Asianet Suvarna News Asianet Suvarna News

ಡೇಟಿಂಗ್ ಹೋದಾಗಲೂ ಮಾತನಾಡದಿದ್ದರೆ ಹೇಗೆ?

ಅಂತರ್ಮುಖಿಗಳಿಗೆ ಡೇಟಿಂಗ್ ಲೋಕದಲ್ಲಿ ವಿಹರಿಸುವುದು ಸ್ವಲ್ಪ ಕಷ್ಟದ ಕೆಲಸವೇ. ಅವರ ಫೀಲಿಂಗ್ಸ್ ಹೇಳಿಕೊಳ್ಳಲು ಒದ್ದಾಡುವುದರಿಂದ ಸಂಗಾತಿ ಬಳಿ ಸರಿಯಾದ ಇಂಪ್ರೆಶನ್ ಹುಟ್ಟುಹಾಕುವಲ್ಲಿ ಸೋಲುತ್ತಾರೆ. ನೀವು ಅಂತರ್ಮುಖಿಗಳಾಗಿದ್ದರೆ ಡೇಟ್‌ಗೆ ಹೋಗುವ ಮುನ್ನ ಈ ಸಂಗತಿಗಳನ್ನು ಗಮನದಲ್ಲಿಡಿ.
lifestyle relationship dating tips for introverts
Author
Bengaluru, First Published Jul 10, 2019, 4:19 PM IST
ಇಂಟ್ರೋವರ್ಟ್‌ಗಳ ಮನಸ್ಸಿನಲ್ಲಿ ಏನಾಗುತ್ತದೆ ಎಂದು ಯಾರಿಗೂ ತಿಳಿಯುವುದಿಲ್ಲ. ಅವರು ಏನನ್ನಾದರೂ ಹೇಳಿಕೊಂಡರೆ ತಾನೇ ಹೇಗೆ ಯೋಚಿಸುತ್ತಾರೆ ಎಂಬ ಅಲ್ಪ ಚಿತ್ರಣವಾದರೂ ಸಿಗಲು ಸಾಧ್ಯ? ಅಂಥದರಲ್ಲಿ ಡೇಟಿಂಗ್ ಹೋಗಬೇಕೆಂದರೆ ಅವರ ಸಂಕಷ್ಟ ಅವರಿಗಷ್ಟೇ ಗೊತ್ತು. ಪ್ರೀತಿಯನ್ನು ಹೇಳಿಕೊಳ್ಳಲು ಬರುವುದಿಲ್ಲ, ಫೀಲಿಂಗ್ಸ್ ಎಕ್ಸ್‌ಪ್ರೆಸ್ ಮಾಡಲಾಗುವುದಿಲ್ಲ, ತಾವಾಗೇ ಮಾತು ಆರಂಭಿಸಲೂ ಹಿಂಜರಿಕೆ... ಅಂಥದರಲ್ಲಿ ಹೊಸಬರನ್ನು ಭೇಟಿಯಾಗಿ ಮಾತನಾಡಬೇಕೆಂದರೆ ಮೈ ನಡುಕ ಬರಬಹುದು. ಹಾಗಾದಾಗ, ಮೊದಲ ಬಾರಿ ಇಂಥ ವ್ಯಕ್ತಿಯನ್ನು ಭೇಟಿಯಾದ ವ್ಯಕ್ತಿಯ ಮನಸ್ಸಿನಲ್ಲಿ ಒಳ್ಳೆಯ ಇಂಪ್ರೆಶನ್ ಹೇಗಾದರೂ ಹುಟ್ಟೀತು? ಆದರೆ ಅಂತರ್ಮುಖಿಗಳು ಕೂಡಾ ಆಸಕ್ತಿಕರ ವ್ಯಕ್ತಿತ್ವವೇ. ಅವರ ಅಂತರಂಗ ಅರಿಯುವ ಪ್ರಯತ್ನ ಮಾಡಿದವರಿಗೆ ಅಲ್ಲೊಂದು ಪ್ರೀತಿಯ ದೊಡ್ಡ ಕೋಟೆ ಕೊತ್ತಲವೇ ಕಾಣಬಹುದು. ನೀವು ಕೂಡಾ ನಾಚಿಕೆ ಹಾಗೂ ರಿಸರ್ವ್ಡ್ ಸ್ವಭಾವದವರಾಗಿದ್ದರೆ ಡೇಟ್‌‌ಗೆ ಹೋಗುವ ಮೊದಲು ಈ ವಿಷಯಗಳನ್ನು ಗಮನಿಸಿ.

ಜತೆಯಾಗಿ ತಿರುಗುವವರ ಲೈಂಗಿಕ ಬದುಕೂ ಬಿಂದಾಸ್

- ಸಂಭಾಷಣೆಯನ್ನು ಅಭ್ಯಾಸ ಮಾಡಿ
ಡೇಟ್‌ಗೆ ಹೋದಾಗ ಏನು ಮಾತನಾಡುವುದು, ಮಾತನಾಡದೆ ಆಭಾಸವಾದರೆ ಎಂದೆಲ್ಲ ಯೋಚಿಸಿಯೇ ಹೆದರಿದ್ದೀರಾದರೆ, ಹಿಂದಿನ ದಿನ ಮನೆಯಲ್ಲಿ ಸ್ವಲ್ಪ ಹೋಂವರ್ಕ್ ಮಾಡಿ. ನೀವು ಭೇಟಿಯಾಗುವ ವ್ಯಕ್ತಿಯನ್ನು ಸೋಷ್ಯಲ್ ಮೀಡಿಯಾಗಳಲ್ಲಿ ಹಾಗೂ ಬಯೋಡಾಟಾದಲ್ಲಿ ನೋಡಿ ಅವರ ಆಸಕ್ತಿಗಳೇನೆಂದು ಅರಿತುಕೊಳ್ಳಿ. ಇದರಿಂದ ಭೇಟಿಯಾದಾಗ ಅವರ ಆಸಕ್ತಿಯ ಕುರಿತು ಮಾತನಾಡಬಹುದು. ಅಲ್ಲದೆ, ಏನು ಪ್ರಶ್ನಿಸಬಹುದು, ಹೇಗೆ ಪ್ರತಿಕ್ರಿಯಿಸಬೇಕು ಎಂದೆಲ್ಲ ಮೊದಲೇ ಪ್ರಾಕ್ಟೀಸ್ ಮಾಡಿಕೊಳ್ಳಬಹುದು.

- ಪರಿಚಿತ ಸ್ಥಳದಲ್ಲಿ ಭೇಟಿಯಾಗಿ
ಹೊಸ ಜಾಗಗಳಲ್ಲಿ ಭೇಟಿಯಾಗುವುದೆಂದರೆ ಟೆನ್ಷನ್ ಆಗಬಹುದು. ಆದ್ದರಿಂದ ಒಂದಷ್ಟು ಬಾರಿ ಹೋಗಿ ಪರಿಚಯವಿರುವ ಸ್ಥಳದಲ್ಲೇ ಭೇಟಿ ನಿಗದಿಗೊಳಿಸಿ. ದೇವಸ್ಥಾನದ ಹೊರಗೆ ಎಲ್ಲಾದರೂ ಭೇಟಿಯಾದರೆ ಮತ್ತೊಂದು ಲಾಭ ಕೂಡವಿದೆ. ನಿಮಗೆ ಮಾತನಾಡಲು ತಿಳಿಯಲಿಲ್ಲವೆಂದಾಗ ದೇವಸ್ಥಾನಕ್ಕೆ ಹೋಗಿ ಬರೋಣವೇ ಎಂದು ಇಬ್ಬರೂ ಒಳಗೆ ನಮಸ್ಕಾರ ಮಾಡಿ ಬರಬಹುದು. ಇದು ಮುಂದಿನ ಮಾತು ಹುಡುಕಲೂ ಸಮಯ ನೀಡುತ್ತದೆ. ಇಲ್ಲದಿದ್ದರೂ ಒಂದಿಷ್ಟು ಸಮಯ ಜೊತೆಯಲ್ಲೇ ಪಾಸಾಗುತ್ತದೆ. 
lifestyle relationship dating tips for introverts

- ಚಿಕ್ಕದಾದ ಚೊಕ್ಕ ಭೇಟಿಯಾಗಲಿ
ಇಡೀ ದಿನ ಭೇಟಿಯಾಗಿ ಏನು ಮಾತನಾಡಬೇಕು, ಏನು ಮಾಡಬೇಕು ಎಂದೆಲ್ಲ ತಿಳಿಯದೆ ಮುಜುಗರ ಅನುಭವಿಸುವ ಬದಲು ಲಂಚ್ ಅಥವಾ ಡಿನ್ನರ್‌ಗೆ ಭೇಟಿಯಾಗಿ. ಕಡಿಮೆ ಸಮಯವಿದ್ದಷ್ಟೂ ಆ ಭೇಟಿಯನ್ನು ಆಸಕ್ತಿಕರವಾಗಿ ಉಳಿಸಿಕೊಳ್ಳುವುದು ಸುಲಭ. ಜೊತೆಗೆ, ನೀವು ಎಂಥವರ ಕಂಪನಿಯಲ್ಲಿ ಹೆಚ್ಚು ಸಂತೋಷವಾಗಿ, ಓಪನ್ ಆಗಿ ಇರಬಲ್ಲಿರಿ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮಿಷ್ಟದ ಆಸಕ್ತಿ ಹೊಂದಿರುವ ಸಂಗಾತಿಗಾಗಿಯೇ ಹುಡುಕಾಡಿ. 

- ನಿಮ್ಮತನ ಬಿಟ್ಟುಕೊಡಬೇಡಿ
ಯಾರೂ ಪರ್ಫೆಕ್ಟ್ ಅಲ್ಲ ಎಂಬುದನ್ನು ನೆನಪಿಡಿ. ನೀವೇನೋ ಅದು ಬಿಟ್ಟು ಬೇರೆ ರೀತಿ ಬಿಂಬಿಸಿಕೊಳ್ಳಬೇಡಿ. ಸಾಮಾನ್ಯವಾಗಿ ಜೀನ್ಸ್ ಟೀಶರ್ಟ್ ಧರಿಸುವವರಾದರೆ ಡೇಟಿಂಗ್‌ಗಾಗಿ ಚೂಡಿದಾರ್ ಧರಿಸುವ ಅಗತ್ಯವಿಲ್ಲ. ನಿಮ್ಮ ಆಸಕ್ತಿಗಳ ವಿಷಯದಲ್ಲೂ ಅಷ್ಟೇ. ಇನ್ನೊಬ್ಬರ ಇಷ್ಟ ಕಷ್ಟಗಳ ಬಗ್ಗೆ ಕುತೂಹಲ ತೋರಿಸಬಹುದು. ಹಾಗಂತ ನಿಮ್ಮ ಇಷ್ಟಕಷ್ಟಗಳನ್ನು ಮುಚ್ಚಿಡಬೇಕಿಲ್ಲ.
lifestyle relationship dating tips for introverts

- ಆತ್ಮಾವಲೋಕನ
ಡೆೇಟ್‌‌‌ಗೆ ಹೋದಾಗ ನಿಮ್ಮ ವರ್ತನೆ ಹೇಗಿತ್ತೆಂಬುದರ ಕುರಿತು ಆತ್ಮಾವಲೋಕನ ಮಾಡಿ. ಎಲ್ಲಿ ತಪ್ಪಿದಿರಿ, ಯಾವುದು ಸರಿಯಾಯ್ತು, ನಿಮ್ಮನ್ನು ನೀವು ಇನ್ನೂ ಉತ್ತಮಗೊಳಿಸಿಕೊಳ್ಳುವುದು ಹೇಗೆ ಎಂಬುದನ್ನೆಲ್ಲ ಯೋಚಿಸಿ. ಬಹುಷಃ ನಿಮ್ಮ ಯೋಚನೆಗಳನ್ನು ಇನ್ನೂ ಚೆನ್ನಾಗಿ ಎಕ್ಸ್‌ಪ್ರೆಸ್ ಮಾಡಬಹುದಿತ್ತು, ಡೇಟ್ ಸಂದರ್ಭದಲ್ಲಿ ಸಿಕ್ಕಾಪಟ್ಟೆ ಕಾನ್ಶಿಯಸ್ ಆಗಿದ್ದಿರಿ, ಇನ್ನೂ ಉತ್ತಮ ಪ್ರಶ್ನೆಗಳನ್ನು ಕೇಳಬಹುದಿತ್ತು ಎಂದೆಲ್ಲ ಅನಿಸಬಹುದು. ಮುಂದಿನ ಬಾರಿ ಡೇಟ್‌ಗೆ ಹೋದಾಗ ಹಿಂದೆ ಮಾಡಿದ ತಪ್ಪುಗಳನ್ನು ಮಾಡಬೇಡಿ. 
Follow Us:
Download App:
  • android
  • ios