ಮಸಾಲ ಪದಾರ್ಥವಾದ ಜಾಯಿಕಾಯಿ ಪರಿಮಳಕ್ಕೆ ಪ್ರಸಿದ್ಧ. ಇಂಡೋನೇಷ್ಯಾ ಮೂಲದ ಈ ಪದಾರ್ಥವನ್ನು ಸಿಹಿ ತಿಂಡಿಗಳನ್ನು ಮಾಡಲು ಬಳಸಲಾಗುತ್ತದೆ. ಆಹಾರದಲ್ಲಿ ಒಂದು ಚಿಟಿಕೆ ಜಾಯಿಕಾಯಿ ಪುಡಿ ಹಾಕಿದರೆ ಆಹಾರದ ಸ್ವಾದ ಹೆಚ್ಚುತ್ತದೆ. ಇದನ್ನು ಕೇವಲ ಆಹಾರಕ್ಕೆ ಮಾತ್ರವಲ್ಲ ಬದಲಾಗಿ ಸೌಂದರ್ಯ ಹೆಚ್ಚಿಸಲೂ ಬಳಸಲಾಗುತ್ತದೆ. ಜಾಯಿಕಾಯಿಯಿಂದ ಸ್ಕಿನ್‌ಗೆ ಗ್ಲೋ ಸಹ ಹೆಚ್ಚಿಸಿಕೊಳ್ಳಬಹುದು. ಹೇಗೆ?

ಕಲೆ ನಿವಾರಣೆ: ಜಾಯಿಕಾಯಿ ಫೇಸ್‌ಪ್ಯಾಕ್ ಡಾರ್ಕ್ ಸರ್ಕಲ್, ಕಪ್ಪು ಕಲೆ ನಿವಾರಿಸುತ್ತದೆ. ಜಾಯಿಕಾಯಿ ಪುಡಿ, ನಿಂಬೆ ರಸ ಮತ್ತು ಮೊಸರು ಈ ಮೂರನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ, ಹತ್ತು ನಿಮಿಷದ ನಂತರ ತೊಳೆಯಿರಿ. ಇದನ್ನು ವಾರದಲ್ಲಿ ಮೂರು ಬಾರಿ ಮಾಡಿ. 

ತ್ವಚೆ ಸೌಂದರ್ಯ ಉದ್ಧಾರಕ್ಕೆ ಉದ್ದೆಂಬ ಮದ್ದು....

ಸಾಫ್ಟ್ ತ್ವಚೆಗೆ: ಜಾಯಿಕಾಯಿ ಚರ್ಮದ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಅದಕ್ಕಾಗಿ ಜೇನು, ಬೇಕಿಂಗ್ ಸೋಡಾ, ಲವಂಗದ ಎಣ್ಣೆ, ಜಾಯಿಕಾಯಿ ಪುಡಿ ಮತ್ತು ನಿಂಬೆ ರಸ ಮಿಕ್ಸ್ ಮಾಡಿ ಪೇಸ್ಟ್ ಮಾಡಿ. ನಂತರ ಇದನ್ನು ಮುಖದ ಮೇಲೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ಸ್ಕಿನ್ ಸಾಫ್ಟ್ ಆಗುತ್ತದೆ. ಓಪನ್ ಆಗಿರುವ ಫೋರ್ಸ್ ಮುಚ್ಚುತ್ತದೆ. ನಂತರ ತಣ್ಣನೆ ನೀರಿನಿಂದ ವಾಷ್ ಮಾಡಿ. 

ಆಯ್ಲಿ ತ್ವಚೆಗೆ: ಒಂದು ವೇಳೆ ನಿಮ್ಮದು ಆಯ್ಲಿ ತ್ವಚೆಯಾಗಿದ್ದರೆ, ಸ್ಕಿನ್ ಸಮಸ್ಯೆ ಹೆಚ್ಚಾಗುತ್ತದೆ. ಆಯ್ಲಿ ಸ್ಕಿನ್‌ನಿಂದ ಮುಕ್ತರಾಗಲು ಜಾಯಿಕಾಯಿ ಪುಡಿ ಮತ್ತು ಜೇನು ಮಿಕ್ಸ್ ಮಾಡಿ ಹಚ್ಚಿ. ಹತ್ತು ನಿಮಿಷ ಹಾಗೆ ಬಿಡಿ. ಜೇನು ಮತ್ತು ಜಾಯಿಕಾಯಿ ಎರಡರಲ್ಲೂ ಆ್ಯಂಟಿ ಬ್ಯಾಕ್ಟಿರಿಯಲ್ ಮತ್ತು ಆಂಟಿ ಇಂಪ್ಲಾಮೆಟೋರಿ ಅಂಶ ಇರುತ್ತದೆ. ಇವು ತ್ವಚೆಯಲ್ಲಿ ಹೆಚ್ಚಿದ ಎಣ್ಣೆ ಅಂಶವನ್ನು ನಿವಾರಿಸುತ್ತದೆ. ಮೊಡವೆ ಸಮಸ್ಯೆಗೂ ಗುಡ್ ಬೈ ಹೇಳುತ್ತದೆ. 

ಉತ್ತಮ ತ್ವಚೆ: ಜಾಯಿಕಾಯಿಯಿಂದ ಸದಾ ಎಂಗ್ ಆಗಿರುವ ತ್ವಚೆ ನಿಮ್ಮದಾಗಿಸುತ್ತದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಮತ್ತು ಆಂಟಿ ಏಜಿಂಗ್ ತತ್ವ ಇರುತ್ತದೆ. ಇದು ತ್ವಚೆಯ ಡ್ಯಾಮೇಜನ್ನು ಕಡಿಮೆ ಮಾಡುತ್ತದೆ. ಚಿರ ಯೌವ್ವನ ನಿಮ್ಮದಾಗಿಸುತ್ತದೆ. ಅದಕ್ಕಾಗಿ ಜಾಯಿಕಾಯಿ ಪುಡಿ, ಯೋಗರ್ಟ್ ಮತ್ತು ಜೇನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಹತ್ತು ನಿಮಿಷದ ನಂತರ ತೊಳೆಯಿರಿ.