ಫ್ಲರ್ಟ್ ಮಾಡುವಾಗ ಲೈಂಗಿಕ ಆಸಕ್ತಿ ಅಭಿವ್ಯಕ್ತಿಗಿರಲಿ ಬ್ರೇಕ್

ನಿಮಗೆ ಒಬ್ಬರಲ್ಲಿ ಆಸಕ್ತಿ ಇದೆ ಎಂದು ತೋರಿಸಲು ಫ್ಲರ್ಟಿಂಗ್ ಅತ್ಯುತ್ತಮ ದಾರಿ. ಆದರೆ, ಹದ ತಪ್ಪಿದರೆ ಅಥವಾ ಮಿತಿ ಮೀರಿದರೆ ಫ್ಲರ್ಟಿಂಗ್ ಆಭಾಸವಾದೀತು. 

5 flirting mistakes to avoid in relationship

ಡೇಟಿಂಗ್ ಗೇಮನ್ನು ಹೆಚ್ಚು ಆಕರ್ಷಕಗೊಳಿಸುವ ತಾಕತ್ತು ಫ್ಲರ್ಟಿಂಗ್‌ನದು. ಮಿತವಾದ ಆರೋಗ್ಯಕರ ಫ್ಲರ್ಟಿಂಗ್‌ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಆದರೆ, ಸ್ವಲ್ಪ ಎಡವಟ್ಟಾದರೂ ಅದಕ್ಕೆ ನೀವು ಬೆಲೆ ತೆರಬೇಕಾಗುತ್ತದೆ. ಅದರಲ್ಲೂ ಡೇಟಿಂಗ್‌ನ ಆರಂಭಿಕ ಹಂತದಲ್ಲಿ ಫ್ಲರ್ಟಿಂಗ್‌ನಲ್ಲಿ ಈ ತಪ್ಪುಗಳನ್ನು ಮಾಡದಂತೆ ಎಚ್ಚರ ವಹಿಸಿ. ಇಲ್ಲದಿದ್ದಲ್ಲಿ ರೊಮ್ಯಾನ್ಸ್ ಹೋಗಿ ರಸಭಂಗವಾದೀತು. 

ಅತಿಯಾಗಿ ನಗುವುದು
ಎದುರಿನ ವ್ಯಕ್ತಿ ಮಾತನಾಡಿದಾಗ, ಜೋಕ್ ಮಾಡಿದಾಗ ನಕ್ಕರೆ ಅವರಿಗೆ ಖುಷಿಯಾಗುತ್ತದೆಂದು ನಿಮಗನಿಸಬಹುದು. ಆದರೆ, ಜೋಕನ್ನು ಎಂಜಾಯ್ ಮಾಡಿಕೊಂಡು ನಗುವುದಕ್ಕೂ, ನಗು ಬರದಿದ್ದರೂ ಬರಿಸಿಕೊಂಡು ನಗುವುದಕ್ಕೂ ವ್ಯತ್ಯಾಸವಿದೆ. ಕಾರಣವಿಲ್ಲದೆ ಅತಿಯಾಗಿ ನಗುವುದು, ಹೊಟ್ಟೆ ಕುಲುಕಿಸಿಕೊಂಡು ನಕ್ಕು ನೀವು ಫನ್ ಎಂಜಾಯ್ ಮಾಡುವ ವ್ಯಕ್ತಿ ಎಂದು ತೋರಿಸಿಕೊಳ್ಳಲು ಹೋಗುವುದರಿಂದ, ಹೊಸತಾಗಿ ನಿಮ್ಮ ಪರಿಚಯವಾದವರಿಗೆ, ಇವರಿಗೇನಾದರೂ ತಲೆ ಕೆಟ್ಟಿದೆಯೇ ಅಥವಾ ದಡ್ಡನಿರಬೇಕು ಎನಿಸಬಹುದು. 

ಮೊದಲ ಭೇಟಿ: ಅಕೆ ಅವನಲ್ಲಿ ಗಮನಿಸುವುದೇನು?

ಬೇರೆ ಹುಡುಗರ/ಹುಡುಗಿಯರ ಬಗ್ಗೆ ಮಾತನಾಡುವುದು
ಬೇರೆ ಹುಡುಗರನ್ನು ಹೊಗಳುವುದು, ಎಷ್ಟು ಜನ ನಿಮ್ಮ ಹಿಂದೆ ಬಿದ್ದಿದ್ದಾರೆಂದು ಹೇಳಿಕೊಳ್ಳುವುದು, ಅವರ ಬಗ್ಗೆ ಮಾತನಾಡುವುದರಿಂದ ನಿಮ್ಮ ಡೇಟ್‌ಗೆ ಹೊಟ್ಟೆಕಿಚ್ಚು ಹುಟ್ಟಿ, ನಿಮ್ಮ ಮೇಲೆ ಅವರ ಆಸಕ್ತಿ ಹೆಚ್ಚುತ್ತದೆ ಎಂದು ನೀವು ಭಾವಿಸಿರಬಹುದು. ಆದರೆ, ಈ ಗುಣ ನಿಮಗೆ ನಿಮ್ಮ ಡೇಟ್ ಬಗ್ಗೆ ಆಸಕ್ತಿ ಇಲ್ಲ ಎಂದೋ ಅಥವಾ ಬೇರೆ ಹುಡುಗರ ಬಗ್ಗೆ ಹೆಚ್ಚು ಆಸಕ್ತಿ ಇದೆ ಎಂದೋ ತೋರಬಹುದು. ಇದರಿಂದ ಅವರು ನಿಮ್ಮಿಂದ ದೂರವಾಗುವ ಸಾಧ್ಯತೆಯೇ ಹೆಚ್ಚು. 

ಲಿಂಗ ಸಮಾನತೆ ವಾದ
ಹೌದು, ಮಹಿಳಾ ಸಬಲೀಕರಣ ಹಾಗೂ ಸಮಾನತೆ ಬಗ್ಗೆ ನಿಮಗೆ ಒಲವಿದೆ. ಆದರೆ, ಇದನ್ನೇ ಡೇಟ್ ಜೊತೆ ವಾದಿಸತೊಡಗಿದಿರಾದರೆ, ನೀವು ಗಂಡಸರ ದ್ವೇಷಿ ಎನಿಸಬಹುದು. ಅಥವಾ ಭವಿಷ್ಯದಲ್ಲಿ ಈಕೆ ನನ್ನ ಮೇಲೆ ದೌರ್ಜನ್ಯ ನಡೆಸಿಯಾಳು ಎಂದು ಆತ ಭಯ ಬೀಳಬಹುದು. ಈ ನಿಮ್ಮ ಆದರ್ಶಗಳು, ಚಿಂತನೆಗಳ ವಿಚಾರಗೋಷ್ಠಿಗೆ ಡೇಟಿಂಗ್ ವೇದಿಕೆಯಲ್ಲ. ಅವು ತಾವಾಗಿಯೇ ಕೃತಿಯಲ್ಲಿ ವ್ಯಕ್ತವಾಗಬೇಕು.

ಕೂಲ್ ಎನಿಸಿಕೊಳ್ಳಲು ಮುಖವಾಡ ಧರಿಸುವುದು
ನೀವು ಹೇಗಿದ್ದೀರೋ ಹಾಗೇ ಇರಿ. ನಿಮ್ಮ ಡೇಟ್ ಬಳಿ ಕೂಲ್ ಎನಿಸಿಕೊಳ್ಳಬೇಕೆಂದು ನಿಮ್ಮ ಬಗ್ಗೆ ಕಾಗಕ್ಕ ಗುಬ್ಬಕ್ಕ ಕತೆ  ಕಟ್ಟಿ ಹೇಳಿಕೊಂಡು, ನಡೆನುಡಿ ಬದಲಿಸಿಕೊಳ್ಳಬೇಡಿ. ಏಕೆಂದರೆ ನಟನೆ ಹೆಚ್ಚು ದಿನ ಬಾರದು. ಮುಖವಾಡ ಕಳಚಿದರೆ ಅವರು ನಿಮ್ಮ ಬಗ್ಗೆ ನಿರಾಶರಾಗಬಹುದು. ಇಷ್ಟಕ್ಕೂ ಅವರು ನಿಮ್ಮ ಸಾಮಾನ್ಯ ವ್ಯಕ್ತಿತ್ವವನ್ನೇ ಇಷ್ಟ ಪಡುತ್ತಾರೋ, ನೀವು ತೋರಿಕೆಗೆ ಇರಿಸಿಕೊಂಡ ವ್ಯಕ್ತಿತ್ವ ಇಷ್ಟ ಪಡುತ್ತಾರೋ ಹೇಳುವುದಾದರೂ ಹೇಗೆ? ಯಾವಾಗಲೂ ನೀವೇನೋ ಅದೇ ಆಗಿರುವುದು ಕ್ಷೇಮ. 

ಬಾಲಿವುಡ್ ನಟನ ಪುತ್ರಿಯೊಂದಿಗೆ ರಾಹುಲ್ ಡೇಟಿಂಗ್

ಅತಿಯಾಗಿ ಲೈಂಗಿಕ ಆಸಕ್ತಿ ವ್ಯಕ್ತಪಡಿಸುವುದು
ಎದುರಿನ ವ್ಯಕ್ತಿಯೊಂದಿಗೆ ನೀವು ಕನೆಕ್ಟ್ ಆಗಬಲ್ಲಿರಾ, ಅವರೊಂದಿಗೆ ಜೀವನ ಪೂರ್ತಿ ಹಂಚಿಕೊಳ್ಳಬಹುದೆನಿಸುತ್ತಾ ಎಂದು ನೋಡಲು ಡೇಟ್‌ಗೆ ಹೋಗಿದ್ದೀರೇ ಹೊರತು ಅವರನ್ನು ಆಕರ್ಷಿಸಲು ಅಲ್ಲ. ಅವರ ಕಣ್ಕುಕ್ಕುವ ಬಟ್ಟೆ ಧರಿಸುವುದು, ಬೋಲ್ಡ್ ಎಂದು ತೋರಿಸಿಕೊಳ್ಳಲು ಲೈಂಗಿಕ ವಿಷಯಗಳ ಬಗ್ಗೆ ಅತಿಯಾಗಿ ಮಾತನಾಡುವುದು, ಅಥವಾ ನಾನ್‌ವೆಜ್ ಜೋಕ್ ಮಾಡುವುದಕ್ಕಿದು ಪ್ರಾಶಸ್ತ್ಯ ಸಂದರ್ಭವಲ್ಲ. 

ಡೇಟಿಂಗ್ ಹೋದಾಗ ಮುಕ್ತವಾಗಿ ಮಾತನಾಡಿ..

ಬಹಳ ಬೇಗ ಕ್ಲೋಸ್ ಆಗುವುದು
ನಿಮ್ಮ ಹಾಗೂ ಎದುರಿನವರ ನಡುವೆ ಏನೇ ಆದರೂ ಅದು ತಾನಾಗಿಯೇ ಸಂಭವಿಸಬೇಕು. ತನ್ನದೇ ಗತಿಯಲ್ಲಿ ಆಗಬೇಕು. ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಮಯ ಕೊಟ್ಟುಕೊಳ್ಳಬೇಕು. ಅದು ಬಿಟ್ಟು ಅವರು ನಿಮ್ಮನ್ನು ರಿಜೆಕ್ಟ್ ಮಾಡಿದರೆ ಎಂಬ ಭಯದಲ್ಲಿ ಅತಿ ಕ್ಲೋಸಾಗಿ ವರ್ತಿಸುವುದು ಮೆಚ್ಯುರಿಟಿ ಕೊರತೆಯನ್ನು ವ್ಯಕ್ತಪಡಿಸುತ್ತದೆ. ಇನ್ನೊಬ್ಬರ ಪರ್ಸನಲ್ ಸ್ಪೇಸ್‌ಗೆ ಅವರು ಅನುಮತಿ ನೀಡಿ ಒಳಬಿಟ್ಟುಕೊಳ್ಳದೆ, ಬೇಕಾಬಿಟ್ಟಿ ನುಗ್ಗುವುದು ಸಭ್ಯತೆಯೂ ಅಲ್ಲ. 

5 flirting mistakes to avoid in relationship
 

Latest Videos
Follow Us:
Download App:
  • android
  • ios