ ಸರಳ ವಿಧಾನಗಳನ್ನು ಅನುಸರಿಸಿ ವಾಂತಿ ನಿವಾರಿಸಿ. 

ಏಲಕ್ಕಿ

ಏಲಕ್ಕಿ ಬೀಜವನ್ನು ಬಾಯಲ್ಲಿ ಹಾಕಿ ಚೀಪುತ್ತಿದ್ದರೆ, ಇದರ ರುಚಿಗೆ ವಾಂತಿ ಬರುವುದು ನಿಲ್ಲುತ್ತದೆ. 

ಟ್ರೆಂಡಾಗುತ್ತಿದೆ ಬೇಬಿ ಬಂಪಿಂಗ್ ಫೋಟೋಶೂಟ್

ನಿಂಬೆ ಹಣ್ಣು

ನಿಂಬೆ ಹಣ್ಣಿನ ತುಂಡನ್ನು ಬೆಂಕಿಯಲ್ಲಿ ಸ್ವಲ್ಪ ಸುಟ್ಟು ನಂತರ ಅದನ್ನು ಬಿಸಿಲಿನಲ್ಲಿಟ್ಟು ಒಣಗಿಸಿ ಪುಡಿ ಮಾಡಿ. ವಾಂತಿ ಬರುವ ಸಮಯದಲ್ಲಿ ಇದನ್ನು ನೀರಿಗೆ ಬೆರೆಸಿ ಕುಡಿಯಿರಿ. 

ನೆಲ್ಲಿಕಾಯಿ 

ನೆಲ್ಲಿಕಾಯಿ ಹುಳಿಯಾಗಿರುತ್ತದೆ. ವಾಂತಿ ಬರುತ್ತದೆ ಎಂದು ಅನಿಸಿದಾಗ ನೆಲ್ಲಿಕಾಯಿಯನ್ನು ಬಾಯಿಗೆ ಹಾಕಿ ಅಗಿಯಿರಿ. ಇದು ಗರ್ಭಿಣಿಯರಿಗೆ ವಾಂತಿಯಿಂದ ರಿಲೀಫ್ ನೀಡುತ್ತದೆ. 

ಶುಂಠಿ

ಸಣ್ಣ ತುಂಡು ಶುಂಠಿಯನ್ನು ಬಾಯಲ್ಲಿ ಹಾಕಿ ಚೀಪುತ್ತಿರಿ. 

ಗರ್ಭಿಣಿಯರಲ್ಲಿ ಮಲಬದ್ಧತೆ ಸಮಸ್ಯೆ; ಮನೆಯಲ್ಲೇ ಇದೆ ಮದ್ದು

ನಿಂಬೆ ಪಾನಕ

ನಿಂಬೆ ಪಾನಕ ಕುಡಿಯುವುದರಿಂದ ವಾಂತಿ ಬರದಂತೆ ತಡೆಯಬಹುದು, ಇದರಿಂದ ಆಯಾಸವೂ ಕಡಿಮೆಯಾಗುತ್ತದೆ.

ಪುದೀನಾ

ವಾಂತಿ ಬರುವಂತಾದರೆ ಪುದೀನಾ ಎಲೆಯನ್ನು ಅಗಿಯಿರಿ. ಇಲ್ಲವಾದರೆ ಎರಡು ಮೂರು ಎಲೆಗಳನ್ನು ಜಜ್ಜಿ ಅದರ ವಾಸನೆಯನ್ನು ಗ್ರಹಿಸಿ. ಇದೂ ವಾಂತಿ ನಿವಾರಿಸಲು ಅತ್ಯುತ್ತಮ ಮದ್ದು.