Asianet Suvarna News Asianet Suvarna News

ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಮಲಗೋ ದಿಕ್ಕು ಹೀಗಿರಲಿ...

ಯಾವ ದಿಕ್ಕಿಗೆ ತಲೆ ಹಾಕಿ ಮಲಗಿದ್ರೆ ಉತ್ತಮ ಎಂಬುದಕ್ಕೆ ಒಬ್ಬೊಬ್ಬರು ಒಂದೊಂದು ಕತೆ ಹೇಳುತ್ತಾರೆ. ಆದರೆ, ನಿಜವಾಗಿ ವಾಸ್ತು ಪ್ರಕಾರ ನೋಡಿದರೆ ಯಾವ ಯಾವ ದಿಕ್ಕಿಗೆ ತಲೆ ಹಾಕಿದರೆ ಏನೇನಾಗುತ್ತದೆ ಎಂಬುದರ ವಿವರ ಇಲ್ಲಿದೆ ನೋಡಿ.

Ideal sleeping direction according to Vaastu
Author
Bangalore, First Published May 11, 2019, 3:32 PM IST

ಇಡೀ ದಿನ ಕೆಲಸ ಮಾಡಿ ದಣಿದ ದೇಹ ಹಾಗೂ ಮನಸ್ಸಿಗೆ ಮಲಗಿದರೆ ಸಾಕಪ್ಪಾ ಎಂದಾಗುತ್ತದೆ. ಒಂದು ಉತ್ತಮ ನಿದ್ದೆ ಮರುದಿನಕ್ಕೆ ನಮ್ಮನ್ನು ರಿಚಾರ್ಜ್ ಮಾಡುತ್ತದೆ. ನಿದ್ದೆ ಸರಿಯಾಗಲಿಲ್ಲವೆಂದರೆ ಒತ್ತಡ, ಆತಂಕ, ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲು ಮೆದುಳು ಸಹಕಾರ ನೀಡದಿರುವುದು, ಕೆಲಸ ಮಾಡಲು ದೇಹ ಒಪ್ಪದಿರುವುದು ಸೇರಿ ಹಲವಾರು ಆದ್ವಾನಗಳಾಗುತ್ತವೆ. ಹೀಗಾಗಿ, ನಿದ್ದೆ ಚೆನ್ನಾಗಿ ಆಗುವುದು ಮುಖ್ಯ. ಅಷ್ಟೇ ಅಲ್ಲ, ಸರಿಯಾದ ದಿಕ್ಕಿನಲ್ಲಿ ತಲೆ ಇಟ್ಟು ಮಲಗುವುದು ಕೂಡಾ ಮುಖ್ಯ ಎನ್ನುತ್ತದೆ ವಾಸ್ತು. 

ಮಲಗೋದಕ್ಕೂ ದಿಕ್ಕಿಗೂ ಏನಪ್ಪಾ ಸಂಬಂಧ ಎಂದು ಕೇಳಿದರೆ ವಾಸ್ತು ಹೇಳುವುದು ಹೀಗೆ, ನಿದ್ದೆ ಸೇರಿದಂತೆ ನಮ್ಮ ಪ್ರತಿಯೊಂದು ಚಟುವಟಿಕೆಯೂ ಪಾಸಿಟಿವ್ ಇಲ್ಲವೇ ನೆಗೆಟಿವ್ ಎನರ್ಜಿಯನ್ನುಒಳ ತೆಗೆದುಕೊಳ್ಳುತ್ತಾ ಹೊರಬಿಡುತ್ತಲೂ ಇರುತ್ತದೆ. ಈ ಎನರ್ಜಿ ಫೀಲ್ಡ್‌ಗೂ ಭೂಮಿಯ ಮ್ಯಾಗ್ನೆಟಿಕ್ ಫೀಲ್ಡ್‌ಗೂ ಸಂಬಂಧ ಇರುವುದರಿಂದ ಮಲಗುವ ದಿಕ್ಕು ಮುಖ್ಯವಾಗುತ್ತದೆ ಎನ್ನುವುದು ವಾಸ್ತು ವ್ಯಾಖ್ಯಾನ.

ಮಗು ಓದ್ತಾ ಇಲ್ವಾ? ಹೀಗ್ ಮಾಡಿ ನೋಡಿ...

ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿದರೆ

ವಾಸ್ತು ಪ್ರಕಾರ ಭಾರತೀಯರಿಗೆ ಇದು ಮಲಗಲು ಸರಿಯಾದ ದಿಕ್ಕು. ಅದರಲ್ಲೂ ನೀವು ಉತ್ತರ ಗೋಳಾರ್ಧದಲ್ಲಿದ್ದರೆ ಈ ದಿಕ್ಕಿನಲ್ಲಿ ತಲೆ ಹಾಕಿ ನಿದ್ರಿಸಿದರೆ ಸಂತೋಷ, ಐಶ್ವರ್ಯ ನಿಮ್ಮದಾಗುತ್ತದೆ. ಜೊತೆಗೆ, ನಿದ್ರೆಯ ಗುಣಮಟ್ಟವೂ ಚೆನ್ನಾಗಿರುತ್ತದೆ. ದಕ್ಷಿಣ ದಿಕ್ಕು ಪಾಸಿಟಿವ್ ಎನರ್ಜಿಯೊಂದಿಗೆ ಬೆಸೆದುಕೊಂಡಿದ್ದು, ಈ ಕಡೆ ತಲೆ ಇಟ್ಟು ನಿದ್ರಿಸಿದರೆ, ಜೀವನದ ಬಗ್ಗೆ ನಂಬಿಕೆ ಹುಟ್ಟಿ ನೆಮ್ಮದಿ ಹೆಚ್ಚುತ್ತದೆ. ನೀವು ದಕ್ಷಿಣಾರ್ಧದಲ್ಲಿದ್ದರೆ ಆಗ ಈ ದಿಕ್ಕಿಗೆ ತಲೆ ಹಾಕಲೇಬಾರದು. 

ಉತ್ತರಕ್ಕೆ ತಲೆ ಹಾಕಿ ಮಲಗಿದರೆ

ಈ ದಿಕ್ಕಲ್ಲಿ ಮಲಗುವ ಅಭ್ಯಾಸವನ್ನು ಸಂಪೂರ್ಣವಾಗಿ ಬಿಡಬೇಕು. ಹೃದಯದಿಂದ ಮೆದುಳಿಗೆ ಹೋಗುವ ನರಗಳು ಸೂಕ್ಷ್ಮವಾಗಿದ್ದು ರಕ್ತದೊತ್ತಡವನ್ನು ಸರಿಯಾಗಿ ನಿಯಂತ್ರಿಸುವ ಶಕ್ತಿ ಕಡಿಮೆ ಇರುತ್ತದೆ. ಈ ದಿಕ್ಕಿನಲ್ಲಿ ತಲೆ ಹಾಕಿ ಮಲಗಿದಾಗ ರಕ್ತವು ಹೆಚ್ಚಾಗಿ ನಿಮ್ಮ ತಲೆಯತ್ತ ಹರಿಯಲಾರಂಭಿಸುತ್ತದೆ. ಏಕೆಂದರೆ ರಕ್ತದಲ್ಲಿ ಐರನ್ ಇರುವುದರಿಂದ ನಾರ್ಥ್ ಪೋಲ್‌ನಲ್ಲಿ ಹೆಚ್ಚು ಸ್ಟ್ರಾಂಗ್ ಆಗಿರುವ ಭೂಮಿಯ ಮ್ಯಾಗ್ನೆಟಿಕ್ ಫೀಲ್ಡ್ ಬ್ಲಡ್ಡನ್ನು ಮೇಲಿನ ದಿಕ್ಕಿಗೆ ಎಳೆಯಲಾರಂಭಿಸುತ್ತದೆ. ರಕ್ತದ ಹರಿವು ಅಚಾನಕ್ ಹೆಚ್ಚಾದಲ್ಲಿ ಹ್ಯಾಮೋರೇಜ್ ಇಲ್ಲವೇ ಸ್ಟ್ರೋಕ್ ಆಗುವ ಸಾಧ್ಯತೆಗಳಿರುತ್ತದೆ. ಅಲ್ಲದೆ, ಸರಿಯಾಗಿ ನಿದ್ದೆ ಬಾರದಿರುವುದು, ಕೆಟ್ಟ ಕನಸುಗಳು ಬೀಳುವುದು ಮುಂತಾದ ಸಮಸ್ಯೆಗಳು ಕಂಡುಬರುತ್ತವೆ. 

ಪೂರ್ವಕ್ಕೆ ತಲೆ ಹಾಕಿದರೆ

ವಾಸ್ತು ಪ್ರಕಾರ ಪೂರ್ವವು ಶಕ್ತಿಯ ಮೂಲವಾಗಿದ್ದು, ಮಲಗಲು ಉತ್ತಮ ದಿಕ್ಕಾಗಿದೆ. ಈ ದಿಕ್ಕಿನಲ್ಲಿ ಮಲಗಿದರೆ ಏಕಾಗ್ರತೆ ಹಾಗೂ ನೆನಪಿನ ಶಕ್ತಿ ಹೆಚ್ಚುವುದರಿಂದ ವಿದ್ಯಾರ್ಥಿಗಳು ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗುವ ಅಭ್ಯಾಸ ಮಾಡುವುದು ಒಳಿತು. ಪೂರ್ವ ದಿಕ್ಕಿಗೆ ತಲೆ ಇಟ್ಟು ನಿದ್ರಿಸಿದರೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಸಹಾ ನೀಗುತ್ತವೆ. 

ದುಡ್ಡು ಬೇಕಂದ್ರೆ ಜೇಬಲ್ಲಿ ಇವನ್ನ ಇಡ್ಬೇಡಿ...

ಪಶ್ಚಿಮಕ್ಕೆ ತಲೆ ಹಾಕಿದರೆ

ಇದರಿಂದ ಆರೋಗ್ಯಕ್ಕೆ ಪೂರ್ವ ಹಾಗೂ ದಕ್ಷಿಣ ದಿಕ್ಕಿನಷ್ಚು ಲಾಭಗಳಿಲ್ಲವಾದರೂ ಯಶಸ್ಸು ತಂದುಕೊಡುವ ಶಕ್ತಿ ಈ ದಿಕ್ಕಿಗಿದೆ. ನಿಮ್ಮ ಜೀವನದ ನೆಗೆಟಿವ್ ಎನರ್ಜಿಗಳಿಂದ ದೂರವಿಡುತ್ತದೆ.

Follow Us:
Download App:
  • android
  • ios