Asianet Suvarna News Asianet Suvarna News

ಸಿಕ್ಸ್ ಪ್ಯಾಕ್ ದೇಹ ನಿಮ್ಮದಾಗಲು ಈ ಆಹಾರಗಳನ್ನ ಡಯಟ್ ನಲ್ಲಿ ಸೇರಿಸಿ...

ಸಿಕ್ಸ್ ಪ್ಯಾಕ್ ದೇಹ ಪಡೆಯಲು ಜಿಮ್ ಗೆ ಹೋದ್ರೆ ಸಾಕಾಗೋದಿಲ್ಲ. ಅದರ ಜೊತೆಗೆ ಕೆಲವೊಂದು ಪೌಷ್ಟಿಕ ಆಹಾರಗಳನ್ನೂ ಸೇವಿಸಬೇಕು. 

6 best diet food for six pack body
Author
Bangalore, First Published May 24, 2019, 11:58 AM IST

ಜಿಮ್‌ಗೆ ಹೋಗಬೇಕು, ಫಿಟ್ ಆದ ಬಾಡಿ ಪಡೆಯಬೇಕು, ಎಲ್ಲರ ದೃಷ್ಟಿ ನನ್ ಮೇಲೆ ಬೀರುವಂತಿರಬೇಕು, ಸಿಕ್ಸ್ ಪ್ಯಾಕ್ ಮೂಲಕ ಕಾಲೇಜಿನಲ್ಲಿ ಹೀರೊ ಆಗಬೇಕು... ಇದೆಲ್ಲಾ ಕನಸು ಪ್ರತಿಯೊಬ್ಬ ಹುಡುಗರಲ್ಲೂ ಇರುತ್ತದೆ. ಆದರೆ ಇದಕ್ಕೆಲ್ಲಾ ಜಿಮ್‌ಗೆ ಹೋದ್ರೆ ಸಾಕಾಗಲ್ಲ. ಅದರ ಜೊತೆ ಜೊತೆಗೆ ಸೇವಿಸುವ ಆಹಾರದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಯಾಕಂದ್ರೆ ಪೌಷ್ಟಿಕ ಆಹಾರದ ಜೊತೆಗೆ ಜಿಮ್ ಸೇರಿದಾಗ ಮಾತ್ರ ನಿಮ್ಮ ಕನಸು ಈಡೇರುವುದು. ಹಾಗಾದ್ರೆ ಯಾವೆಲ್ಲಾ ಆಹಾರಗಳನ್ನು ಸೇವಿಸಬೇಕು ನೋಡ್ಕೊಳ್ಳಿ... 

ಫಿಟ್ನೆಸ್ ಹಿಂದಿನ ರಹಸ್ಯ ಬಹಿರಂಗ ಪಡಿಸಿದ ಧೋನಿ!

ಕಡ್ಲೆ: ಇದರಲ್ಲಿರುವ ಪ್ರೊಟೀನ್‌, ಫಾಸ್ಪೋರಸ್‌, ಕ್ಯಾಲ್ಶಿಯಂ ದೇಹ ಸದೃಢವಾಗಿ ಟೋನ್ಡ್ ಮಸಲ್ಸ್ ಹೊಂದಲು ಸಹಾಯ ಮಾಡುತ್ತದೆ. 

ಓಟ್ಸ್‌: ಓಟ್ಸ್‌ನಲ್ಲಿ ಪ್ರೊಟೀನ್‌, ಐರನ್‌, ಗುಡ್‌ ಕಾರ್ಬ್‌ಗಳಿವೆ. ಇವು ಸಿಕ್ಸ್‌ ಪ್ಯಾಕ್‌ ಮಾಡಲು ಸಹಾಯ ಮಾಡುತ್ತವೆ. 

ಮೊಟ್ಟೆ: ಇದರಲ್ಲಿರುವ ಅಮಿನೋ ಆಸಿಡ್‌, ಪ್ರೊಟೀನ್‌ ಮತ್ತು ಕೋಲಿನ್‌ ಅಂಶದಿಂದ ದೇಹ ಸ್ಟ್ರಾಂಗ್‌ ಆಗುತ್ತದೆ.  

40 ರಲ್ಲೂ 18 ರಂತೆ ಕಾಣುವ ಬಳಕುವ ಬಳ್ಳಿ ಮಲೈಕಾ ಫಿಟ್ ನೆಸ್ ಗುಟ್ಟು!

ಹಾಲು: ಸಿಕ್ಸ್ ಪ್ಯಾಕ್  ಪಡೆಯಲು ಮಿಸ್ ಮಾಡದೇ ಹಾಲು ಕುಡಿಯಿರಿ. ಇದರಲ್ಲಿರುವ ಫಾಸ್ಪೋರಸ್‌, ಐರನ್‌, ಪ್ರೊಟೀನ್‌ ಅಂಶ ಫಿಟ್ ಆಗಿರಲು ಸಹಾಯ ಮಾಡುತ್ತೆ. 

ನೆಲಗಡಲೆ:  ಹಾಲು ಮತ್ತು ಮೊಸರಿನಲ್ಲಿರೋದಕ್ಕಿಂತ  ಹೆಚ್ಚಿನ  ಪ್ರೊಟೀನ್‌ ಇದರಲ್ಲಿದೆ. ಅಲ್ಲದೆ ಕ್ಯಾಲ್ಶಿಯಂ ಮತ್ತು ಮಿನರಲ್ಸ್‌ ಕೂಡ ಇದೆ.  

ಸೋಯಾಬೀನ್‌: ಇದರಲ್ಲಿ ಉತ್ತಮ ಕಾರ್ಬ್‌, ಕ್ಯಾಲ್ಶಿಯಂ, ಹೆಚ್ಚಿನ ಪ್ರಮಾಣದ ಪ್ರೊಟೀನ್ ಅಂಶಗಳಿವೆ. ಇದರಿಂದ ಮಸಲ್ಸ್‌ ಸ್ಟ್ರಾಂಗ್‌ ಆಗುತ್ತದೆ.

Follow Us:
Download App:
  • android
  • ios