ಆಫೀಸ್‌ನಲ್ಲಿ ಕೆಲಸದ ಒತ್ತಡ, ಅಸ್ತವ್ಯಸ್ತವಾಗಿರುವ  ಜೀವನ ಎಲ್ಲದರ ನಡುವೆ ಜನರು ಯಾವಾಗಲೂ ಟೆನ್ಶನ್‌ನಲ್ಲಿಯೇ ಕಾಲ ಕಳೆಯುತ್ತಾರೆ. ಇದರಿಂದ ಜನರು ಬೇಗ ಹೈಪರ್ ಟೆನ್ಶನ್‌ಗೆ ಒಳಗಾಗುತ್ತಾರೆ. ಈ ಸಮಸ್ಯೆ ಮನುಷ್ಯನಿಗೆ ಸಾವನ್ನು ತರಬಹುದು. ಹೈಪರ್ ಟೆನ್ಶನ್ ಸಮಸ್ಯೆ ನಿವಾರಿಸಲು ಕೆಲವು ಫೆಂಗ್ ಶುಯಿ ಟಿಪ್ಸ್ ಪಾಲಿಸಿದರೆ ಆರೋಗ್ಯಯುತ ಜೀವನ ನಿಮ್ಮದಾಗುತ್ತದೆ. 

ಬಿದಿರಿನ ಗಿಡ: ಫೆಂಗ್ ಶುಯಿಯಲ್ಲಿ ಬಿದಿರಿಗೆ ತುಂಬಾ ಮಹತ್ವ ಇದೆ. ಆಫೀಸ್ ಅಥವಾ ಮನೆಯಲ್ಲಿ ಟೇಬಲ್ ಮೇಲೆ ಬಿದಿರಿನ ಗಿಡ ನೆಟ್ಟರೆ ಇದರಿಂದ ಮಾನಸಿಕ ಒತ್ತಡ ನಿವಾರಿಸುತ್ತದೆ. ಮನಸ್ಸಿಗೆ ಶಾಂತಿ ಸಿಗುತ್ತದೆ. ಜೊತೆಗೆ ಆತ್ಮವಿಶ್ವಾಸ ಹೆಚ್ಚುತ್ತದೆ. 

ಮನೆ ಮಂದಿ ಸಂತೋಷವಾಗಿರಲು ಇಲ್ಲಿವೆ ವಾಸ್ತು ಟಿಪ್ಸ್!

ಎರಿಕಾ ಪಾಮ್ ಟ್ರೀ: ಈ ಗಿಡದ ವಿಶೇಷತೆ ಎಂದರೆ ಇದು ಸುತ್ತಲಿನ ವಾತಾವರಣವನ್ನು ಶುದ್ಧ ಮಾಡುತ್ತದೆ. ಶುದ್ಧ ಗಾಳಿಯನ್ನು ನೀಡುತ್ತದೆ. ದೇಹಕ್ಕೆ ಶುದ್ಧ ಗಾಳಿ ಸಿಕ್ಕಿದರೆ ಮನಸ್ಸು ಶಾಂತವಾಗುತ್ತದೆ. ಜೊತೆಗೆ ಈ ಗಿಡದಿಂದ ಮನೆಯಲ್ಲಿ ಸಕಾರಾತ್ಮಕತೆ ನೆಲೆಸುತ್ತದೆ. 

ಪೀಸ್ ಲಿಲ್ಲಿ: ಆಫೀಸ್ ಅಥವಾ ಮನೆಯಲ್ಲಿ ಕೆಲಸದ ಒತ್ತಡದಿಂದ ಹೆಚ್ಚು ಕುಗ್ಗಿ ಹೋಗಿದ್ದರೆ, ಕೆಲಸದ ನಡುವೆ ಬ್ರೇಕ್ ತೆಗೆದುಕೊಂಡು ಸ್ವಲ್ಪ ಹೊತ್ತು ಈ ಗಿಡವನ್ನು ನೋಡಿ. ಇದರಿಂದ ಒತ್ತಡ ತಗ್ಗುತ್ತದೆ. ಮನಸು ನಿರಾಳವಾಗುತ್ತದೆ. ಜೊತೆಗೆ ಶಾಂತಿಯೂ ಸಿಗುತ್ತದೆ. ಈ ಗಿಡ ಕಡಿಮೆ ಬೆಳಕಿನಲ್ಲೂ ಚೆನ್ನಾಗಿ ಬೆಳೆಯುತ್ತದೆ. 

ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಮಲಗೋ ದಿಕ್ಕು ಹೀಗಿರಲಿ...

ಈ ಗಿಡ ನೆಡಿ : ಹೂವು ಮತ್ತು ಗಿಡಗಳಿಂದ ಮಾನಸಿಕ ಶಾಂತಿ ನೆಲೆಸುತ್ತದೆ. ಅವುಗಳಲ್ಲಿ ಮುಖ್ಯವಾದವು ಗುಲಾಬಿ, ಮಲ್ಲಿಗೆ ಗಿಡಗಳನ್ನು ಬೆಳೆಸಿ. 

ಚಪ್ಪಲ್ ಸ್ಟ್ಯಾಂಡ್ ಹೊರಗಿಡಿ: ಹೊರಗಿನಿಂದ ಒಳಗೆ ಬರುವಾಗ ಚಪ್ಪಲ್ ಒಳಗೆ ತರಬೇಡಿ, ಅದನ್ನು ಹೊರಗಿಡಿ. ಚಪ್ಪಲ್ ಜೊತೆ ಪೂರ್ತಿ ದಿನದ ಚಿಂತೆ, ಒತ್ತಡ ಬರುತ್ತದೆ. ಅಂದರೆ ನಿಮ್ಮ ಜೊತೆ ನೆಗೆಟಿವ್ ಎನರ್ಜಿಯೂ ಬರುತ್ತದೆ. ಆದುದರಿಂದ ಚಪ್ಪಲ್ ಹೊರಗೆ ಬಿಟ್ಟು ಒಳಗೆ ಬನ್ನಿ.