ಜಿಮ್‌, ವ್ಯಾಯಾಮ, ಏರೋಬಿಕ್ಸ್‌, ಯೋಗಗಳಿಂದಲೇ ಫಿಟ್ನೆಸ್‌ ಕಾಯ್ದುಕೊಳ್ಳುವ ಈ ತಾರೆ ಇತ್ತೀಚೆಗೆ ಹೊಸ ಯೋಗ ಮಂತ್ರವನ್ನು ಪರಿಚಯಿಸಿದ್ದಾರೆ. ಸಾಮಾಜಿಕ ಜಾಲತಾಣ ಇನ್ಸ್ಟಾದಲ್ಲಿಈ ಮಂತ್ರವನ್ನು ಅಭಿಮಾನಿಗಳಿಗೆ ಹೇಳಿಕೊಟ್ಟಿದ್ದಾರೆ. ಅದು ಎಡಗಾಲನ್ನು ನೇರವಾಗಿ ಚಾಚಿ, ಬಲಗಾಲನ್ನು ಬಗೈಮೇಲೆ ಸುತ್ತರಿಸಿ, ಎರಡು ಇಟ್ಟಿಗೆಗಳ ಮೇಲೆ ಬ್ಯಾಲೆನ್ಸ್‌ ಮಾಡುತ್ತಾ ಯೋಗ ಮಾಡುತ್ತಿರುವುದು. ಇದಕ್ಕೆ ಅವರು ‘ದಿವಾ ಯೋಗ’ ಎಂದು ಹೆಸರಿಟ್ಟಿದ್ದಾರೆ.

ಮಲೈಕಾಳ ಸೌಂದರ್ಯದ ಗುಟ್ಟು ರಟ್ಟು

ಯೋಗ ಎಂಬುದು ನಿಮ್ಮ ಸ್ಥಿರತೆಯನ್ನು ಕಂಡುಕೊಳ್ಳಲು ಇರುವ ನೈಜ ಸಾಧನ ಎಂದು ಎರಿಕ್‌ ಸ್ಚಿಫ್‌ಮನ್‌ ಅವರ ಮಾತನ್ನು ದಿವಾ ಯೋಗ ಮಂತ್ರದೊಂದಿಗೆ ಹಂಚಿಕೊಂಡಿದ್ದಾರೆ. ಈ ಮಂತ್ರ ಅವರ ಫಿಟ್ನೆಸ್‌ ಹಾಗೂ ಸಮತೊಲನ ಕಾಯ್ದುಕೊಳ್ಳಲು ಅನುಕೂಲವಾಗಿದೆಯಂತೆ. ಒಂದು ದಿನವೂ ಬಿಡದೆ ವರ್ಕೌಟ್‌ನಲ್ಲಿ ತೊಡಗುವ ಮಲೈಕಾ 40ರ ನಂತರವೂ ಇಷ್ಟುಹೆಲ್ದಿ ಹಾಗೂ ಫಿಟ್‌ ಆ್ಯಂಡ್‌ ಫೈನ್‌ ಆಗಿ ಇರಲು ಇದೇ ಕಾರಣವಂತೆ. ಯಾರೆಲ್ಲಾ 40 ಪ್ಲಸ್‌ ಇದ್ದೀರೋ ಹಾಗೂ ಮಲೈಕಾಳಂತೆ ಆಗಲು ಪ್ರಯತ್ನಿಸುತ್ತಿರುವಿರೊ ಅವರೆಲ್ಲ ಈ ಮಂತ್ರ ಪಠಿಸಿ ಹೆಲ್ದಿಯಾಗಿರಬಹುದು ಎಂದು ಮಲೈಕಾ ಸಂದೇಶ ನೀಡಿದ್ದಾರೆ. ಒಮ್ಮೆ ಟ್ರೈ ಮಾಡಿ ನೋಡಿ.

ಬಾಲಿವುಡ್ ‘ಮುನ್ನಿ’ ಮಲೈಕಾ ಅರೋರಾ ಹಾಟ್ ಪೋಟೋಸ್!